10 ಸೀಟಿನ ಹರ್ಲಿ ಡೇವಿಡ್ಸನ್ ಬೈಕ್

ಸಾಮಾನ್ಯವಾಗಿ ಒಂದು ಬೈಕ್‌ನಲ್ಲಿ ಎಷ್ಟು ಮಂದಿಗೆ ಸವಾರಿ ಮಾಡಬಹುದು? ಒಂದು ಅಥವಾ ಎರಡು, ಇನ್ನು ಹೆಚ್ಚೆಂದರೆ ನಾಲ್ಕು ಮಂದಿ. ಆದರೆ ಇಲ್ಲೊಂದು ಬೈಕ್ ಅನ್ನು ನಾವು ಪರಿಚಯಿಸಲಿದ್ದು ಗರಿಷ್ಠ 10 ಮಂದಿಗೆ ಆರಾಮವಾಗಿ ಪಯಣಿಸಬಹುದಾಗಿದೆ.

ಹಾಗಿದ್ದರೆ ನೀವು ಎಂದಾದರೂ ಬೈಕ್‌ನಲ್ಲಿ 10 ಮಂದಿ ಸವಾರಿ ಮಾಡುವುದನ್ನು ನೋಡಿದ್ದೀರಾ? ಬಹುಶ: ಸರ್ಕಸ್ ಅಥವಾ ಸಾಹಸ ಪ್ರದರ್ಶನಗಳಲ್ಲಿ ಮಾತ್ರ ನೋಡಿರಬಹುದು. ಆದರೆ ನಾವು ಮಾತನಾಡುತ್ತಿರುವುದು ಬಸ್ಸಿನಷ್ಟು ಉದ್ದವಿರುವ ಬೈಕ್ ‌ಬಗ್ಗೆ.

ಹೌದು, ವಿಶ್ವದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹರ್ಲಿ ಡೇವಿಡ್ಸನ್ 10 ಮಂದಿಗೆ ಆರಾಮದಾಯಕವಾಗಿ ಕುಲಿತುಕೊಂಡು ಹೋಗಬಹುದಾದ ಬೈಕ್‌ವೊಂದನ್ನು ತಯಾರಿಸಿರಿದೆ. ಬೈಕ್ ಪ್ರೇಮಿಗಳಿಗೆ ಇದು ಪ್ರಿಯವೆನಿಸಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಅಂದ ಹಾಗೆ ಈ ಬೈಕ್‌ನ ಹಿಂದೆ ಹಾಗೂ ಮುಂದೆ ತಲಾ ಎರಡರಂತೆ ಒಟ್ಟು ನಾಲ್ಕು ಚಕ್ರಗಳಿವೆ. ಅಲ್ಲದೆ ಹಿಂದುಗಡೆ ಸಮತೋಲನ ಕಾಪಾಡಲು ಇನ್ನೆರಡು ಹೆಚ್ಚುವರಿ ಟಯರ್‌ಗಳನ್ನು ಜೋಡಿಸಲಾಗಿದೆ. ಹಾಗೆಯೇ ಬೈಕ್‌ನಲ್ಲಿ ಸವಾರಿ ಮಾಡುವರರಿಗೆ ಹ್ಯಾಂಡಲ್ ವ್ಯವಸ್ಥೆ ಒದಗಿಸಲಾಗಿದೆ.

ಹಾರ್ಲಿ ಡೇವಿಡನ್ಸ್‌ನ ಸ್ಟೀವ್ ಹಾಪ್‌ಕಿನ್ಸ್ ಎಂಬವರು ಈ ಕನಸಿನ ಬೈಕನ್ನು ನನಸಾಗಿಸಿದ್ದಾರೆ. ಅಲ್ಲದೆ ಹತ್ತು ಜನರನ್ನು ಕುರಿಸಿ ಸವಾರಿ ಮಾಡುವ ಮೂಲಕ ಯಶಸ್ವಿ ಪ್ರಯೋಗ ಕೂಡಾ ಮಾಡಿದ್ದಾರೆ. (ಫೋಟೊ ಫೀಚರ್‌ನ ಕೊನೆಗೆ ನೀಡಲಾಗಿರುವ ವೀಡಿಯೋ ಕ್ಲಿಕ್ಕಿಸಲು ಮರೆಯದಿರಿ)

