ಬರುತ್ತಿದೆ ಬಜಾಜ್‌ನಿಂದ ಅತಿ ದುಬಾರಿ 100ಸಿಸಿ ಬೈಕ್

ದೇಶದಲ್ಲಿ ಹೀರೊ ಮೊಟೊಕಾರ್ಪ್ ಇಂಡಿಯಾಗೆ ಪ್ರಬಲ ಪ್ರತಿಸ್ಪರ್ಧಿಯಾಗಿರುವ ಬಜಾಜ್ ಆಟೋ ಸದ್ಯದಲ್ಲೇ ಅತಿ ದುಬಾರಿ 100ಸಿಸಿ ಬೈಕ್‌ವೊಂದನ್ನು ಅನಾವರಣಗೊಳಿಸಲಿದೆ. ಇದು ತಾಂತ್ರಿಕವಾಗಿಯೂ ಅತ್ಯಂತ ಮುಂದುವರಿದ ಬೈಕ್ ಆಗಿರಲಿದ್ದು, ಮುಂದಿನ ಜನವರಿಯಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ.

100 ಸಿಸಿ ಸೆಗ್ಮೆಂಟ್‌ಗೆ ಸೇರಿರುವ ಅತಿ ದುಬಾರಿ ಬೈಕ್ ತಾಂತ್ರಿಕವಾಗಿಯೂ ಮುಂದುವರಿದ ಬೈಕ್ ಆಗಿರಲಿದೆ ಎಂದು ಬಜಾಜ್ ಆಟೋ (ಮೋಟಾರ್‌ಸೈಕಲ್ ಉದ್ಯಮ) ಅಧ್ಯಕ್ಷ ಕೆ. ಶ್ರೀನಿವಾಸ್ ತಿಳಿಸಿದ್ದಾರೆ. ಹಾಗಿದ್ದರೂ ಬೈಕ್ ದರ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿರುವ ಶ್ರೀನಿವಾಸ್, ದರ ಮುಖ್ಯವಲ್ಲ; ತಾಂತ್ರಿಕವಾಗಿ ಅತ್ಯಂತ ಮುಂದುವರಿದ ಬೈಕ್ ಆಗಿರಲಿದೆ ಎಂದು ದ್ವಿಚಕ್ರ ವಾಹನ ಪ್ರಿಯರಲ್ಲಿ ಕುತೂಹಲ ಸೃಷ್ಟಿ ಮಾಡುವ ಪ್ರಯತ್ನ ಮಾಡಿದರು.

ಪ್ರಸ್ತುತ ಪ್ಲಾಟಿನಾ ಹಾಗೂ ಡಿಸ್ಕವರ್ ರೇಂಜ್‌ಗಳಲ್ಲಿ 100ಸಿಸಿ ಬೈಕ್‌ಗಳನ್ನು ಮಾರಾಟ ಮಾಡುತ್ತಿರುವ ಬಜಾಜ್ ಆಟೋ, ಈ ಮಾದರಿಗಳಿಗೆ 38,990 ರು.ಗಳಿಂದ 44,497 ರು.ಗಳ ವರೆಗೆ ದರವನ್ನು ನಿಗದಿಪಡಿಸಿದೆ.

ಅಂತೆಯೇ ಸೆಪ್ಟೆಂಬರ್ ತಿಂಗಳ ಮಾರಾಟದಲ್ಲಿ ದೇಶದ ಅತಿ ಹೆಚ್ಚು ಸೇಲ್ ಆಗುತ್ತಿರುವ ಹೀರೊ ಮೊಟೊಕಾರ್ಪ್‌ನ ಸ್ಲೆಂಡರ್ ಬೈಕ್‌ಗಳನ್ನು ಹಿಮ್ಮೆಟ್ಟಿಸಿರುವ ಡಿಸ್ಕವರ್ 1.22 ಲಕ್ಷ ಯುನಿಟ್‌ ಸೇಲ್ ಮಾಡಿರುವುದಾಗಿ ಕಂಪನಿ ತಿಳಿಸಿದೆ. ಈ ಅವಧಿಯಲ್ಲಿ ಸ್ಲೆಂಡರ್ ಮಾರಾಟ 1.21 ಲಕ್ಷ ಯುನಿಟ್‌ಗಳಾಗಿವೆ.

ಆಟೋಮೊಬೈಲ್ ಉದ್ಯಮದಲ್ಲಿ ಶೇಕಡಾ ಒಂದರಷ್ಟು ವೃದ್ಧಿ ದರ ಕುಸಿದಿರುವುದರ ಹೊರತಾಗಿಯೂ ನಿರ್ವಹಣೆಯಲ್ಲಿ ಬಜಾಜ್ ಆಟೋ ಪ್ರಗತಿ ಸಾಧಿಸಿರುವುದಾಗಿ ಎಂದು ಕಂಪನಿ ಅಭಿಪ್ರಾಯಪಟ್ಟಿದೆ. ಪ್ರಸ್ತುತ ಹಬ್ಬದ ಸೀಸನಿನ ಒಂದು ವಾರದ ಅವಧಿಯಲ್ಲಿ ಶೇಕಡಾ 6ರಷ್ಟು ಮಾರಾಟ ವೃದ್ಧಿ ಕಂಡಿರುವುದು ಉತ್ತಮ ಸಂಕೇತವಾಗಿದೆ ಎಂದು ಸಹ ಕಂಪನಿ ಅಭಿಪ್ರಾಯಪಟ್ಟಿದೆ.

More from DriveSpark

Article Published On: Thursday, October 25, 2012, 11:03 [IST]
English summary
A top company official has revealed that Bajaj Auto is working on a 100cc bike, which will be launched Early January 2013. This new bike from Bajaj Auto, will be the most expensive and technologically advanced bike in the 100cc segment till date. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+