ವಿದ್ಯಾರ್ಥಿಗಳ ಸಾಧನೆ: 110 ಕಿ. ಮೀ. ಮೈಲೇಜ್ ಬೈಕ್

ಬೆಂಗಳೂರಿನ ಎಂಎಸ್ ರಾಮಯ್ಯ ಇನ್ಶೂಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳಾದ ನವೀನ್ ಕುಮಾರ್, ಟೋನಿ ಪಾಲ್, ಸಂಜಯ್ ಭೂಷನ್, ನಂದೀಮ್ ಅನ್ವರ್ ಡೀಸಲ್ ಬೈಕೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಬೈಕ್ ಪ್ರತಿ ಲೀಟರ್ ಗೆ ಸುಮಾರು 110 ಕಿ.ಮೀ. ಮೈಲೇಜ್ ನೀಡುತ್ತಿದೆ. ಡಾ. ಎಸ್. ವಿ. ಪ್ರಕಾಶ ಮಾರ್ಗದರ್ಶನದಲ್ಲಿ ಈ ಬೈಕ್ ಅಭಿವೃದ್ಧಿಪಡಿಸಲು ಇವರು ತೆಗೆದುಕೊಂಡ ಸಮಯ ಎರಡು ವರ್ಷ. ಪ್ರಸಕ್ತ ಇಂಧನ ದರ ಏರಿಕೆ ಸಂದರ್ಭದಲ್ಲಿ ಇವರ ಈ ಸಂಶೋಧನೆ ಹೊಸ ಆಶಾದೀಪವಾಗಿ ಕಾಣುತ್ತಿದೆ.
ಪೆಟ್ರೊಲ್ ದರ ಈಗ 70 ರು. ಆಸುಪಾಸಿನಲ್ಲಿದೆ. ಅಂದ್ರೆ ಸುಮಾರು ಶೇ. 65ರಷ್ಟು ಹೆಚ್ಚಾಗಿದೆ. ಡೀಸಲ್ ದರ ಈಗ ಪೆಟ್ರೋಲ್ ಗಿಂತ ಸುಮಾರು 30 ರೂಪಾಯಿ ಕಡಿಮೆಯಿದೆ. ಈ ನೂತನ ಬೈಕ್ ನೀಡೋ ಮೈಲೇಜ್ ಪ್ರತಿಲೀಟರ್ ಗೆ ಸುಮಾರು 110 ಕಿ.ಮೀ. ಅಂದ್ರೆ ಮಾಮೂಲಿ ಪೆಟ್ರೋಲ್ ಬೈಕ್ ಗಿಂತ ಎರಡು ಪಟ್ಟು ಹೆಚ್ಚು. ಆಟೋಮ್ಯಾಟಿಕ್ ಗೇರ್ ಮತ್ತು ಕ್ಲಚ್ ಹೊಂದಿರುವ ಡೀಸಲ್ ಎಂಜಿನ್ ಚಾಲೀತ ದೇಶದ ಮೊದಲ ಬೈಕೆಂಬ ಖ್ಯಾತಿಯೂ ಈ ವಿದ್ಯಾರ್ಥಿಗಳ ಪಾಲಾಗಿದೆ.
ಇವರ ಬೈಕ್ ಇಂಧನ ದಕ್ಷತೆಯಿಂದ ಪ್ರತಿಕಿ,ಮೀ ಪ್ರಯಾಣಕ್ಕೆ ತಗಲುವ ವೆಚ್ಚ ಕೇವಲ 40 ಪೈಸೆ ಅಷ್ಟೇ. ಕೈನಟಿಕ್ ಬ್ಲೇಜ್ ಬೈಕ್ ನ ಚಾಸೀಸ್, ರಾಯಲ್ ಎನ್ ಫೀಲ್ಡ್ 350 ಸಿಸಿ ಪೆಟ್ರೊಲ್ ಬೈಕ್ ನ ಎಂಜಿನ್ ಬಳಸಿ ಈ ಬೈಕ್ ನಿರ್ಮಿಸಿದ್ದಾರೆ. ಇದು ಇತರ ಡೀಸಲ್ ವಾಹನಗಳಿಗೆ ಹೋಲಿಸಿದರೆ ಕಡಿಮೆ ಪರಿಸರ ಮಾಲಿನ್ಯ ಉಂಟು ಮಾಡುತ್ತಾರೆ ಎಂದು ಈ ವಿದ್ಯಾರ್ಥಿಗಳು ಹೇಳುತ್ತಾರೆ.


Click it and Unblock the Notifications








