ಹರ್ಲಿ ಮಾಲಿಕರೇ ಗೋವಾ ರ‌್ಯಾಲಿಗೆ ಸಜ್ಜಾಗಿ!

Written By:

ವಿಶ್ವದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹರ್ಲಿ ಡೇವಿಡ್ಸನ್ ಇದೇ ಮೊದಲ ಬಾರಿಗೆ ದೇಶದ ಹರ್ಲಿ ಮಾಲಿಕರಿಗಾಗಿ ವಿನೂತನ ರ‌್ಯಾಲಿಯೊಂದನ್ನು ಹಮ್ಮಿಕೊಂಡಿದೆ.

ರಾಷ್ಟ್ರೀಯ ಹರ್ಲಿ ಮಾಲಿಕರ ಸಂಸ್ಥೆ (ಎಚ್.ಒ.ಜಿ) ಆಯೋಜಿಸುತ್ತಿರುವ ಹರ್ಲಿ ಬೈಕ್ ರ‌್ಯಾಲಿ 2013 ಜನವರಿ 31ರಿಂದ ಫೆಬ್ರವರಿ 1ರ ವರೆಗೆ ನಡೆಯಲಿದೆ. ವಿಶ್ವ ಪ್ರಸಿದ್ಧಿ ಪ್ರವಾಸಿ ತಾಣಗಳಲ್ಲಿ ಒಂದೆನಿಸಿರುವ ಗೋವಾದಲ್ಲಿ ರ‌್ಯಾಲಿ ಹಮ್ಮಿಕೊಳ್ಳಲಾಗಿದ್ದು ದೇಶದ ಬಹುತೇಕ ಹರ್ಲಿ ಮಾಲಿಕರನ್ನು ಹಾಗೂ ಅವರ ಕುಟುಂಬವನ್ನು ಒಂದೆಡೆ ಸೆಳೆಯಲಿದೆ.

ಹರ್ಲಿ ಡೇವಿಡ್ಸನ್ ಕಂಪನಿಯ 110ನೇ ವಾರ್ಷಿಕೋತ್ಸವದ ಅಂಗವಾಗಿ ರ‌್ಯಾಲಿ ನಡೆಸಲಾಗುತ್ತಿದೆ. ಇದರ ಜತೆ ಮುಂದಿನ ಸಾಲಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜಾಗತಿಕವಾಗಿ ಹರ್ಲಿ ಡೇವಿಡ್ಸನ್ ಅಭಿಮಾನಿಗಳನ್ನು ಒಂದೆಡೆ ಸೇರಿರುವ ಈ ಅಭಿಯಾನವು ಸ್ವಾತಂತ್ರ್ಯ ಭಾವಾವೇಶ, ಆತ್ಮಾಭಿವ್ಯಕ್ತಿ, ಸಾಹಸಿಕತೆಗಳ ಪ್ರತೀಕವಾಗಿದೆ.

ಇದೇ ಸಂದರ್ಭದಲ್ಲಿ H.O.G ರ‌್ಯಾಲಿ ಬೆನ್ನಲ್ಲೇ 'ಇಂಡಿಯಾ ಬೈಕ್ ವೀಕ್' ಕೂಡಾ ನಡೆಯಲಿದೆ. ಇದಕ್ಕೂ ಹರ್ಲಿ ಡೇವಿಡ್ಸನ್ ಪ್ರಾಯೋಜಕತ್ವವನ್ನು ಘೋಷಿಸಿದೆ. 2013 ಫೆಬ್ರವರಿ 2ರಿಂದ 3ರ ವರೆಗೆ ಸಾಗಲಿರುವ ಈ ಪ್ರೀಮಿಯಂ ಶೋನಲ್ಲಿ ದೇಶದ ಎಲ್ಲ ಬೈಕ್ ಮಾಲಿಕರು

ಹಾಗೂ ಉತ್ಸಾಹಿಗಳು ಭಾಗವಹಿಸಬಹುದಾಗಿದೆ.

ಮುಂದಿನ ವರ್ಷ ನಮ್ಮ ಗ್ರಾಹಕರಿಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉತ್ಸಾಹಿತರಾಗಿದ್ದೇವೆ. ಅದರಲ್ಲೂ ವಿಶೇಷವಾಗಿ ಗೋವಾದಲ್ಲಿ ಸಾಗಲಿರುವ H.O.G ರ‌್ಯಾಲಿ ಮೂಲಕ 110 ವರ್ಷಗಳ ಹರ್ಲಿ ಡೇವಿಡ್ಸನ್ ಸ್ವಾತಂತ್ರ್ಯವನ್ನು ಆಚರಿಸಲಿದ್ದೇವೆ ಎಂದಿದೆ.

