ನಿರೀಕ್ಷಿಸಿ: 40 ಸಾವಿರ ರು.ನ ಹೋಂಡಾ 100ಸಿಸಿ ಬೈಕ್

"2013ರ ಆರಂಭದಲ್ಲಿ ಹೊಸ 100ಸಿಸಿ ಬೈಕ್ ರಸ್ತೆಗಿಳಿಯಲಿದೆ" ಎಂದು ಹೋಂಡಾ ಮೋಟರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಮಾರುಕಟ್ಟೆ ಮುಖ್ಯಸ್ಥ ನರೇಶ್ ರಂಜನ್ ಹೇಳಿದ್ದಾರೆ. ಇದರ ದರ 40-45 ಸಾವಿರ ರು. ಇರುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಅವರು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಕಂಪನಿಯು ಭಾರತದ ಹೀರೋ ಗ್ರೂಪ್ ನೊಂದಿಗೆ ಬಹುಕಾಲದ ಮೈತ್ರಿಹೊಂದಿದ್ದರೂ 100ಸಿಸಿ ಬೈಕ್ ಹೊರತಂದಿರಲಿಲ್ಲ. ಇದೀಗ ಹೋಂಡಾ 100 ಸಿಸಿ ಮಾರುಕಟ್ಟೆ ಮೇಲೆ ಕಣ್ಣುಹಾಕಿದ್ದು ಹೀರೋ ಮೋಟೊಕಾರ್ಪ್ ಗೆ ಹೊಸ ರೀತಿಯಲ್ಲಿ ಸೆಡ್ಡು ಹೊಡೆಯುವ ತವಕದಲ್ಲಿದೆ.
ಹೋಂಡಾ ಕಂಪನಿಯು ಈಗ ಸಿಬಿ ಟ್ವಿಸ್ಟರ್ ಮತ್ತು ಯುನಿಕಾರ್ನ್ ಗಳನ್ನು ಕಮ್ಯೂಟರ್ ಬೈಕ್ ಸೆಗ್ಮೆಂಟಿನಲ್ಲಿ ಮಾರಾಟ ಮಾಡುತ್ತಿದೆ. ಕಂಪನಿಯು ದೇಶದಲ್ಲಿರುವ ಮೂರು ಪ್ರಮುಖ ಬೈಕ್ ಕಂಪನಿಗಳಲ್ಲಿ ಒಂದಾಗಿದೆ. ಕಂಪನಿಯು ಭಾರತದಲ್ಲಿ ಉತ್ಪಾದನೆ ಹೆಚ್ಚಿಸಲು ಮತ್ತು ಹೊಸ ಘಟಕ ಸ್ಥಾಪಿಸಲು ಯೋಜಿಸಿದೆ.


Click it and Unblock the Notifications