ಟಿಕ್ ಟಿಕ್ ಒನ್: ಬಜಾಜ್ ಕೆಟಿಎಂ ಡ್ಯೂಕ್ ಬೈಕಿಗೆ ಕ್ಷಣಗಣನೆ

Bajaj Set To Launch KTM Duke 200 January 25
ದೇಶದ ದ್ವಿಚಕ್ರ ಮಾರುಕಟ್ಟೆಗೆ 200 ಸಿಸಿಯ ಸರದಾರ ಬೈಕ್ ಕೆಟಿಎಂ ಡ್ಯೂಕ್ ಆಗಮಿಸಲು ಕ್ಷಣಗಣನೆ ಆರಂಭವಾಗಿದೆ. ಜನವರಿ 25ರಂದು ಬಜಾಜ್ ಕೆಟಿಎಂ ಡ್ಯೂಕ್ ದೇಶದ ರಸ್ತೆಗಿಳಿಯುವುದು ನಿಚ್ಚಳವಾಗಿದೆ. ಇದು ಡ್ಯೂಕ್ ಬೈಕಿನ ಮೊದಲ ಜಾಗತಿಕ ಲಾಂಚಿಂಗ್ ಕಾರ್ಯಕ್ರಮ ಕೂಡ ಹೌದು.

ಕೆಟಿಎಂ ಡ್ಯೂಕ್ ಬೈಕನ್ನು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಾದ ಬ್ರೆಝಿಲ್, ಮಲೇಷ್ಯಾ ಮತ್ತು ಆಫ್ರೀಕಾ ದೇಶಗಳಿಗೂ ಪರಿಚಯಿಸಲು ಕಂಪನಿ ಯೋಜಿಸಿದೆ. ಎಲ್ಲಕ್ಕಿಂತ ಪ್ರಪ್ರಥಮವಾಗಿ ಈ ಬೈಕು ದೇಶದ ರಸ್ತೆಗಿಳಿಯಲಿದೆ ಎಂಬುದು ನಾವು ಖುಷಿಪಡಬಹುದಾದ ವಿಚಾರ.

ಆಸ್ಟ್ರೇಲಿಯಾದ ಕೆಟಿಎಂ ಬೈಕ್ ಕಂಪನಿಯ ಮಾಲಿಕತ್ವವನ್ನು ಬಜಾಜ್ ಆಟೋ ಹೊಂದಿದೆ. ಡ್ಯೂಕ್ ಆಸ್ಟ್ರೇಲಿಯಾದ ಬೈಕಾಗಿದ್ದರೂ ಬಜಾಜ್ ಇದಕ್ಕೆ ಸಾಕಷ್ಟು ಲೋಕಪ್ ಬಿಡಿಭಾಗಗಳನ್ನು ಬಳಸಿದೆ. ದೇಶದಲ್ಲಿ ಡ್ಯೂಕ್ ಬೈಕ್ ದರ ತಗ್ಗಿಸುವ ಉದ್ದೇಶದಿಂದ ಕಂಪನಿಯು ಸಾಕಷ್ಟು ಸ್ಥಳೀಯ ಬಿಡಿಭಾಗಗಳನ್ನು ಬಳಸಿದೆ.

ನೂತನ ಕೆಟಿಎಂ ಡ್ಯೂಕ್ 200 ಬೈಕಿನ ದರ ದೇಶದಲ್ಲಿ ಸುಮಾರು ಒಂದು ಲಕ್ಷ ರುಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ. ಪೈಪೋಟಿ ಉದ್ದೇಶದಿಂದ ಯಮಹಾ ಆರ್15 ಮತ್ತು ಹೋಂಡಾ ಸಿಬಿಆರ್ 250ಆರ್ ಬೈಕ್ ದರಗಳಿಗಿಂತ ನೂತನ ಡ್ಯೂಕ್ ದರ ಕಡಿಮೆ ಇರಬಹುದು ಎಂದು ಕೆಲವು ವರದಿಗಳು ಹೇಳಿವೆ.

ಕೆಟಿಎಂ ಡ್ಯೂಕ್ ಬೈಕ್ 200ಸಿಸಿಯ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, ಗರಿಷ್ಠ 25 ಹಾರ್ಸ್ ಪವರ್ ಮತ್ತು 20 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಈ ಬೈಕ್ 6 ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಕಣ್ಣು ಕನ್ನಡ ಡ್ರೈವ್ ಸ್ಪಾರ್ಕ್ ಮೇಲಿರಲಿ.

More from DriveSpark

Article Published On: Monday, January 23, 2012, 17:29 [IST]
English summary
The Indian two wheeler segment is all set for a new entry in the form of the KTM Duke 200. In fact, the KTM Duke 200's launch in India will be its global launch. This new sports bike has been developed for emerging markets and will soon be launched in other countries including Brazil, Malaysia and African countries.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+