10 ಸೀಟಿನ ಹರ್ಲಿ ಡೇವಿಡ್ಸನ್ ಬೈಕ್

ವಿಶ್ವದ ಅತಿ ಪುರಾತನ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹರ್ಲಿ ಡೇವಿಡ್ಸನ್‌ನ ಶ್ರೇಷ್ಠ ಬೈಕ್ ಡಿಸೈನರ್ ಡಾ. ಸ್ಟೀವ್ ಹಾಪ್‌ಕಿನ್ಸ್ ಈ 10 ಸೀಟುಗಳುಳ್ಳ ಬೈಕ್ ತಯಾರಿಸಿದ್ದಾರೆ.

10 ಸೀಟಿನ ಹರ್ಲಿ ಡೇವಿಡ್ಸನ್ ಬೈಕ್

ಬೈಕ್‌ನಲ್ಲಿ ಒಟ್ಟು ಹತ್ತು ಸೀಟ್‌ಗಳನ್ನು ಆಳವಡಿಸಲಾಗಿದ್ದು ಬಸ್ಸಿನಷ್ಟು ಉದ್ದವಿದೆ. ಗರಿಷ್ಠ ಎಂಜಿನ್ ಕ್ಷಮತೆಯನ್ನು ಕೂಡಾ ಆಳವಡಿಸಲಾಗಿದೆ.

10 ಸೀಟಿನ ಹರ್ಲಿ ಡೇವಿಡ್ಸನ್ ಬೈಕ್

ಬಲ್ಲ ಮೂಲಗಳ ಪ್ರಕಾರ ಸ್ಟೀವ್ ಈ ಆತ್ಯಾರ್ಷಕ ಬೈಕ್ ಅನ್ನು ಮುಂಬರುವ ಜರ್ಮನಿ ಮೋಟಾರ್ ಶೋದಲ್ಲಿ ಪ್ರದರ್ಶಿಸಲಿದ್ದಾರೆ. ಈ ಮೂಲಕ ವಿಶ್ವದ ಗಮನ ಸೆಳೆಯಲಿದೆ.

10 ಸೀಟಿನ ಹರ್ಲಿ ಡೇವಿಡ್ಸನ್ ಬೈಕ್

10 ಸೀಟುಗಳುಳ್ಳ ಬೈಕ್‌ಗೆ ಹೆಚ್ಚು ಸಮತೋಲನ ನೀಡಲು ಫ್ರಂಟ್ ಡಿಸ್ಕ್ ಹಾಗೂ ಶಕ್ತಿಯುತ ಟಯರ್‌ಗಳನ್ನು ಆಳವಡಿಸಲಾಗಿದೆ.

10 ಸೀಟಿನ ಹರ್ಲಿ ಡೇವಿಡ್ಸನ್ ಬೈಕ್

ಐಷಾರಾಮಿ ಬೈಕ್ ತಯಾರು ಮಾಡುವುದರಲ್ಲಿ ಹರ್ಲಿ ಡೇವಿಡ್ಸನ್ ಎಂದೂ ಎತ್ತಿದ ಕೈ. ಇದರೊಂದಿಗೆ ಈ ಅತಿ ನೂತನ ಪರೀಕ್ಷೆ ಕೂಡಾ ಯಶಸ್ವಿಯಾಗಿದೆ.

10 ಸೀಟಿನ ಹರ್ಲಿ ಡೇವಿಡ್ಸನ್ ಬೈಕ್

ಬೈಕ್ ತುಂಬಾನೇ ಉದ್ದವಾಗಿದ್ದರಿಂದ ಇದರ ಚಾಲನೆಗೆ ಒಟ್ಟು ಏಳು ಎಂಜಿನ್‌ಗಳನ್ನು ಆಳವಡಿಸಲಾಗಿದೆ. ಆದರೆ ನಗರ ಪ್ರದೇಶ ಹಾಗೂ ತಿರುವಿನಲ್ಲಿ ಚಾಲನೆ ಮಾತ್ರ ಸ್ವಲ್ಪ ಕಷ್ಟ.