ಏತನ್ಮಧ್ಯೆ 2012ರ ವೇಳೆಗೆ 2000 ಹೆಚ್ಟು ಹರ್ಲಿ ಬೈಕ್‌ಗಳು ದೇಶದ ರಸ್ತೆಗೆ ಪ್ರವೇಶಿಸುವ ವಿಶ್ವಾಸ ವ್ಯಕ್ತಪಡಿಸಿರುವ ಹರ್ಲಿ ವ್ಯವಸ್ಥಾಪಕ ನಿರ್ದೇಶಕರಾದ ಅನೂಪ್ ಪ್ರಕಾಶ್, ಕೊಲ್ಕತಾ, ಚೆನ್ನೈ ಹಾಗೂ ಕೊಚ್ಚಿ ನಗರಗಳಲ್ಲಿ ನೂತನ ಡೀಲರ್‌ಶಿಪ್ ತೆರೆಯಲಿದ್ದೇವೆ ಎಂದಿದ್ದಾರೆ. ಇದಕ್ಕೂ ಮಿಗಿಲಾಗಿ ಹರ್ಲಿ ಗ್ರಾಹಕರಿಗೆ, ಹಿತೈಷಿಗಳಿಗೆ ಹಾಗೂ ಡೀಲರ್‌ಗಳಿಗೆ ಹರ್ಲಿ ಡೇವಿಡ್ಸನ್ ಇಂಡಿಯಾ ಕೃತಜ್ಞತೆ ಹೇಳಲು ಬಯಸುತ್ತಿದೆ ಎಂದಿದ್ದಾರೆ.

To Follow DriveSpark On Facebook, Click The Like Button
ಹರ್ಲಿ ಮಾಲಿಕರೇ ಗೋವಾ ರ‌್ಯಾಲಿಗೆ ಸಜ್ಜಾಗಿ!

ಹರ್ಲಿ ಡೇವಿಡ್ಸನ್ 110 ವರ್ಷಗಳ ಸಂಭ್ರಮ

ಹರ್ಲಿ ಮಾಲಿಕರೇ ಗೋವಾ ರ‌್ಯಾಲಿಗೆ ಸಜ್ಜಾಗಿ!

ಹರ್ಲಿ ಡೇವಿಡ್ಸನ್ 110 ವರ್ಷಗಳ ಸಂಭ್ರಮ

ಹರ್ಲಿ ಮಾಲಿಕರೇ ಗೋವಾ ರ‌್ಯಾಲಿಗೆ ಸಜ್ಜಾಗಿ!

ಹರ್ಲಿ ಡೇವಿಡ್ಸನ್ 110 ವರ್ಷಗಳ ಸಂಭ್ರಮ

ಹರ್ಲಿ ಮಾಲಿಕರೇ ಗೋವಾ ರ‌್ಯಾಲಿಗೆ ಸಜ್ಜಾಗಿ!

ಹರ್ಲಿ ಡೇವಿಡ್ಸನ್ 110 ವರ್ಷಗಳ ಸಂಭ್ರಮ

ಹರ್ಲಿ ಮಾಲಿಕರೇ ಗೋವಾ ರ‌್ಯಾಲಿಗೆ ಸಜ್ಜಾಗಿ!

ಹರ್ಲಿ ಡೇವಿಡ್ಸನ್ 110 ವರ್ಷಗಳ ಸಂಭ್ರಮ

ಹರ್ಲಿ ಮಾಲಿಕರೇ ಗೋವಾ ರ‌್ಯಾಲಿಗೆ ಸಜ್ಜಾಗಿ!

ಹರ್ಲಿ ಡೇವಿಡ್ಸನ್ 110 ವರ್ಷಗಳ ಸಂಭ್ರಮ

ಹರ್ಲಿ ಮಾಲಿಕರೇ ಗೋವಾ ರ‌್ಯಾಲಿಗೆ ಸಜ್ಜಾಗಿ!

ಹರ್ಲಿ ಡೇವಿಡ್ಸನ್ 110 ವರ್ಷಗಳ ಸಂಭ್ರಮ

English summary

 Harley-Davidson India will hold its first National Harley Owners Group (H.O.G.) Rally in India, from January 31 - February 1, 2013 in Goa. The National H.O.G Rally will bring hundreds of customers and their families from all over the country.
Story first published: Friday, December 21, 2012, 18:09 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark