ಬಜಾಜ್ ಕೆಟಿಎಂ ಡ್ಯೂಕ್ ಬೈಕ್ ರಸ್ತೆಗೆ, ದರ 1.17 ಲಕ್ಷ ರು

ಕಂಪನಿಯು ನೂತನ ಡ್ಯೂಕ್ ಬೈಕಿನ ಉತ್ಪಾದನೆಯನ್ನು ಒಂದೆರಡು ವಾರದಲ್ಲಿ ಆರಂಭಿಸುವ ನಿರೀಕ್ಷೆಯಿದೆ. ಬಜಾಜ್ ಕಂಪನಿಯು ಕವಾಸಕಿ ಶೋರೂಂಗಳಲ್ಲಿ ನೂತನ ಡ್ಯೂಕ್ 200 ಬೈಕನ್ನು ಮಾರಾಟ ಮಾಡಲಿದೆ.
ನೂತನ ಡ್ಯೂಕ್ 200 ಯುರೋಪಿನ ಎರಡನೇ ಬೃಹತ್ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಕೆಟಿಎಂನ ಪ್ರೀಮಿಯಂ ಸ್ಟ್ರೀಟ್ ಬೈಕಾಗಿದೆ. ಇದು 200ಸಿಸಿಯ ಲಿಕ್ವಿಡ್ ಕೂಲ್ಡ್, ಡಿಒಎಚ್ ಸಿ, ನಾಲ್ಕು ಕವಾಟ, ಸಿಂಗಲ್ ಸಿಲಿಂಡರ್, ಡಿಒಎಚ್ ಸಿ ಎಂಜಿನ್ ಹೊಂದಿದೆ. ಇದು 250 ಹಾರ್ಸ್ ಪವರ್ ಮತ್ತು 19ಎನ್ ಎಂ ಟಾರ್ಕ್ ಪವರ್ ನೀಡಲಿದೆ.
"ದೇಶದ ವಾಹನ ಮಾರುಕಟ್ಟೆಗೆ ಕೆಟಿಎಂ ಬೈಕನ್ನು ಹೆಚ್ಚು ಆಶಾವಾದದಿಂದ ಪರಿಚಯಿಸಿದ್ದೇವೆ. ಕಂಪನಿಯ ಏಕೀಕೃತ ವಿನ್ಯಾಸ ಮತ್ತು ಎಂಜಿನಿಯರಿಂಗ್ ತತ್ವದೊಂದಿಗೆ ಈ ಬೈಕ್ ಹೊರತರಲಾಗಿದೆ" ಎಂದು ಕೆಟಿಎಂ ಸ್ಪೋರ್ಟ್ ಮೋಟರ್ ಸೈಕಲ್ಸ್ ಎಜಿ ಕಂಪನಿಯ ಸಿಇಒ ಸ್ಟಿಫೆನ್ ಪಿಯರೆರ್ ಹೇಳಿದ್ದಾರೆ.
"ಕಳೆದ ಐದು ವರ್ಷಗಳಿಂದ ಕೆಟಿಎಂನೊಂದಿಗಿನ ಸಹಭಾಗಿತ್ವದ ಫಲವಾಗಿ ನೂತನ ಕೆಟಿಎಂ ಡ್ಯೂಕ್ ಬೈಕ್ ರಸ್ತೆಗಿಳಿದಿದೆ. ನೂತನ ಕೆಟಿಎಂ ಡ್ಯೂಕ್ ಮತ್ತು ಬಜಾಜ್ ಪಲ್ಸರ್ ಕಂಪನಿಯ ವಹಿವಾಟನ್ನು ಇನ್ನಷ್ಟು ಸದೃಢಗೊಳಿಸುವ ನಿರೀಕ್ಷೆಯಿದೆ" ಎಂದು ಬಜಾಜ್ ಆಟೋ ವ್ಯವಸ್ಥಾಪಕ ರಾಜೀವ್ ಬಜಾಜ್ ಹೇಳಿದ್ದಾರೆ.


Click it and Unblock the Notifications