10 ಸೀಟಿನ ಹರ್ಲಿ ಡೇವಿಡ್ಸನ್ ಬೈಕ್

ಮತ್ತೊಂದು ವಿಶೇಷತೆ ಏನೆಂದರೆ 1909ರಿಂದ 1929ರ ಇಸವಿಯ ನಡುವೆ ಹರ್ಲಿ ಡೇವಿಡ್ಸನ್ ಕಂಪನಿಯಿಂದ ತಯಾರಿಸಲ್ಪಟ್ಟ ಎಂಜಿನ್‌ಗಳನ್ನು ಈ 10 ಸೀಟುಗಳುಳ್ಳ ಬೈಕ್‌ಗೆ ಆಳವಡಿಸಲಾಗಿದೆ.

10 ಸೀಟಿನ ಹರ್ಲಿ ಡೇವಿಡ್ಸನ್ ಬೈಕ್

ಹಾಗಿದ್ದರೂ ಬೈಕ್ ದೂರ ಪ್ರಯಾಣಕ್ಕೆ ಯೋಗ್ಯವಾದುದಲ್ಲ ಎಂದು ಸ್ಟೀವ್ ಅಭಿಪ್ರಾಯಪಡುತ್ತಾರೆ. ಯಾಕೆಂದರೆ ಇದರಲ್ಲಿ ಏಳು ಎಂಜಿನ್‌ಗಳನ್ನು ಆಳವಡಿಸಿದ್ದರಿಂದ ಎಂಜಿನ್ ಬೇಗನೇ ಬಿಸಿಯಾಗುತ್ತದೆ.

10 ಸೀಟಿನ ಹರ್ಲಿ ಡೇವಿಡ್ಸನ್ ಬೈಕ್

ಸದಾ ಹೊಸ ಹೊಸ ಸಂಶೋಧನೆಗಳಿಗೆ ಹರ್ಲಿ ಡೇವಿಡ್ಸನ್ ಪ್ರೋತ್ಸಾಹ ನೀಡುತ್ತಲೇ ಬಂದಿದೆ. ಇದೀಗ 10 ಸೀಟಿನ ಬೈಕ್ ಜನಪ್ರಿಯವಾಗುತ್ತಿದೆ.

10 ಸೀಟಿನ ಹರ್ಲಿ ಡೇವಿಡ್ಸನ್ ಬೈಕ್

ಸ್ಟೀವ್ ತಮ್ಮ ಈ ಸಾಧನೆಯ ಬಳಿಕ ತುಂಬಾನೇ ಖುಷಿಯಾಗಿದ್ದಾರೆ. ಈ ಕೆಲಸ ಅಷ್ಟು ಸುಲಭವಾಗಿರಲಿಲ್ಲ. ಆದರೆ 10 ಸೀಟ್ ಹೊಂದಿರುವ ಬೈಕ್ ನಿರ್ಮಾಣ ಮಾಡುವುದು ತಮ್ಮ ಅಭಿಲಾಷೆಯಾಗಿತ್ತು ಎಂದಿದ್ದಾರೆ.

10 ಸೀಟಿನ ಹರ್ಲಿ ಡೇವಿಡ್ಸನ್ ಬೈಕ್

10 ಸೀಟುಗಳ್ಳುಳ ಹರ್ಲಿ ಡೇವಿಡ್ಸನ್ ಬೈಕ್

ಹರ್ಲಿ ಡೇವಿಡ್ಸನ್ 10 ಸೀಟಿನ ಬೈಕ್- ವೀಡಿಯೋಗಾಗಿ ಕ್ಲಿಕ್ಕಿಸಿ

More from DriveSpark

Article Published On: Tuesday, December 4, 2012, 10:56 [IST]
English summary
Ever wondered about 10 seater Harley Davidson bike. Steve Hopkins has built the 10 seat and seven engine Harley Davidson bike. Here we are giving some pictures of that 10 seater Harley Davidson bike.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+