ಮಹೀಂದ್ರ ಸ್ಕೂಟರ್ ಖರೀದಿಸಿ ಪೆಟ್ರೋಲ್ ಉಚಿತವಾಗಿ ಪಡೆಯಿರಿ!
ಹೌದು, ಈ ವಿನೂತನ ಆಫರ್ ಗ್ಯಾರಂಟಿ ಮಾಡಿರುವುದು ದೇಶದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪೆನಿ ಆಗಿರುವ ಮಹೀಂದ್ರ ಸಂಸ್ಥೆ. ಈ ಹಬ್ಬದ ಸೀಸನಿನಲ್ಲಿ ಗ್ರಾಹಕರನ್ನು ಹೆಚ್ಚೆಚ್ಚು ಆಕರ್ಷಿಸಲು ಹೊರಟಿರುವ ಮಹೀಂದ್ರ, ತಮ್ಮ ಬ್ರಾಂಡ್‌ನ ಸೂಟ್ಕರ್ ಖರೀದಿಸಿದರೆ 2000 ರೂಪಾಯಿಗಳ ವರೆಗೆ ಪೆಟ್ರೋಲ್ ಉಚಿತವಾಗಿ ನೀಡುವುದಾಗಿ ಘೋಷಿಸಿದೆ.
ಹಬ್ಬದ ಸಂದರ್ಭದಲ್ಲಿ ಜನರು ತಮ್ಮ ಬಂಧು ಮಿತ್ರರ ಮನೆಗೆ ತೆರಳಿ ಹಬ್ಬ ಆಚರಿಸಿಕೊಳ್ಳಲು ದ್ವಿಚಕ್ರ ವಾಹನಗಳನ್ನೇ ಹೆಚ್ಚಾಗಿ ಬಳಸುತ್ತಾರೆ. ಇದನ್ನೇ ಮನಗಂಡಿರುವ ಮಹೀಂದ್ರ ಕಂಪೆನಿ 'ಫೇಸ್ಟಿವಲ್ ಪ್ರೊಮೊಷನ್ ಆಫರ್' ಮುಂದಿರಿಸಿದ್ದು, ಯಾವುದೇ ಮಹೀಂದ್ರ ಸ್ಕೂಟರ್ ಖರೀದಿರಿದಿಸಿದರೆ 2,000 ರೂಪಾಯಿಗಳ ವರೆಗೆ ಡಿಸ್ಕೌಂಟ್ ಲಭಿಸಲಿದೆ. ಇದನ್ನು ಪೆಟ್ರೋಲ್ ಖರೀದಿಗಾಗಿ ಗ್ರಾಹಕರು ಬಳಸಬಹುದಾಗಿದೆ.
2012 ಅಕ್ಟೋಬರ್ 8ರಿಂದ ಆರಂಭವಾಗಿರುವ ಈ ಫೇಸ್ಟಿವಲ್ ಪ್ರೊಮೊಷನ್ ಆಫರ್ ಅಕ್ಟೋಬರ್ 31ರ ವರೆಗೂ ಕಂಪೆನಿಯ ಎಲ್ಲ 411 ಡೀಲರ್‌ಶಿಪ್‌ಗಳಲ್ಲಿ ಲಭ್ಯವಿರಲಿದೆ. ಮಹೀಂದ್ರ ಕಂಪನಿಯು ಈ ವಿನೂತನ ಯೋಜನೆಗಾಗಿ ಆಕರ್ಷಕ ಟಿ.ವಿ ಜಾಹೀರಾತನ್ನು ಕೂಡಾ ಬಿತ್ತಾರಗೊಳಿಸಿದೆ. ಈ ಆಫರ್ 2012ರಲ್ಲಿ ಬಿಡುಗಡೆಗೊಂಡ ರೊಡಿಯೊ ಹಾಗೂ ಡ್ಯುರೋ ಆವೃತ್ತಿಗಳಲ್ಲೂ ಲಭ್ಯವಿರಲಿದೆ.


Click it and Unblock the Notifications









