ಬಂತು ಬಜಾಜ್ ಬಾಕ್ಸರ್, ದರ 43 ಸಾವಿರ ರುಪಾಯಿ

ಬಹುನಿರೀಕ್ಷಿತ 150 ಸಿಸಿಯ ಬಾಕ್ಸರ್ ಬೈಕನ್ನು ಬಜಾಜ್ ಮೋಟರ್ಸ್ ಭಾರತದ ರಸ್ತೆಗೆ ಪರಿಚಯಿಸಿದೆ. ನೂತನ ಬಾಕ್ಸರ್ ಆವೃತ್ತಿಯ ಹೆಸರು ಬಾಕ್ಸರ್ ಬಿಎಂ150 ಎಂದಾಗಿದ್ದು ಪುಣೆ ಎಕ್ಸ್ ಶೋರೂಂ ದರ 43 ಸಾವಿರ ರು. ಆಗಿದೆ. ಆನ್ ರೋಡ್ ದರ 48,700 ರುಪಾಯಿ ಆಗಿದೆ.

ನೂತನ ಬಜಾಜ್ ಬಾಕ್ಸರ್ ಬಿಎಂ150 ಅಧಿಕೃತ ಬಜಾಜ್ ಆಟೋ ಡೀಲರ್ಷಿಪ್ ಮಳಿಗೆಗಳಲ್ಲಿ ದೊರಕಲಿದೆ. ಗಮನಾರ್ಹ ವಿಷಯವೆಂದರೆ ನೂತನ ಬಾಕ್ಸರ್ ದರ ಬಜಾಜ್ ಡಿಸ್ಕವರ್ ಬೈಕಿಗಿಂತ ಸುಮಾರು 7 ಸಾವಿರ ರು. ಅಗ್ಗವಾಗಿದೆ. ನೂತನ ಬಾಕ್ಸರ್ ಬೈಕಿನಲ್ಲಿ ಬಜಾಜ್ ಲೊಗೊ ಇರುವುದಿಲ್ಲ. ಇದು ಬಾಕ್ಸರ್ ಬ್ರಾಂಡ್ ನಲ್ಲಿಯೇ ಜನಪ್ರಿಯವಾಗಲು ಹೊರಟಿದೆ.

ಗ್ರಾಮೀಣ ಭಾರತದ ಜನರನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ನೂತನ ಬಾಕ್ಸರ್ ಬಿಎಂ150 ಬೈಕನ್ನು ಹೊರತಂದಿದೆ. ಕಂಪನಿಯು ಪ್ರಮುಖವಾಗಿ ಗ್ರಾಮೀಣ ಭಾಗದ ರಸ್ತೆಯನ್ನು ಗಮನದಲ್ಲಿಟ್ಟುಕೊಂಡು ಬೈಕುಗಳನ್ನು ಹೊರತರುತ್ತಿದೆ. ನೂತನ ಬಾಕ್ಸರ್ ವಿನ್ಯಾಸ ಕೂಡ ಗ್ರಾಮೀಣ ಜನತೆಗೆ ಇಷ್ಟವಾಗುವಂತೆ ಇದೆ.

150ಸಿಸಿ ಇರುವುದರಿಂದ ಇದು ಹೆಚ್ಚು ಭಾರ ಕೂಡ ಹೊರಲಿದೆ. ಇದು ಕೃಷಿಕರಿಗೂ ನೆರವಾಗಲಿದೆ. ಸೀಟಿನ ಗಾತ್ರ ಕೂಡ ಉದ್ದವಾಗಿದೆ. ಗಟ್ಟಿಮುಟ್ಟಾದ ಚಾಸೀಸ್, ಪವರ್ ಫುಲ್ ಹೆಡ್ ಲೈಟ್ಸ್ ಇತ್ಯಾದಿ ಹಲವು ಫೀಚರ್ ಗಳಿವೆ. ನೂತನ ಬಾಕ್ಸರ್ ಎಂಜಿನ್ 11-12ರಷ್ಟು ಹಾರ್ಸ್ ಪವರ್ ನೀಡುತ್ತದೆ. ಹಳ್ಳಿಯ ಹಳ್ಳದಿಣ್ಣೆಗಳಿರುವ ಮಡ್ ರಸ್ತೆಗೂ ಈ ಬೈಕ್ ಸೂಕ್ತವಾಗಿದೆ ಎನ್ನಲಾಗಿದೆ.

More from DriveSpark

Article Published On: Wednesday, August 24, 2011, 15:18 [IST]
English summary
Bajaj Motors launched 150cc Boxer variant. Boxer BM150 approx ex-showroom price Rs 43,000. On Road Price approx Rs 48,700.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+