ನಿಮಗೆ ಬೇಕಾದ ಬ್ಯೂಟಿ ಸ್ಕೂಟಿಯನ್ನು ಆಯ್ಕೆ ಮಾಡಿಕೊಳ್ಳಿ

Tvs Wego
ಸದ್ಯದ ಜಮಾನದ ಆಕ್ಟಿವಾ, ಆಕ್ಸೆಸ್ 125, ಏವಿಯೇಟರ್ ಡಿಯೋ ಹೊರತುಪಡಿಸಿದರೆ ಸಾಕಷ್ಟು ಬ್ಯೂಟಿ ಸ್ಕೂಟಿಗಳು ರಸ್ತೆಯಲ್ಲಿವೆ. ಸ್ಕೂಟಿ ಬ್ರಾಂಡ್‌ ಅಂದಾಕ್ಷಣ ನೆನಪಾಗುವುದು ಟಿವಿಎಸ್‌. ಸದ್ಯ ಮಾರುಕಟ್ಟೆಯಲ್ಲಿ ಕಂಪನಿಯ ವೆಗೊ, ಸ್ಕೂಟಿ ಪೆಪ್ಟ್‌ ಮತ್ತು ಪೆಪ್ಟ್‌ ಪ್ಲಸ್‌, ಸ್ಕೂಟಿ ಸ್ಟ್ರೀಕ್‌ ಮತ್ತು ಸ್ಟ್ರೀಂಜ್‌ ಹೆಚ್ಚು ಬೇಡಿಕೆಯಲ್ಲಿವೆ. ಟಿವಿಎಸ್‌ ಎಕ್ಸ್‌ಎಲ್‌ ಕಂಪನಿಯ ಮೊಪೆಡ್‌ ಬ್ರಾಂಡ್‌ ಆಗಿದೆ.

ಸ್ಕೂಟಿ ಪೆಪ್‌+
ಇದು ಟಿವಿಎಸ್‌ನ ಆಕರ್ಷಕ ಮತ್ತು ಹಗುರವಾದ ಸ್ಕೂಟಿ. ಆಟೋ ಚೋಕ್‌, ಪವರ್‌ ಎಕಾನಮಿ ಬಾಡಿ, ಮೊಬೈಲ್‌ ಚಾರ್ಜರ್‌ ಸಾಕೇಟ್‌ ಇತ್ಯಾದಿ ಫೀಚರ್‌ಗಳಿಂದ ಆಕರ್ಷಕವಾಗಿದೆ. ಇದು ಎಲೆಕ್ಟ್ರಿಕ್‌ ರೆಡ್‌, ನೈಟ್‌ ಬ್ಲಾಕ್‌ ಸೇರಿದಂತೆ 5 ಬಣ್ಣಗಳಲ್ಲಿ ದೊರಕುತ್ತದೆ. ಇದು ಪ್ರತಿಲೀಟರ್‌ ಪೆಟ್ರೋಲ್‌ಗೆ 60 ಕಿ.ಮೀ. ಮೈಲೇಜ್‌ ನೀಡುತ್ತದೆ. ಬೆಂಗಳೂರು ಎಕ್ಸ್ ಶೋರೂಂ ದರ ಸುಮಾರು 32,480 ರು.

ಟಿವಿಎಸ್‌ ವೆಗೊ
ಟಿವಿಎಸ್‌ ವೆಗೊ ಪುರುಷ ಮತ್ತು ಮಹಿಳೆಯರಿಬ್ಬರಿಗೂ ಸೂಕ್ತವಾಗಿರುವ ಅಂದವಾದ ದ್ವಿಚಕ್ರ ವಾಹನ. ಇದು 110 ಸಿಸಿ ಎಂಜಿನ್‌ ಹೊಂದಿದ್ದು 7,500 ಆರ್‌ಪಿಎಂಗೆ 8 ಹಾರ್ಸ್‌ಪವರ್‌ ನೀಡುತ್ತದೆ. ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಹೊಂದಿರುವ ವೆಗೊ ಆರಾಮದಾಯಕತೆ‌ ಮತ್ತು ನಿರ್ವಹಣೆ ದೃಷ್ಟಿಯಿಂದಲೂ ಉತ್ತಮವಾಗಿದೆ. ಇದರ ಬೆಂಗಳೂರು ಶೋರೂಂ ದರ ಸುಮಾರು 42,500 ರು.

ಸ್ಕೂಟಿ ಸ್ಟ್ರೀಕ್‌
ಇದು ಟಿವಿಎಸ್‌ನ ಪೆಪ್ಟ್‌ ನಂತರದ ಇನ್ನೊಂದು ಆಕರ್ಷಕವಾದ ಸ್ಕೂಟಿಯಾಗಿದೆ.. ಕಂಪನಿಯು 90ಸಿಸಿ ಟಿವಿಎಸ್‌ ಸ್ಕೂಟಿಯನ್ನು ಮಹಿಳೆಯರಿಗಾಗಿ ಮತ್ತು 100ಸಿಸಿ ಪ್ಲಸ್‌ ಸ್ಕೂಟಿ ಸ್ಟ್ರೀಕ್‌ನ್ನು ಪುರುಷರಿಗಾಗಿ ಹೊರತಂದಿದೆ. ಗೇರ್‌ಲೆಸ್‌ ಸ್ಟ್ರೀಕ್‌ ಕೆಂಪು, ನೀಲಿ, ಕಪ್ಪು, ಪಿಂಕ್‌ ಮತ್ತು ನೇರಳೆ ಬಣ್ಣಗಳಲ್ಲಿ ದೊರಕುತ್ತದೆ. ಇದು ನಗರದ ರಸ್ತೆಗಳಲ್ಲಿ ಪ್ರತಿಲೀಟರ್‌ ಇಂಧನಕ್ಕೆ 40-45 ಕಿ.ಮೀ ಮೈಲೇಜ್‌ ನೀಡುತ್ತದೆ. ಅಂದಹಾಗೇ ಕಂಪನಿಯು ಮುಂದಿನ ಡಿಸೆಂಬರ್‌ನಲ್ಲಿ ಸ್ಕೂಟಿ ಸ್ಟ್ರೀಕ್‌ ಹೈಬ್ರಿಡ್‌ ವರ್ಷನ್‌ ಹೊರತರಲು ಯೋಜಿಸಿದೆ.ಬೆಂಗಳೂರು ಎಕ್ಸ್‌ಶೋರೂಂ ದರ ಸುಮಾರು 33,770 ರೂ.

More from DriveSpark

Article Published On: Saturday, May 14, 2011, 16:48 [IST]
English summary
TVS Scooty review. TVS Scooty Price, details and specifications in India. TVS Scooty Pep Plus Features. The new TVS Wego is the latest automatic scooter from TVS motors.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+