ಬಜಾಜ್ ಆಟೋ ಮಾರಾಟ ಶೇ. 18ರಷ್ಟು ಹೆಚ್ಚಳ

ಇದೇ ಸಮಯದಲ್ಲಿ ಕಂಪನಿಯು 3,71,208 ಯುನಿಟ್ ದ್ವಿಚಕ್ರ ವಾಹನ ಮಾರಾಟ ಮಾಡಿದೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಕಂಪನಿಯು 3,14,515 ಯುನಿಟ್ ದ್ವಿಚಕ್ರ ವಾಹನ ಮಾರಾಟ ಮಾಡಿತ್ತು. ಹೀಗಾಗಿ ದ್ವಿಚಕ್ರವಾಹನ ಮಾರಾಟ ಶೇ. 8ರಷ್ಟು ಏರಿಕೆ ಕಂಡಿದೆ.
ಇದೇ ಅವಧಿಯಲ್ಲಿ ಕಂಪನಿಯ ವಾಣಿಜ್ಯ ವಾಹನ ಮಾರಾಟ 46,478 ಯುನಿಟ್ ಗೆ ತಲುಪಿದೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳ 46,478 38,254 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ವಾಣಿಜ್ಯ ಉದ್ದೇಶದ ವಾಹನ ಮಾರಾಟ ಶೇಕಡ 21ರಷ್ಟು ಏರಿಕೆ ಕಂಡಿದೆ.
ಇದೇ ಅವಧಿಯಲ್ಲಿ ಕಂಪನಿಯು ಒಟ್ಟಾರೆ 1,41,913 ವಾಹನ ರಫ್ತು ಮಾಡಿದ್ದು, ಕಳೆದ ವರ್ಷದ ಸೆಪ್ಟೆಂಬರ್ ನ 1,01,960 ಯುನಿಟ್ ಗೆ ಹೋಲಿಸಿದರೆ ರಫ್ತು ಶೇಕಡ 39ರಷ್ಟು ಹೆಚ್ಚಾಗಿದೆ.


Click it and Unblock the Notifications








