ಬಜಾಜ್ ಆಟೋ ಮತ್ತು ಕೆಟಿಎಂ ಲವ್ ಇನ್ನಷ್ಟು ಡೀಫ್
ಬಜಾಜ್ ಆಟೋ ಕಂಪನಿಯು ಕೆಟಿಎಂ ಕಂಪನಿಯ ಶೇಕಡ 47ರಷ್ಟು ಷೇರನ್ನು ತನ್ನದಾಗಿಸಿಕೊಂಡಿದೆ. ಕೆಟಿಎಂ ಕಂಪನಿಯು ಸ್ಪೋರ್ಟ್ಸ್ ಬೈಕ್ ಉತ್ಪಾದನೆಯಲ್ಲಿ ಪ್ರಮುಖ ಕಂಪನಿಯಾಗಿದೆ. ಬಜಾಜ್ ಶೀಘ್ರದಲ್ಲಿ ನೂತನ ಪಲ್ಸರ್ 200ಎನ್ಎಸ್ ಪರಿಚಯಿಸಲಿದ್ದು, ಇದರಲ್ಲೂ ಕೆಟಿಎಂ ಟಚ್ ಇರಲಿದೆ.
ಆರಂಭದಲ್ಲಿ ಕೆಟಿಎಂ ಡ್ಯೂಕ್ ಕಂಪನಿಯ ಶೇಕಡ 6.3ರಷ್ಟು ಪಾಲನ್ನು ಬಜಾಜ್ ಖರೀದಿಸಿಸಿತ್ತು. ಆದರೆ ಇತ್ತೀಚೆಗೆ ಯುರೋಪಿನಿಂದ ಬಂದ ವರದಿಯ ಪ್ರಕಾರ ಈಗ ಬಜಾಜ್ ಆಟೋ ಶೇಕಡ 47ರಷ್ಟು ಕೆಟಿಎಂ ಪಾಲನ್ನು ಪಡೆದಿದೆ. ಕೆಟಿಎಂನಲ್ಲಿ ಗರಿಷ್ಠ ಪಾಲು ಪಡೆಯಲು ಆಸಕ್ತಿಯಿಲ್ಲವೆಂದು ಈ ಹಿಂದೆ ಬಜಾಜ್ ಸಿಇಒ ರಾಜೀವ್ ಬಜಾಜ್ ಹೇಳಿದ್ದರು.
2007ನೇ ಇಸವಿಯಲ್ಲಿಯೇ ಬಜಾಜ್ ಕಂಪನಿಯು ಕೆಟಿಎಂ ಷೇರು ಖರೀದಿಸಲು ಆರಂಭಿಸಿತ್ತು. ಯುರೋಪಿನಲ್ಲಿ ಕೆಟಿಎಂ ಹೆಸರು ಜನಪ್ರಿಯವಾಗಿರುವುದರಿಂದ ಅದೇ ಬ್ರಾಂಡ್ ಹೆಸರಲ್ಲಿ ಜಾಗತಿಕವಾಗಿ ಮುಂದುವರೆಯಲು ಕಂಪನಿ ನಿರ್ಧರಿಸಿದೆ.
KTM Duke 125 ದೇಶಕ್ಕೆ ಪರಿಚಯಿಸಿದ ಕೆಟಿಎಂ ಬ್ರಾಂಡಿನ ಮೊದಲ ಬೈಕ್. ಇದನ್ನು ಬಜಾಜ್ ಘಟಕದಲ್ಲಿಯೇ ಉತ್ಪಾದಿಸಲಾಗಿತ್ತು. ಡ್ಯೂಕ್ 200 ಬೈಕಿನ ಎಂಜಿನ್ ಬಳಸಿ ಕಂಪನಿಯು ಶೀಘ್ರದಲ್ಲಿ ಪಲ್ಸರ್ 200ಎನ್ಎಸ್ ಬೈಕನ್ನು ಪರಿಚಯಿಸಲಿದೆ.


Click it and Unblock the Notifications









