ಉತ್ಪಾದನೆ ಹೆಚ್ಚಳಕ್ಕೆ ಯಮಹಾ ಚಿಂತನೆ

"ಸದ್ಯ ಕಂಪನಿಯ ಉತ್ಪನ್ನಗಳಿಗೆ ಗ್ರಾಹಕರಿಂದ ಅತ್ಯುತ್ತಮವಾಗಿ ಬೇಡಿಕೆಯಿದೆ. ಹೀಗಾಗಿ ನಾವು ನಮ್ಮ ಬೈಕ್ ಉತ್ಪಾದನೆ ಮತ್ತು ಮಾರಾಟವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ನಿರ್ಧರಿಸಿದ್ದೇವೆ" ಎಂದು ಕಂಪನಿಯ ಮುಖ್ಯಸ್ಥ ರಾಯ್ ಕುರಿಯನ್ ಹೇಳಿದ್ದಾರೆ.
ಸದ್ಯ ಕಂಪನಿಯು ಉತ್ತರ ಪ್ರದೇಶದ ಸರ್ಜಾಪುರ ಘಟಕದಲ್ಲಿ ಉತ್ಪಾದನೆ ಹೆಚ್ಚಿಸಿಕೊಳ್ಳಲಿದೆ. ಫರಿಯಾಬಾದ್ ಘಟಕದಲ್ಲಿ ಬೈಕ್ ಎಂಜಿನ್ ಉತ್ಪಾದನೆ ಹೆಚ್ಚಿಸಿಕೊಳ್ಳಲಿದೆ. "2014ಕ್ಕೆ ದೇಶಿ ಮಾರುಕಟ್ಟೆಯಲ್ಲಿ ಹತ್ತು ಲಕ್ಷ ಬೈಕ್ ಮಾರಾಟ ಮಾಡುವ ಗುರಿ ಹೊಂದಿದ್ದೇವೆ" ಎಂದು ಕುರಿಯನ್ ಹೇಳಿದ್ದಾರೆ.


Click it and Unblock the Notifications