ಬಜಾಜ್ ಪಲ್ಸರ್ ಡೌನ್ ಪೇಮೆಂಟ್ ಕೇವಲ 14,999 ರು

ಈ ಆಫರನ್ನು ಬಜಾಜ್ ಸೆಪ್ಟಂಬರ್ 21ರವರೆಗೆ ನೀಡಲಿದೆಯಂತೆ. ಈ ಸ್ಕೀಮ್ ವಿಶೇಷವೆಂದರೆ ಪಲ್ಸರ್ 220 ಡ್ಯೂಯಲ್ ಕಲರ್ ಬೈಕಿಗೂ ಈ ನೀತಿ ಅನ್ವಯವಾಗುತ್ತೆ. ಕಂಪನಿಯು ಇತ್ತೀಚೆಗೆ ಹೊರತಂದ ಪಲ್ಸರ್ 220 ಅತ್ಯುತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ ಎಂದು ಡೀಲರುಗಳು ಅಭಿಪ್ರಾಯಪಡುತ್ತಾರೆ.
ಇದೀಗ ಎಂಟ್ರಿ ಲೆವೆಲ್ ಪಲ್ಸರ್ 150 ಬೈಕ್ 14,999 ರು. ಡೌನ್ ಪೇಮೆಂಟಿಗೆ ದೊರಕುತ್ತದೆ. ಪಲ್ಸರ್ 180 ಆವೃತ್ತಿಗೆ 15,999 ರು ಮತ್ತು ಡ್ಯೂಯಲ್ ಟೋನ್ ಪಲ್ಸರ್ 220 ಪಲ್ಸರಿಗೆ ಕ್ರಮವಾಗಿ 15,999 ರು. ಮತ್ತು 17,999 ರು. ನೀಡಬೇಕಿದೆ.
ಪಲ್ಸರ್ ಬೇಡ ಅವೆಂಜರ್ ಬೈಕಿನ ಡೌನ್ ಪೇಮೆಂಟ್ ಎಷ್ಟು ಎಂದು ಕೇಳುವಿರಾ? ಬುಲೆಟ್ಟಿನಂತೆ ಕಾಣುವ ಆ ಕುಳ್ಳ ಅವೆಂಜರ್ 220 ಡೌನ್ ಪೇಮೆಂಟ್ ದರ ಕೂಡ ಕಡಿಮೆಯಾಗಿದೆ. ಅವೆಂಜರ್ 220 ಬೈಕಿಗೆ 16,999 ರುಪಾಯಿ ಡೌನ್ ಪೇಮೆಂಟ್ ನೀಡಬೇಕು. ಅಂದಹಾಗೇ ಸಾಲ ತೆಗೆಯಲು ನಮ್ಮದೇ ಫೈನಾನ್ಸ್ ಬಜಾಜ್ ಅಲೆಯನ್ಸ್ ಇದೆ ಎಂದು ಕಂಪನಿ ಪ್ರಕಟಿಸಿದೆ.
ಬಜಾಜ್ ಪಲ್ಸರ್ ದೇಶದ ನಂಬರ್ ಒನ್ ಸ್ಪೋರ್ಟ್ಸ್ ಬೈಕಾಗಿದೆ. ಒಂದು ವದಂತಿ ಪ್ರಕಾರ ಕಂಪನಿಯು ಇನ್ನಷ್ಟು ಶಕ್ತಿಶಾಲಿ ಪಲ್ಸರ್ ಆವೃತ್ತಿಗಳನ್ನು ಅಂದರೆ 250 ಸಿಸಿ ಬೈಕನ್ನು ಹೊರತರಲಿದೆಯಂತೆ.(ದಟ್ಸ್ ಕನ್ನಡ ವಾರ್ತೆ)


Click it and Unblock the Notifications








