ಅಂತರ್ಜಾಲದಲ್ಲಿ ಸೋರಿದ ಯಮಹಾ ಆರ್1 ಬೈಕ್ ಚಿತ್ರ

ಈ ಚಿತ್ರ ನೋಡಿದಾಗ ಒಂದು ವಿಷಯ ಸ್ಪಷ್ಟವಾಗುತ್ತದೆ. ಇದು ಕಂಪನಿಯ ಇತರ ಬೈಕುಗಳಿಗೆ ಹೋಲಿಸಿದರೆ ವಿನ್ಯಾಸದಲ್ಲಿ ಸಂಪೂರ್ಣವಾಗಿ ಭಿನ್ನವಾಗಿ ಗೋಚರಿಸುತ್ತದೆ. ಆದರೆ ಯಮಹಾ ಪ್ರತಿಸ್ಪರ್ಧಿ ಕಂಪನಿಗಳು ಭಯಪಡಬೇಕಿಲ್ಲ. ಯಾಕೆಂದರೆ ಇದು ವಿನ್ಯಾಸ, ಬಣ್ಣ ಮತ್ತು ಪ್ರಸಾಧನ ಅಲಂಕಾರದಿಂದ ಮಾತ್ರ ಭಿನ್ನ ಬೈಕಾಗಿದೆ.
ಸದ್ಯ ರಸ್ತೆಯಲ್ಲಿರುವ ಆರ್1 ಬೈಕಿಗೂ 2012ರ ಆರ್1 ಬೈಕಿಗೂ ಅಂತಹ ಪ್ರಮುಖ ವ್ಯತ್ಯಾಸಗಳಿಲ್ಲ. ಆದರೆ ಇದು ಕೇವಲ ಕಂಪನಿಯ ವಾರ್ಷಿಕೋತ್ಸವದ ಆವೃತ್ತಿಯಾಗಿದೆ. ಕಂಪನಿಯು ಕೇವಲ 2 ಸಾವಿರ ಆರ್1 ವಿಶೇಷ ಆವೃತ್ತಿಗಳನ್ನು ಹೊರತರಲಿದೆ. ಇದರ ದರದ ಕುರಿತು ಯಾವುದೇ ಮಾಹಿತಿ ಲೀಕ್ ಆಗಿಲ್ಲ.


Click it and Unblock the Notifications








