ಹೀರೊ ಪ್ಯಾಷನ್ ಎಕ್ಸ್-ಪ್ರೊ ಬರಮಾಡಿಕೊಳ್ಳಲು ಸಜ್ಜಾಗಿ!
ಬೈಕ್ ಕ್ರೇಜ್ ಹೊಂದಿರುವ ಪ್ರತಿಯೊಬ್ಬ ಗ್ರಾಹಕನು ಈ ಸುದ್ದಿ ಓದಲೇಬೇಕು. ಯಾಕೆಂದರೆ ದೇಶದ ಬೈಕ್ ಗ್ರಾಹಕರಿಗೆ ಅದರಲ್ಲೂ ವಿಶೇಷವಾಗಿಯೂ ಯುವ ಜನಾಂಗಕ್ಕೆ ಸಿಹಿ ಸುದ್ದಿ ಬಿತ್ತರಿಸುತ್ತಿರುವ ವಿಶ್ವದ ಅತಿ ದೊಡ್ಡ (ಉತ್ಪನ್ನದಲ್ಲಿ) ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಹೀರೊ ಮೊಟೊಕಾರ್ಪ್ ಸದ್ಯದಲ್ಲೇ ನವನವೀನ ಮಾದರಿಯ ಪ್ಯಾಷನ್ ಎಕ್ಸ್-ಪ್ರೊ 110ಸಿಸಿ ಬೈಕನ್ನು ಅನಾವರಣಗೊಳಿಸಲಿದೆ.
ಪ್ರಸ್ತುತ ಹಬ್ಬದ ಸೀಸನ್ ಜಾರಿಯಲ್ಲಿರುವಂತೆಯೇ ನಿಮ್ಮನ್ನು ಯಾವ ಹಂತದಲ್ಲೂ ಬೇಕಾದರೂ ಈ ಸಿಹಿಸುದ್ದಿ ಬಂದು ತಲುಪಬಹುದು. ಈ ಹಿಂದಿನ ಪ್ಯಾಷನ್ ಪ್ರೊಗಿಂತಲೂ ಹೆಚ್ಚಿನ ಸ್ಟೈಲಿಷ್ ಲುಕ್ ಹೊಂದಿರುವ ಹೀರೊ ಎಕ್ಸ್-ಪ್ರೊ ಖಂಡಿತವಾಗಿಯೂ ನಿಮ್ಮ ಗಮನ ಸೆಳೆಯಲಿದೆ.
2012ರ ಆರಂಭದಲ್ಲಿ ನಡೆದ ವಾಹನ ಮೇಳದ ಹೀರೊ ಇಗ್ನಿಟರ್ 125, ಮಾಸ್ಟ್ರೊ 110 ಸಿಸಿ ಹಾಗೂ ಪ್ಯಾಷನ್ ಎಕ್ಸ್-ಪ್ರೊ 110ಸಿಸಿಗಳೆಂಬ ಮೂರು ಮಾದರಿಗಳ ಬೈಕ್‌ಗಳನ್ನು ಹೀರೊ ಮೊಟೊಕಾರ್ಪ್ ಪರಿಚರಿಯಿಸಿತ್ತು. ಈ ಪೈಕಿ ಇಗ್ನಿಟರ್ ಹಾಗೂ ಮಾಸ್ಟ್ರೋ ಈಗಾಗಲೇ ರಸ್ತೆಗಿಳಿದಿವೆ. ಇದೀಗ ಬಹುನಿರೀಕ್ಷಿತ ಪ್ಯಾಷನ್ ಎಕ್ಸ್-ಪ್ರೊ ಕೂಡಾ ಗ್ರಾಹಕರ ಬಳಿ ತಲುಪಲಿದ್ದು, ಉತ್ಪಾದನೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.

