ಬುಲೆಟ್ ರಾಣಿಯರು: ಬೈಕ್ ಗಂಡಸರಿಗೆ ಮಾತ್ರನಾ?

Womens Bike, Bullet Craze in India
ಮನೆಯಲ್ಲಿ ಹಿರಿಯರಿದ್ದರೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬಹುದು. ಕಾಲ ಬದಲಾಗಿದೆ ಎನ್ನಬಹುದು. ಮಹಿಳೆಯರು ಈಗ ಹೆಚ್ಚು ಹೆಚ್ಚು ಹಾರ್ಸ್ ಪವರಿನ ಬೈಕ್, ಬುಲೆಟ್ ಕಡೆ ಮುಖ ಮಾಡುತ್ತಿದ್ದಾರೆ. ಗಂಡಸರಿಗಿಂತ ನಾವೇನು ಕಡಿಮೆ ಎನ್ನುತ್ತಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಎಚ್ಆರ್ ಶೀಜಾ ಮ್ಯಾಥ್ಯು(34) ಹರ್ಲಿ ಡೇವಿಡ್ ಸನ್ ಬೈಕ್ ಖರೀದಿಸಿದ್ದರು. ಇವರು ಹರ್ಲಿ ಡೇವಿಡ್ ಸನ್ ಬೈಕ್ ಖರೀದಿಸಿದ ಭಾರತದ ಮೊದಲ ಮಹಿಳೆ. ಇದಕ್ಕೂ ಮುನ್ನ ಶೀಜಾ ಯಮಾಹ ರಾಜ್ ದೂತ್ 350 ಬೈಕ್ ಸವಾರಿ ಮಾಡುತ್ತಿದ್ದರು.

ಕೆಲವು ದಿನಗಳ ನಂತರ ಹೈದರಾಬಾದಿನ ಮಹಿಳೆಯೊಬ್ಬರು ಕೂಡ ಹರ್ಲಿ ಡೇವಿಡ್ ಸನ್ ಬೈಕ್ ಖರೀದಿಸಿದ್ದರು. ಹೈದರಾಬಾದಿನ ಆರ್ಕಿಟೆಕ್ಟ್ ಕಸ್ತೂರಿ ದಿಯೋಧರ್(33) ಹರ್ಲಿ ಬೈಕ್ ಖರೀದಿಸಿದ ಎರಡನೇ ಮಹಿಳೆಯೆಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಬೆಂಗಳೂರಿನಂತಹ ರಸ್ತೆಗಳಲ್ಲಿ ಆಗಾಗ ಮಹಿಳಾ ಬೈಕ್ ಚಾಲಕಿಯರು ಕಣ್ಣಿಗೆ ಕಾಣುತ್ತಿರುತ್ತಾರೆ. ಕನ್ನಡ ಸೇರಿದಂತೆ ಹಲವು ಸಿನಿಮಾಗಳಲ್ಲಿ ಹಲವು ಮಹಿಳೆಯರು ಬುಲೆಟ್, ಬೈಕ್ ಸವಾರಿ ಮಾಡಿದ್ದಾರೆ. ಇದು ಸ್ಕೂಟಿ ಬ್ಯೂಟಿಗಳಿಗೆ ಬೈಕ್ ಲೋಕಕ್ಕೆ ಸ್ವಾಗತ ಹೇಳುವ ಸಮಯ. ಆಲ್ ದಿ ಬೆಸ್ಟ್. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Wednesday, November 30, 2011, 11:49 [IST]
English summary
Womens Bike, Bullet Craze. Why should men have all the fun with Bike, Bangalore-based HR professional Sheeja Mathews, Hyderabad Kasthuri Deodhar owned Harley Davidson bikes. Nowdays women like bike, bullet, two wheeler ride.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+