ಮುಂದಿನ ವರ್ಷ ಯಮಹಾ ಸ್ಕೂಟರ್ ಮಾರುಕಟ್ಟೆಗೆ

ಮಾರುಕಟ್ಟೆಯಲ್ಲಿ ಈಗಾಗಲೇ ಹೆಚ್ಚಿನವರಿಗೆ ಯಮಹಾ ಬೈಕುಗಳು ಅಚ್ಚುಮೆಚ್ಚು. ಇಲ್ಲಿ ಹೋಂಡಾ ಆಕ್ಟಿವಾ ಮತ್ತು ಸುಜುಕಿ ಆಕ್ಸೆಸ್ ಜೊತೆ ಯಮಹಾ ಪೈಪೋಟಿ ನಡೆಸಬೇಕಾಗುತ್ತದೆ.
ಹಾಗಂತ ಯಮಹಾ ಕಂಪನಿಗೆ ಸ್ಕೂಟರ್ ಸೆಗ್ಮೆಂಟ್ ಹೊಸ ಪರಿಕಲ್ಪನೆಯಲ್ಲ. ಕಂಪನಿಯು ಈಗಾಗಲೇ ಜಾಗತಿಕವಾಗಿ ಹಲವು ಸ್ಕೂಟರ್ ಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ. ಒಂದು ವರದಿಯ ಪ್ರಕಾರ ಕಂಪನಿಯು ಸ್ಕೂಟರ್ ಉತ್ಪಾದನೆಗಾಗಿ ಜಂಟಿ ಕಂಪನಿಯ ಹುಡುಕಾಟದಲ್ಲಿದೆಯಂತೆ.
ದೇಶದ ಸ್ಕೂಟರ್ ಸೆಗ್ಮೆಂಟಿನಲ್ಲಿ ಈಗ ಹೋಂಡಾ ಆಕ್ಟಿವಾ ಪ್ರಬಲವಾಗಿದೆ. ಉಳಿದಂತೆ ಟಿವಿಎಸ್ ಸ್ಕೂಟಿ, ಸುಜುಕಿ, ಆಕ್ಸೆಸ್ ಮತ್ತು ಹೋಂಡಾ ಡಿಯೊ ಕೂಡ ಫೇಮಸ್. ದೇಶದಲ್ಲಿ ಸ್ಕೂಟರ್ ಮಾರಾಟದ ಮೂಲಕ ಕಂಪನಿಯ ಮಾರಾಟ ಪಾಲನ್ನು ಹೆಚ್ಚಿಸಿಕೊಳ್ಳುವ ನಿರೀಕ್ಷೆಯನ್ನು ಯಮಹಾ ಕಂಪನಿ ವ್ಯಕ್ತಪಡಿಸಿದೆ.
ದೆಹಲಿ ವಾಹನ ಪ್ರದರ್ಶನದಲ್ಲಿ ನಾವು ಈ ಕೆಳಗಿನ ಕೆಲವು ಸ್ಕೂಟರ್ ಪ್ರದರ್ಶನವನ್ನು ನಿರೀಕ್ಷಿಸಬಹುದು. ಅಂದರೆ 125 ಸಿಸಿಯ ವಿಟಿ, ಸಿಗ್ನಸ್ ಎಕ್ಸ್, 50ಸಿಸಿಯ ನಿಯೊ ಮತ್ತು ಜೊಗ್ಆರ್ ಇತ್ಯಾದಿ ಸ್ಕೂಟರ್ ಗಳು ಪ್ರದರ್ಶನದಲ್ಲಿರಬಹುದು. (ಕನ್ನಡ ಡ್ರೈವ್ ಸ್ಪಾರ್ಕ್ )


Click it and Unblock the Notifications








