ಪೆಟ್ರೊಲ್ ಗೆ ಗೋಲಿ ಹೊಡಿ, ಬೈಕ್ ಗೆ ಸೋಲಾರ್ ಹಿಡಿ

ಸತ್ಯವಾಗಿಯೂ ಇದಕ್ಕೆ ಪೆಟ್ರೊಲ್ ಅವಶ್ಯಕತೆಯಿಲ್ಲ. ಎಲೆಕ್ಟ್ರಿಕ್ ವಾಹನಗಳಂತೆ ಮನೆಯ ಕರೆಂಟ್ ನಲ್ಲಿ ಚಾರ್ಜ್ ಮಾಡುವ ಅಗತ್ಯವೂ ಇಲ್ಲ. ಸದ್ಯ ಇದಕ್ಕೆ ತೆರಿಗೆಯ ಹಂಗಿಲ್ಲ. ಜಾಸ್ತಿ ನಿರ್ವಹಣೆ ವೆಚ್ಚವಿಲ್ಲ. ಇಡೀ ವಿಶಾಲ ಆಕಾಶವೇ ತಮ್ಮದೆಂಬ ವಿಶಾಲ ಮನಸ್ಸಿನಿಂದ ಇದರಲ್ಲಿ ಸವಾರಿ ಮಾಡಬಹುದು. ಇದಕ್ಕೆ ಸೋಲರ್ ಪ್ಯಾನೆಲ್ ಅಳವಡಿಸಿದ್ದು ಸೂರ್ಯನ ಬೆಳಕೇ ಇಂಧನ. ಸೂರ್ಯನ ಕಿರಣಗಳಿಗೆ ಹಣ ನೀಡುವ ಅವಶ್ಯಕತೆಯೂ ಇಲ್ಲವಲ್ಲ. ಹೀಗಾಗಿ ಇದರ ಇಂಧನ ವೆಚ್ಚ ಕೂಡ ಶೂನ್ಯ.
ಬಾಟಮ್ ಸ್ಟ್ರಾಟ್ ನಲ್ಲಿ ಈ ಬೈಕ್ ಯಾವುದೇ ಇಂಧನದ ನೆರವಿಲ್ಲದೆ 50ರಿಂದ 60 ಕಿ.ಮೀ. ಸಾಗುತ್ತದೆ. ಬ್ಯಾಟರಿ ಪೂರ್ತಿ ಚಾರ್ಜ್ ಆಗುತ್ತಿದ್ದರೆ ದಿನಕ್ಕೆ 200-250 ಕಿ.ಮೀ. ಸಾಗಬಹುದಾಗಿದೆ. ಸೂರ್ಯ ರಜೆ ಹಾಕಿ ಮೋಡದ ಮರೆಗೆ ಹೋಗಿದ್ದರೆ ಕರೆಂಟ್ ನಿಂದ ಚಾರ್ಜ್ ಮಾಡಲು ಇದರಲ್ಲಿ ಪ್ರತ್ಯೇಕ ಪ್ಲಗ್ ಇದೆ. ಇಂಧನ ದಕ್ಷತೆ ಹೆಚ್ಚಿಸಲು ಇ-ಬೈಕ್ ಗೆ ಎಲ್ಇಡಿ ಹೆಡ್ ಲೈಟ್ ಮತ್ತು ಇಂಡಿಕೇಟರ್ ಅಳವಡಿಸುವ ಯೋಜನೆಯೂ ಇರುವುದಾಗಿ ಇಮ್ರಾನ್ ಹೇಳುತ್ತಾರೆ.
ಇದರ ಅನ್ವೇಷಣೆಗೆ ಸತತ ಮೂರು ತಿಂಗಳು ಕಷ್ಟಪಟ್ಟಿರುವುದಾಗಿ ಇವರಿಬ್ಬರು ಹೇಳುತ್ತಾರೆ. ವೆರಿಗುಡ್ ವಿಶ್ವದಲ್ಲಿಯೇ ಮೊದಲ ಸಾಧನೆ ಮಾಡಿದ್ದೀರಾ.. ಇಂತಹ ಬೈಕ್ ಗಳನ್ನು ಎಷ್ಟು ರೂಪಾಯಿಗೆ ಮಾರುತ್ತಿರಾ ಎಂದು ಕೇಳಿದರೆ ಆಶ್ಚರ್ಯ ಪಡುವ ಸರದಿ ನಮ್ಮದು. ಪೆಟ್ರೊಲ್, ಡೀಸಲ್ ಹಂಗಿಲ್ಲದ ಈ ಬೈಕ್ ಗೆ ಈಗ 26 ಸಾವಿರ ರೂಪಾಯಿಯಂತೆ. ಎಲ್ಲಾದರೂ ಬೇಡಿಕೆ ಹೆಚ್ಚಾಗಿ ಹೆಚ್ಚು ಬೈಕ್ ಗಳ ಉತ್ಪಾದನೆಯಾದರೆ ಇದರ ದರ ಸರಾಸರಿ 16 ಸಾವಿರ ರು.ಗೆ ನೀಡಬಹುದು ಎನ್ನುತ್ತಾರೆ ಎಲೆಕ್ಟ್ರಿಷಿಯನ್ ಕೆಲಸದಲ್ಲಿರುವ ಎಂಜಿನಿಯರುಗಳು.


Click it and Unblock the Notifications








