ಬಜಾಜ್ ಆಟೋ ಮಾರಾಟ ಶೇಕಡ 6ರಷ್ಟು ಇಳಿಕೆ

ದೇಶದ ಎರಡನೇ ಬೃಹತ್ ದ್ವಿಚಕ್ರವಾಹನ ತಯಾರಿಕಾ ಕಂಪನಿ ಬಜಾಜ್ ಆಟೋ ಲಿಮಿಟೆಡ್ ಒಟ್ಟಾರೆ ಮಾರಾಟವು ಕಳೆದ ತಿಂಗಳು ಶೇಕಡ 6ರಷ್ಟು ಇಳಿಕೆ ಕಂಡಿದೆ. ಕಳೆದ ತಿಂಗಳು ಕಂಪನಿಯು ಒಟ್ಟಾರೆ 3,45,162 ಯುನಿಟ್ ವಾಹನ ಮಾರಾಟ ಮಾಡಿದ್ದು, ಕಳೆದ ವರ್ಷದ ಜೂನ್ ತಿಂಗಳ 3,66,657 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಗಮನಾರ್ಹವಾಗಿ ಇಳಿಕೆ ದಾಖಲಿಸಿದೆ.

ಇದೇ ಸಮಯದಲ್ಲಿ ಕಂಪನಿಯ ಒಟ್ಟಾರೆ ದ್ವಿಚಕ್ರವಾಹನ ಮಾರಾಟ 3,18,377 ಯುನಿಟಿಗೆ ತಲುಪಿದ್ದು, ಕಳೆದ ವರ್ಷದ ಜೂನ್ ತಿಂಗಳ 3,22,827 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಶೇಕಡ ಒಂದರಷ್ಟು ಇಳಿಕೆ ಕಂಡಿದೆ.

ವಾಣಿಜ್ಯ ವಾಹನ ವಿಭಾಗದಲ್ಲೂ ಕಂಪನಿಯ ಮಾರಾಟ ಗಮನಾರ್ಹವಾಗಿ ಇಳಿಕೆ ದಾಖಲಿಸಿದೆ. ಕಳೆದ ತಿಂಗಳು ಕಂಪನಿಯು 26,785 ಯುನಿಟ್ ವಾಣಿಜ್ಯ ವಾಹನ ಮಾರಾಟ ಮಾಡಿದ್ದು, 2011ರ ಜೂನ್ ತಿಂಗಳ 43,830 ಯುನಿಟ್ ವಾಣಿಜ್ಯ ವಾಹನ ಮಾರಾಟಕ್ಕೆ ಹೋಲಿಸಿದರೆ ಶೇಕಡ 39ರಷ್ಟು ಇಳಿಕೆ ದಾಖಲಿಸಿದೆ.

"ಶ್ರೀಲಂಕಾ ಮತ್ತು ಈಜಿಪ್ಟ್ ದೇಶಗಳಲ್ಲಿ ಮೂರು ಚಕ್ರದ ವಾಹನಗಳ ಮಾರಾಟ ಕುಸಿದಿರುವುದು ಮಾರಾಟ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಜುಲೈ ನಂತರ ಇದು ಸಹಜ ಸ್ಥಿತಿಗೆ ಬರಲಿದೆ" ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಇದೇ ಸಮಯದಲ್ಲಿ ಕಂಪನಿಯ ರಫ್ತು ವಹಿವಾಟು ಕೂಡ ಗಮನಾರ್ಹವಾಗಿ ಕುಸಿದಿದೆ. ಕಂಪನಿಯು ಕಳೆದ ತಿಂಗಳು 1,16,062 ಯುನಿಟ್ ರಫ್ತು ಮಾಡಿದ್ದು, ಕಳೆದ ವರ್ಷದ ಜೂನ್ ತಿಂಗಳ 142,124 ಯುನಿಟ್ ರಫ್ತಿಗೆ ಹೋಲಿಸಿದರೆ ಶೇಕಡ 18ರಷ್ಟು ಇಳಿಕೆ ಕಂಡಿದೆ.

ಕಂಪನಿಯು ಇಲ್ಲಿವರೆಗಿನ(ಜೂನ್ ಅಂತ್ಯ) ಆರ್ಥಿಕ ವರ್ಷದ ಮಾರಾಟ ಶೇಕಡ 1ರಷ್ಟು ಇಳಿಕೆ ಕಂಡಿದೆ. ಕಳೆದ ತಿಂಗಳವರೆಗಿನ ಆರ್ಥಿಕ ವರ್ಷದಲ್ಲಿ ಕಂಪನಿಯು 1,078,971 ವಾಹನ ಮಾರಾಟ ಮಾಡಿದೆ. ಇದಕ್ಕೂ ಹಿಂದಿನ ಇದೇ ಆರ್ಥಿಕ ವರ್ಷದಲ್ಲಿ ಕಂಪನಿಯ ಮಾರಾಟ 1,092,815 ಯುನಿಟ್ ಆಗಿತ್ತು.

More from DriveSpark

Article Published On: Monday, July 2, 2012, 16:55 [IST]
English summary
India's second biggest two-wheeler manufacturer, Bajaj Auto reported a sales decline of 1.4 per cent in the month of June at 3,18,377 units. The company had sold 3,22,827 units in the corresponding month last year, Bajaj Auto Ltd (BAL) said in a statement.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+