ಯಮಹಾ ಅಗ್ಗದ ಬೈಕ್, ರೈಡಿಗೆ ರೆಡಿಯಾಗಿ

Yamaha Crux
ಜಪಾನಿನ ದ್ವಿಚಕ್ರವಾಹನ ತಯಾರಿಕಾ ಕಂಪನಿ ಯಮಹಾ ಕಣ್ಣು ಭಾರತದ ಗ್ರಾಮೀಣ ಮಾರುಕಟ್ಟೆಯತ್ತ ಬಿದ್ದಿದೆ. ಈಗಾಗಲೇ ನಗರ ಪ್ರದೇಶಗಳಲ್ಲಿ ಪ್ರಾಬಲ್ಯ ಸ್ಥಾಪಿಸಿರುವ ಕಂಪನಿಯು ಇದೀಗ ಅಗ್ಗದ ಬೈಕೊಂದನ್ನು ಹೊರತರಲಿದೆ. ಇದು ಗ್ರಾಮೀಣ ರಸ್ತೆಗೆ ಪೂರಕವಾಗಿರಲಿಯಂತೆ.

"ನಗರಗಳಲ್ಲಿ ನಮಗೆ ಅತ್ಯುತ್ತಮ ಮಾರುಕಟ್ಟೆಯಿದೆ. ಆದರೆ ಇಲ್ಲಿ ನಮಗೆ ಪ್ರೀಮಿಯಂ ಬೈಕ್ ಕಂಪನಿಯೆಂಬ ಇಮೇಜ್ ಇದೆ. ಇದೀಗ ನಾವು ಗ್ರಾಮೀಣ ಮಾರುಕಟ್ಟೆಗೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಿದ್ದೇವೆ. ಗ್ರಾಮೀಣ ಜನರ ಬಜೆಟಿಗೆ ತಕ್ಕಂತಹ ಬೈಕೊಂದನ್ನು ಹೊರತರಲಿದ್ದೇವೆ" ಎಂದು ಯಮಹಾ ಮೋಟರ್ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

2010ರಲ್ಲಿ ಯಮಹಾ ಕಂಪನಿಯು ದೇಶದಲ್ಲಿ 3.8 ಲಕ್ಷ ಬೈಕ್ ಮಾರಾಟ ಮಾಡಿತ್ತು. ಈ ವರ್ಷ 5.2 ಲಕ್ಷಕ್ಕಿಂತ ಹೆಚ್ಚು ಬೈಕ್ ಮಾರಾಟ ಮಾಡುವ ಗುರಿಯನ್ನು ಹೊಂದಿದೆ. ಕಂಪನಿಯು ಈಗ ಎಫ್ ಝಡ್, ಫೇಝರ್, ಆರ್15, ಕ್ರಷ್, ವೈಬಿಆರ್ ಮತ್ತು ಎಸ್ ಝಡ್ ಸೀರಿಸ್ ಬೈಕ್ ಮಾರಾಟ ಮಾಡುತ್ತಿದೆ.

ಇದೀಗ ಗ್ರಾಮೀಣ ಪ್ರದೇಶಗಳಲ್ಲಿ ವಾಹನಗಳಿಗೆ ಅತ್ಯಧಿಕ ಬೇಡಿಕೆ ಕಂಡುಬರುತ್ತಿದೆ. ಕಾರು ಕಂಪನಿಗಳು ಕೂಡ ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಅಸ್ಥೆ ವಹಿಸುತ್ತಿವೆ. ಯಮಹಾ ಇಂಡಿಯಾ ಒಟ್ಟಾರೆ ವಾಹನ ಮಾರಾಟದಲ್ಲಿ ಶೇಕಡ 40ರಷ್ಟು ಗ್ರಾಮೀಣ ಮಾರುಕಟ್ಟೆಯ ಕೊಡುಗೆಯಾಗಿದೆ. ಇಲ್ಲಿ ಕಡಿಮೆ ದರದ ಬೈಕುಗಳಿಗೆ ಹೆಚ್ಚಿನ ಬೇಡಿಕೆಯಿದೆ.

"ಈಗ ಕಂಪನಿಯು 400 ಡೀಲರುಗಳನ್ನು ಹೊಂದಿದ್ದೇವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಡೀಲರ್ಷಿಪ್ ಕೇಂದ್ರಗಳನ್ನು ತೆರೆಯಲಿದ್ದೇವೆ. ಗ್ರಾಮೀಣ ಮಾರುಕಟ್ಟೆಯಲ್ಲಿ ಯಮಹಾ ಕ್ರಷ್ ಗೆ ಹೆಚ್ಚಿನ ಬೇಡಿಕೆಯಿದೆ. ವೈಬಿಆರ್110 ಬೈಕ್ ಕೂಡ ಒಟ್ಟಾರೆ ಮಾರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ" ಎಂದು ಯಮಹಾ ಇಂಡಿಯಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದೀಗ ಯಮಹಾ ಕಂಪನಿಯು ಕ್ರಷ್ ಬೈಕಿನ ಹೊಸ ಆವೃತ್ತಿ ಹೊರತರಲಿದೆ. ಇದನ್ನು ಗ್ರಾಮೀಣ ಮಾರುಕಟ್ಟೆಗೆ ತಕ್ಕಂತೆ ಪರಿಷ್ಕರಿಸಲು ಕಂಪನಿ ನಿರ್ಧರಿಸಿದೆ. ಇತ್ತೀಚೆಗೆ ಬಜಾಜ್ ಕೂಡ ಬಾಕ್ಸರ್ 150 ಸಿಸಿ ಬೈಕ್ ಹೊರತಂದಿತ್ತು. ಹೆಚ್ಚಿನ ಬೈಕ್ ಕಂಪನಿಗಳು ಗ್ರಾಮೀಣ ರಸ್ತೆಯಲ್ಲಿ ಧೂಳೆಬ್ಬಿಸಲು ಹೆಚ್ಚಿನ ಅಸ್ಥೆ ವಹಿಸುತ್ತಿವೆ.

More from DriveSpark

Article Published On: Tuesday, September 20, 2011, 11:51 [IST]
English summary
Yamaha to launch cheaper Bikes for rural market. Yamaha is planning to launch newer versions of the Crux with some minor cosmetic changes just to attract rural buyers. Yamaha has said the Crux has a strong demand in the rural markets.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+