ವಿಶ್ವದ ದುಬಾರಿ ಬೈಕಿಗೆ ಜೈಹೋ, ಯಾವುದೀ ಬೈಕು?

World's costliest Quadbike Wazuma V8
ಸೂಪರ್ ಬೈಕ್ ರೈಡಿಂಗ್ ಅನುಭವ ಪಡೆಯಬೇಕೆ? ಸ್ಪೋರ್ಟ್ ವಾಹನದಂತೆ ಗುಡ್ಡ ಬೆಟ್ಟದ ದಾರಿಯಲ್ಲೂ ಸವಾರಿ ಮಾಡಬೇಕೆ? ಇವೆರಡರ ಯುಗಳಗೀತೆಯೊಂದಿಗೆ ಇಲ್ಲೊಂದು ಬೈಕ್ ಬಂದಿದೆ. ಹೆಸರು Quadbike Wazuma V8. ಈ ಬೈಕಿಗೆ ನಾಲ್ಕು ಟೈರಿದ್ದು, ಎಸ್ ಯುವಿ ಅಥವಾ ಬೈಕಾಗಿ ಪರಿವರ್ತಿಸಿಕೊಳ್ಳಬಹುದು.

ಬೈಕುಗಳ ಚಲಿಸಲು ಕಷ್ಟವಾಗಿರುವ ಹಾದಿಯಲ್ಲಿ ಈ ಬೈಕು ಸರಾಗವಾಗಿ ಚಲಿಸುತ್ತದೆ. ಕೆಲವು ಬೈಕುಗಳು ಕಾಡು, ಬೆಟ್ಟಗಳಲ್ಲಿ ಚಲಿಸುತ್ತವೆ. ಜೊತೆಗೆ ಮಾಮೂಲಿ ರಸ್ತೆಯಲ್ಲೂ ಚಲಿಸುತ್ತವೆ. ಆದರೆ ಈ ಕ್ಯೂಡ್ ಬೈಕ್ ಕೇವಲ ಆಫ್ ರೋಡಿನಲ್ಲಿ ಮಾತ್ರ ಚಲಿಸುತ್ತದೆ. ಮಾಮೂಲಿ ರಸ್ತೆಯಲ್ಲಿ ಜಲ್ಲಿಕಲ್ಲು ಕಿತ್ತುಬರುತ್ತೋ ಗೊತ್ತಿಲ್ಲ.

ನೂತನ ವಾಝೂಮ ಬೈಕ್ ಫೆರಾರಿ ಎಂಜಿನ್ ಹೊಂದಿದೆ. ಎಂಜಿನ್ ಹೆಸರು ವಾಝೂಮ ವಿ8. ಇದು ವಿಶ್ವದ ದುಬಾರಿ ಕ್ಯೂಡ್ ಬೈಕ್. ಫ್ರಾನ್ಸಿನ ಲಝೆರಥ್ ಕಂಪನಿ ಇದನ್ನು ಅಭಿವೃದ್ಧಿಪಡಿಸಿದೆ. ಇದು ಪ್ರತಿಗಂಟೆಗೆ ಸುಮಾರು 240 ಕಿ.ಮೀ. ವೇಗದಲ್ಲಿ ಸಾಗುತ್ತದೆ.

ಇತರ ಕ್ವಾಡ್ ಬೈಕುಗಳ ದರಕ್ಕೆ ಹೋಲಿಸಿದರೆ ಈ ಆಫ್ ರೋಡ್ ಕ್ವಾಡ್ ಬೈಕ್ ದುಬಾರಿ. ಇದರ ದರ ಸುಮಾರು 2,66,000 ಡಾಲರ್. ಅಂದರೆ ಸುಮಾರು 1.4 ಕೋಟಿ ರು. ಹೀಗಾಗಿ ಈ ಬೈಕು ದುಡ್ಡಿನ ಮರನೆಟ್ಟವರಿಗೆ ಮಾತ್ರ.

Article Published On: Tuesday, December 20, 2011, 16:01 [IST]
English summary
Look t the World's costliest Quadbike Wazuma V8. It is powered by a Ferrari Engine. Introducing the Wazuma V8, the world's most expensive quadbike. Built by French firm Lazareth, this amazing machine can reach a top speed of 240kmph. This awesome piece of machinery is now on sale online with a price tag of $266,000 (approximately Rs.14 crore).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+