ಇಲ್ಲಿದೆ ಸಾರ್ ಹೋಂಡಾ ಸಿಬಿಆರ್250ಆರ್ ಫುಲ್ ರಿವ್ಯೂ

ಸಂತೋಷದ ಸುದ್ದಿಯೆಂದರೆ ಈಗ ಈ ಬೈಕ್ ಈಗ ಭಾರತಕ್ಕೂ ಬಂದಿದೆ. ದೇಶದ ಜನರಲ್ಲೀಗ ಸ್ಪೋರ್ಟ್ಸ್ ಬೈಕ್ ಕ್ರೇಝ್ ಕೂಡ ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ಇಲ್ಲಿಗೆ ಬಂದ ಸಿಬಿಆರ್250ಆರ್ ಯಮಹಾದ ಆರ್15ನೊಂದಿಗೆ ಪೈಪೋಟಿ ನಡೆಸುವ ನಿರೀಕ್ಷೆಯಿದೆ.
ಸಿಬಿಆರ್250ಆರ್ ಅಂದ್ರೆ ಅಲ್ಟಿಮೆಟ್ ಬೈಕ್. ಯಾಕೆಂದ್ರೆ ಇದರಲ್ಲಿ ನೂತನ ತಂತ್ರಜ್ಞಾನ, ಹೊಸ ಫ್ಯೂಯಲ್ ಇಂಜೆಕ್ಷನ್ ಸಿಸ್ಟಮ್, ಆಕರ್ಷಕ ಮೈಲೇಜ್, ಆರಾಮದಾಯಕತೆ ಹೀಗೆ ನಿಮಗೆ ಏನೆಲ್ಲ ಬೇಕೋ ಎಲ್ಲವೂ ಇದೆ.
ನೂತನ ಬೈಕ್ 249.6 ಸಿಸಿ ಎಂಜಿನ್ ಹೊಂದಿದ್ದು ಎಂಟುವರೆ ಸಾವಿರ ಆರ್ ಪಿಎಂಗೆ 25 ಹಾರ್ಸ್ ಪವರ್ ನೀಡುತ್ತದೆ. ಈ ಬೈಕ್ 6-ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್ ಹೊಂದಿದ್ದು ವೆಟ್ ಕ್ಲಚ್ ಮಲ್ಟಿ ಡಿಸ್ಕ್ ಹೊಂದಿದೆ. ಇದರ ಎಂಜಿನ್ ಆಯಿಲ್ ಕೂಲಿಂಗ್ ವ್ಯವಸ್ಥೆಯೊಂದಿಗೆ 4 ಸ್ಟ್ರೋಕ್ 1 ಸಿಲಿಂಡರ್ ಹೊಂದಿದೆ.
ಸಿಬಿಆರ್250ಆರ್ ಎರಡು ಆವೃತ್ತಿಗಳಲ್ಲಿ ದೊರಕುತ್ತಿದೆ. ಒಂದು ಎಬಿಎಸ್ ಇರುವ ಬೈಕ್. ಮತ್ತೊಂದು ಎಬಿಎಸ್ ಇಲ್ಲದ ಆವೃತ್ತಿ. ಇದು ಭಾರತದ ರಸ್ತೆಗಿಳಿದ ಎಬಿಎಸ್ ಸಿಸ್ಟಮ್ ಅಳವಡಿಸಿದ ಮೊದಲ ಬೈಕ್ ಕೂಡ ಹೌದು. ಹೋಂಡಾ ಸಿಬಿಆರ್250ಆರ್ ಗೆ ಬೆಂಗಳೂರು ಸೇರಿದಂತೆ ದೇಶದ ಹೆಚ್ಚಿನ ಶೋರೂಂ ದರ ಸುಮಾರು 1.43 ಲಕ್ಷ ರೂಪಾಯಿ. ಎಬಿಎಸ್ ಇರುವ ಸಿಬಿಆರ್250ಆರ್ ಗೆ 1.68 ಲಕ್ಷ ರೂಪಾಯಿ.