ಪ್ಯಾಷನ್ ಎಕ್ಸ್-ಪ್ರೊ 110ಸಿಸಿ ಬೈಕ್
ದೀಪಾವಳಿ ಹಬ್ಬದ ಸೀಸನಿನಲ್ಲಿ ಗ್ರಾಹಕರಿಗೆ ಕೊಡುಗೆ ನೀಡಲು ಮುಂದಾಗಿರುವ ಹೀರೊಮೊಟೊಕಾರ್ಪ್ ಪ್ಯಾಷನ್ ಎಕ್ಸ್-ಪ್ರೊ ಬಿಡುಗಡೆಗೊಳಿಸಲಿದೆ. ಈ ಮೂಲಕ ಮಾರಾಟ ವೃದ್ಧಿಯನ್ನು ಗುರಿಯಿರಿಸಿಕೊಂಡಿದೆ.

ಪ್ಯಾಷನ್ ಎಕ್ಸ್-ಪ್ರೊ
110 ಸಿಸಿ ಎಂಜಿನ್‌ನೊಂದಿಗೆ ಆಗಮಿಸಲಿರುವ ಪ್ಯಾಷನ್ ಎಕ್ಸ್-ಪ್ರೊ ಪ್ರಸ್ತುತ ಚಾಲ್ತಿಯಲ್ಲಿರುವ ಸ್ಲೆಂಡರ್ ಹಾಗೂ ಪ್ಯಾಷನ್ ಆವೃತ್ತಿಗಳನ್ನು ಹಿಂದಿಕ್ಕುವ ಸಾಧ್ಯತೆಯಿದೆ. ಈ ಹಿಂದೆ ಹೊಂಡಾ ಕೂಡಾ ಸಿಬಿ ಟ್ವಿಸ್ಟರ್‌ನಲ್ಲೂ ಇದೇ ಗುಣಮಟ್ಟದ ಎಂಜಿನ್ ಬಳಕೆ ಮಾಡಿತ್ತು.

ಪ್ಯಾಷನ್ ಎಕ್ಸ್-ಪ್ರೊ
ಫೋರ್ ಸ್ಟ್ರೋಕ್, ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ 8.5 ಬಿಎಚ್‌ಪಿ ಪೀಕ್ ಪವರ್ ಉತ್ಪಾದಿಸಲಿದ್ದು, 8.9 ಎನ್‌ಎಂ ಪೀಕ್ ಟರ್ಕ್ಯೂ ಹೊಂದಿರಲಿದೆ.

ಹೀರೊ ಪ್ಯಾಷನ್ ಎಕ್ಸ್-ಪ್ರೊ
ಈ ಮುಖಾಂತರ ಇದೀಗಷ್ಟೇ ಬಿಡುಗಡೆಗೊಂಡಿರುವ ಹೊಂಡಾ ಡ್ರೀಮ್ ಯುಗ, ಸುಜುಕಿ ಹಯಾಟೆ 110 ಹಾಗೂ ಟಿವಿಎಸ್ ಸಿಟಿ ಬೈಕ್‌ಗಳಿಗೆ ಪ್ರಬಲ ಪೈಪೋಟಿ ನೀಡಲು ಪ್ಯಾಷನ್ ಎಕ್ಸ್-ಪ್ರೊ ಸಜ್ಜಾಗುತ್ತಿದೆ.

ಹೀರೊ ಪ್ಯಾಷನ್ ಎಕ್ಸ್-ಪ್ರೊ
ಪ್ಯಾಷನ್ ಎಕ್ಸ್-ಪ್ರೊ ಫ್ರಂಟ್ ವೀಲ್‌ನಲ್ಲಿ ಡಿಸ್ಕ್ ಬ್ರೇಕ್, ಎಲೆಕ್ಟ್ರಿಕ್ ಸ್ಟಾರ್ಟ್‌ಗಳಂತಹ ವೆರಿಯಂಟ್ ಫೀಚರ್‌ಗಳನ್ನು ಹೊಂದಿರಲಿದೆ.

ಹೀರೊ ಪ್ಯಾಷನ್ ಎಕ್ಸ್-ಪ್ರೊ
ಹೀರೊ ಮೋಟೊಕಾರ್ಪ್‌ನ ಪ್ಯಾಷನ್ ಎಕ್ಸ್-ಪ್ರೊ ಬೇಸ್ ವೆರಿಯಂಟ್ ಬೈಕ್ ದರವು 45 ಸಾವಿರ ರೂಪಾಯಿಗಳಿರುವ ನಿರೀಕ್ಷೆಯಿದೆ.


Click it and Unblock the Notifications