ಡಿಸ್ಕವರ್ vs ಸಿಬಿ ಶೈನ್: ಯಾವ ಬೈಕ್ ಫೈನ್?
ಬಜಾಜ್ ಡಿಸ್ಕವರ್ 125 ಸಿಸಿ ಬೈಕ್ ಸೆಲ್ಫ್ ಸ್ಟಾರ್ಟ್, ಅಲಾಯ್ ವೀಲ್ಸ್, 10 ಲೀಟರಿನ ಇಂಧನ ಟ್ಯಾಂಕ್ ಸಾಮರ್ಥ್ಯ ಮತ್ತು ರೈಡ್ ಕಂಟ್ರೋಲ್ ಸ್ವಿಚ್ ಹೊಂದಿದೆ. ಹೋಂಡಾ ಸಿಬಿ ಶೈನ್ ಬೈಕಿನಲ್ಲಿ ನಾಲ್ಕು ಗೇರುಗಳು, ಲೊ ಫ್ಯೂಯಲ್ ಇಂಡಿಕೇಟರ್ ಮತ್ತು 124.7 ಸಿಸಿ ಎಂಜಿನ್ ಇದೆ.
ದರ: ಇದರಲ್ಲಿ ಡಿಸ್ಕವರ್ ದರ 59 ಸಾವಿರ ರು. ಇದ್ದರೆ, ಹೋಂಡಾ ಸಿಬಿ ಶೈನ್ ದರ ಸೆಲ್ಫ್, ಕಿಕ್ , ಅಲಾಯ್ ಆವೃತ್ತಿಗೆ ಅನುಗುಣವಾಗಿ ಸುಮಾರು 58 ಸಾವಿರ ರು.ನಿಂದ 66 ಸಾವಿರ ರು.ವರೆಗಿದೆ. ಇವೆರಡು ಬೈಕುಗಳ ದರದ ನಡುವೆ ಕೆಲವು ಸಾವಿರ ರು. ಅಂತರವಿದೆಯಷ್ಟೇ.
ಎಂಜಿನ್: ಡಿಸ್ಕವರ್ ಡಿಟಿಎಸ್ಐ ಎಂಜಿನ್ ಹೊಂದಿದೆ. ಇದರ ಸಿಸಿ 124.6 ಸಿಸಿ. ಸಿಬಿ ಶೈನ್ 124.7 ಸಿಸಿ ಹೊಂದಿದೆ. ಎರಡೂ ಎಂಜಿನುಗಳು ನಾಲ್ಕು ಸ್ಟ್ರೋಕ್ ಹೊಂದಿವೆ. ಇವೆರಡೂ ಬೈಕುಗಳು ಕಿಕ್ ಸ್ಟ್ರಾಟ್ ಮತ್ತು ಎಲೆಕ್ಟ್ರಿಕ್ ಸ್ಟಾರ್ಟ್ ಹೊಂದಿವೆ.
ಡಿಸ್ಕವರ್ ಬೈಕ್ 11.51 ಹಾರ್ಸ್ ಪವರ್ ನೀಡಿದರೆ, ಶೈನ್ ಬೈಕ್ 10.3 ಬಿಎಚ್ ಪಿ ನೀಡುತ್ತದೆ. ಡಿಸ್ಕವರ್ 10.8 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಆದರೆ ಸಿಬಿ ಶೈನ್ 11 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಎರಡೂ ಬೈಕುಗಳೂ ಡಿಜಿಟಲ್ ಸಿಡಿಐ ಇಗ್ನಿಷನ್ ಹೊಂದಿವೆ.
ವೇಗ ಮತ್ತು ಮೈಲೇಜ್: ಡಿಸ್ಕವರ್ ಗರಿಷ್ಠ ವೇಗ 103 ಕಿ.ಮೀ. ಆದರೆ ಸಿಬಿ ಶೈನ್ ಗರಿಷ್ಠ ವೇಗ 100 ಕಿ.ಮೀ. ಇವೆರಡರ ಮೈಲೇಜ್ ಪ್ರತಿಲೀಟರಿಗೆ ಕ್ರಮವಾಗಿ 65 ಕಿ.ಮೀ. ಮತ್ತು 58 ಕಿ.ಮೀ. ಆಗಿದೆ. ಎರಡೂ ಬೈಕುಗಳೂ ನಾಲ್ಕು ಗೇರ್ ಹೊಂದಿವೆ. ಎರಡರಲ್ಲೂ ಡಿಸ್ಕ್ ಮತ್ತು ಡ್ರಮ್ ಬ್ರೇಕ್ ಇವೆ.
ಡಿಸ್ಕವರ್ ಮತ್ತು ಶೈನ್ ಬೈಕುಗಳ ಇಂಧನ ಟ್ಯಾಂಕ್ ಸಾಮರ್ಥ್ಯ ಕ್ರಮವಾಗಿ 10 ಮತ್ತು 11 ಲೀಟರ್ ಆಗಿದೆ. ಇದರಲ್ಲಿ ಡಿಸ್ಕವರ್ ಬೈಕ್ ಟ್ಯಾಂಕಿನಲ್ಲಿ 2.3 ಲೀಟರ್ ರಿಸರ್ವ್ ಸಾಮರ್ಥ್ಯ ಹೊಂದಿದೆ. ಶೈನ್ ಬೈಕ್ ಒಂದು ಲೀಟರ್ ರಿಸರ್ವ್ ಸಾಮರ್ಥ್ಯ ಹೊಂದಿದೆ.
ನಿಮಗೆ ಯಾವ ಬೈಕ್ ಇಷ್ಟವಾಯಿತು?


Click it and Unblock the Notifications