ಏನೆಲ್ಲ ವಿಶೇಷತೆಯಿದೆ?
* ಆಂಟಿ ಬ್ರೇಕಿಂಗ್ ಸಿಸ್ಟಮ್ ಅಳವಡಿಸಿದ ಮೊದಲ ಬೈಕ್
* ಆರಾಮದಾಯಕತೆ ಮತ್ತು ಸುಲಭವಾಗಿ ರೈಡ್ ಮಾಡಲು ಪೂರಕವಾಗಿರುವ ಕಾರ್ಯಕ್ಷಮತೆ.
* ಸ್ಲಿಮ್ ಮತ್ತು ಹಗುರವಾಗಿರುವ 4 ಸ್ಟ್ರೋಕ್ ಎಂಜಿನ್, ಕಾಂಪ್ಯಾಕ್ಟ್ ವಿನ್ಯಾಸ.
* ವೈ ಆಕಾರದ ಹೆಡ್ ಲೈಟ್ ನೆರವಿನಿಂದ ರಸ್ತೆಯನ್ನು ಸ್ಪಷ್ಟವಾಗಿ ನೋಡಬಹುದು.
* ಆಕರ್ಷಕವಾಗಿರುವ ಕಡಿಮೆ ಸದ್ದು ಮಾಡುವ ವಿಶೇಷ ಸೈಲೆನ್ಸರ್.
* ಎಚ್ ಆಕಾರವಿರುವಲ್ಲಿ 5 ಸ್ಪೋಕ್ ಅಲ್ಯುಮಿನಿಯಂ ವೀಲ್ ಗಳು.
* ಸ್ಪೋರ್ಟಿ ಫೀಚರ್ ಗಳಿಂದ ಸ್ಪೋರ್ಟಿ ಲುಕ್.
ಸಿಬಿಆರ್ 250 ಆರ್ ಪ್ರೋಫೈಲ್
* ಕಂಪನಿಯ ಹೆಸರು: ಹೋಂಡಾ
* ಬೈಕ್ ಹೆಸರು: ಸಿಬಿಆರ್ 250 ಆರ್
* ವಿಭಾಗ: ಸ್ಪೋರ್ಟ್ ಬೈಕ್
* ಇಂಧನ: ಪೆಟ್ರೊಲ್
* ಸಿಟಿ ಮೈಲೇಜ್: ಪ್ರತಿಲೀಟರ್ ಗೆ 25 ಕಿ.ಮೀ.
* ಹೆದ್ದಾರಿ ಮೈಲೇಜ್: ಪ್ರತಿಲೀಟರ್ ಗೆ 35 ಕಿ.ಮೀ.
* ದರ: ಸುಮಾರು 1.43 ಲಕ್ಷ ರು.
* ಎಬಿಎಸ್ ಸೌಲಭ್ಯವೂ ಇದೆ.
ಎಂಜಿನ್ ಬಗ್ಗೆ
* 249.6 ಸಿಸಿ, ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್ ಎಂಜಿನ್
* 8,500 ಆರ್ ಪಿಎಂಗೆ ಗರಿಷ್ಠ 25 ಹಾರ್ಸ್ ಪವರ್
* 7 ಸಾವಿರ ಆರ್ ಪಿಎಂಗೆ ಗರಿಷ್ಠ 23 ಎನ್ ಎಂ ಟಾರ್ಕ್ ಪವರ್
* 6-ಸ್ಪೀಡ್ ಮ್ಯಾನುಯಲ್ ಗೇರ್
* ಮಲ್ಟಿಪಲ್ ಡಿಸ್ಕ್
* ಸಿಂಗಲ್ ಸಿಲಿಂಡರ್ ನಲ್ಲಿ ನಾಲ್ಕು ಕವಾಟ
* ಲಿಕ್ವಿಡ್ ಕೂಲಿಂಗ್ ಸಿಸ್ಟಮ್


Click it and Unblock the Notifications








