ಬಜಾಜ್ ಪಾರಮ್ಯಕ್ಕೆ ಹೋಂಡಾ ಕೊಡಲಿ ಪೆಟ್ಟು
ಹೋಂಡಾ ಕಂಪನಿಯು ಕೆಲವು ಗಂಟೆಗಳ ಹಿಂದೆ(ಮೇ 15) 110 ಸಿಸಿಯ ಡ್ರೀಮ್ ಯುಗ ಬೈಕ್ ಹೊರತಂದಿದೆ. ಇದು ದೇಶದ ಮಾಸ್ ಗ್ರಾಹಕರನ್ನು ಸೆಳೆಯುವ ಬೈಕಾಗಿದೆ. ಈ ಬೈಕ್ 8 ಸಾವಿರ ಆವರ್ತನಕ್ಕೆ 9 ಅಶ್ವಶಕ್ತಿ ಮತ್ತು 6 ಸಾವಿರ ಆವರ್ತನಕ್ಕೆ 9 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.
ಹೊಸ ಡ್ರೀಮ್ ಯುಗ ಬೈಕ್ ಮೂಲಕ ಜಪಾನಿನ ಕಂಪನಿಯು ದೇಶದ ಅಗ್ಗದ ಬೈಕ್ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಇದಕ್ಕೂ ಮೊದಲು ಹೀರೋ ಮೈತ್ರಿಯಿರುವಾಗ ಇಂತಹ ಬೈಕುಗಳನ್ನು ರಸ್ತೆಗಿಳಿಸಲಾಗುತ್ತಿತ್ತು. ಆದರೆ ಮೈತ್ರಿ ಕಡಿದುಕೊಂಡ ನಂತರ ಕಂಪನಿಯು ಪ್ರಥಮ ಬಾರಿಗೆ ಅಗ್ಗದ ಕಮ್ಯೂಟರ್ ಬೈಕ್ ಸೆಗ್ಮೆಂಟಿಗೆ ಪ್ರವೇಶಿಸಿದೆ.
ಕಳೆದ ಆರು ತಿಂಗಳಲ್ಲಿ ಇವೆರಡು ಕಂಪನಿಗಳ ನಡುವಿನ ಅಂತರ ಕಡಿಮೆಯಾಗುತ್ತ ಬಂದಿದೆ. ಅಂದರೆ ದೇಶಿ ಮಾರುಕಟ್ಟೆಯಲ್ಲಿ ಬಜಾಜ್ 25.7 ಲಕ್ಷ ವಾಹನಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ಅವಧಿಗಿಂತ ಶೇಕಡ 6.3ರಷ್ಟು ಪ್ರಗತಿ ದಾಖಲಿಸಿತ್ತು. ಹೋಂಡಾ ಕಂಪನಿಯು ಸುಮಾರು 20 ಲಕ್ಷ ವಾಹನ ಮಾರಾಟ ಮಾಡಿದ್ದು, ಹಿಂದಿನ ವರ್ಷಕ್ಕಿಂತ ಶೇಕಡ 29ರಷ್ಟು ಪ್ರಗತಿ ದಾಖಲಿಸಿದೆ.
ಇದೇ ಸಮಯದಲ್ಲಿ ಹೋಂಡಾ ಕಂಪನಿಯು ಸ್ಕೂಟರ್ ಸೆಗ್ಮೆಂಟಿನಲ್ಲೂ ಪಾರಮ್ಯ ಮೆರೆಯುತ್ತಿದೆ. ಕಂಪನಿಯು ದೇಶದ ಬೃಹತ್ ಸ್ಕೂಟರ್ ಮಾರುಕಟ್ಟೆಯಾಗಿದ್ದು, ಒಟ್ಟಾರೆ ಮಾರುಕಟ್ಟೆ ಪಾಲಿನಲ್ಲಿ ಶೇಕಡ 48ರಷ್ಟನ್ನು ವ್ಯಾಪಿಸಿಕೊಂಡಿದೆ. ಹೋಂಡಾ ಸ್ಕೂಟರ್ ಮಾರಾಟ ಕಳೆದ ವರ್ಷಕ್ಕಿಂತ ಶೇಕಡ 24.5ರಷ್ಟು ಏರಿಕೆ ಕಂಡಿದೆ.
ಬಜಾಜ್ ಕಂಪನಿಯು ಡ್ರೀಮ್ ಯುಗಕ್ಕೆ ಸೆಡ್ಡು ನೀಡುವ ಅಗ್ಗದ ಬೈಕೊಂದನ್ನು ತರುವ ಮೂಲಕ ಹೋಂಡಾವನ್ನು ಹಿಂದಿಕ್ಕುವುದೋ ಕಾದುನೋಡಬೇಕಿದೆ.


Click it and Unblock the Notifications









