ಹೆಲ್ಮೆಟಿಗೂ ವೈಪರ್, ಐಡಿಯಾ ಸೂಪರ್ರೋ ರಂಗಾ..!

ಆಗುಂಬೆ ಹಾದಿಯಲ್ಲಿ ಬೈಕಿನಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಧೋ.. ಎಂದು ಸುರಿವ ಮಳೆಗೆ ಕೊಡೆ ಹಿಡಿಯಲು ಸಾಧ್ಯವಾಗದು. ತೊಟ್ಟಿರುವ ರೇನ್ ಕೋಟ್ ಒದ್ದೆಮುದ್ದೆಯಾಗಿರಬಹುದು. ಸುರಿಯೋ ಮಳೆಹನಿಗೆ ಹೆಲ್ಮೆಟ್ ಮಸುಕು ಮಸುಕು. ದಾರಿ ಕಾಣದಾಗಿದೆ ರಾಘವೇಂದ್ರನೇ ಎಂದು ಬೈಕ್ ಸೈಡಿಗೆ ನಿಲ್ಲಿಸಿಬಿಡಬೇಕಷ್ಟೇ!

ಅಥವಾ ಸುರಿಯೋ ಮಳೆಹನಿಯನ್ನು ಕ್ಯಾರೇ ಮಾಡದೇ, ಬಿಲ್ ಕುಲ್ ಬೈಕಿಂದ ಇಳಿಯದೇ ಬೈಕ್ ಸವಾರಿ ಮುಂದುವರೆಸಬಹುದು. ಹೆಲ್ಮೆಟಿನಲ್ಲಿ ನಿಲ್ಲುವ ಮಳೆಹನಿಯನ್ನು ಕರವಸ್ತ್ರದಲ್ಲಿ ಒರೆಸಿ ಒರೆಸಿ ಸುಸ್ತಾಗುವುದು ಖಂಡಿತ. ಹೆಲ್ಮೆಟ್ಟಿನಲ್ಲೇ ವೈಪರ್ ಒಂದು ಇರುತ್ತಿದ್ದರೆ.. ಎಂಬ ಬಯಕೆಯೂ ಆಗ ನಿಮಗೆ ಬಂದೀತು. ಅಂತಹ ಹೆಲ್ಮೆಟ್ ಕೂಡ ಇದೆ ಅಂದ್ರೆ ನಂಬ್ತಿರಾ?

ಈಗಾಗಲೇ ಫ್ರಾನ್ಸಿನ ಕಂಪನಿಯೊಂದು ಅಂತಹ ಕಾನ್ಸೆಪ್ಟ್ ಹೆಲ್ಮೆಟ್ ನಿರ್ಮಿಸಿಯಾಗಿದೆ. ಸದ್ಯ ಅದರ ಬಗೆ ಹೆಚ್ಚು ಮಾಹಿತಿ ಅಲಭ್ಯ. ಸುಮ್ನೆ ಚಿತ್ರ ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬೇಕಷ್ಟೇ. ಆದರೆ ಈ ಹೆಲ್ಮೆಟ್ ಬಗ್ಗೆ ಕೊಂಚ ಕಾಮೆಂಟ್ ಮಾಡದೇ ಹೋಗಲು ಮನಸು ಬಾರದು ಅಲ್ಲವೇ?

ಇಐಸಿಎಂಎ ದ್ವಿಚಕ್ರವಾಹನ ಪ್ರದರ್ಶನ ವರ್ಷಕ್ಕೊಮ್ಮೆ ನಡೆಯುತ್ತದೆ. ಅದರಲ್ಲಿ ಅಚ್ಚರಿಗೊಳಿಸುವ ಬೈಕುಗಳು, ಸ್ಕೂಟರುಗಳು ಮತ್ತು ಆಕ್ಸೆಸರಿಗಳು ಪ್ರದರ್ಶನಗೊಳ್ಳುತ್ತವೆ. ಅಪರೂಪವಾಗಿರುವ, ವಿಶೇಷವಾಗಿರುವ, ಹೊಸ ತಂತ್ರಜ್ಞಾನಗಳ ಇಂತಹ ಉತ್ಪನ್ನಗಳು ಬೇರೆಡೆ ನೋಡಲು ಸಿಗುವುದು ಅಪರೂಪ.

ಅದೇ ದ್ವಿಚಕ್ರವಾಹನ ಪ್ರದರ್ಶನದಲ್ಲಿ ಕಂಡದ್ದು ಈ ವೈಪರ್ ಹೆಲ್ಮೆಟ್. ವೈಪರ್ ತಿರುಗಲು ಒಂದು ಮೋಟರ್. ಸುರಿಯೋ ಮಳೆಯ ಹನಿಗಳನ್ನು ಬಾಚಿಬಾಚಿ ಹೊರಹಾಕುವ ಈ ಟೆಕ್ ಐಡಿಯಾ ಯಾರಿಗೆ ಬಂದದ್ದು ಗೊತ್ತಿಲ್ಲ. ವಿಶೇಷವೆಂದರೆ ಇದು ಕಾನ್ಸೆಪ್ಟ್ ಹೆಲ್ಮೆಟ್. ಈ ಕಂಪನಿಯು ಇದನ್ನು ಉತ್ಪಾದಿಸಲಿದೆಯೋ, ಗೊತ್ತಿಲ್ಲ.

ಹೆಲ್ಮೆಟ್ಟಿಗೊಂದು ವೈಪರ್. ಐಡಿಯಾ ಚೆನ್ನಾಗಿದೆ ಅಲ್ವೆ? ಬೆಂಗಳೂರಿನಿಂದ ಮೈಸೂರು, ಮಂಗಳೂರಿಗೆ, ಆಗುಂಬೆಗೆ ಅಥವಾ ದೂರಪ್ರಯಾಣ ಕೈಗೊಳ್ಳುವಾಗ ಬೈಕ್ ಸವಾರರನ್ನು ಮಳೆರಾಯ ಕಾಡುವುದುಂಟು. ಸುರಿವ ಜಡಿಮಳೆಗೆ ಕೊಡೆಹಿಡಿಯುವ ಹೆಲ್ಮೆಟ್ ತುಂಬಾ ನೀರಹನಿಗಳು. ಸುರಕ್ಷಿತ ಪ್ರಯಾಣಕ್ಕೂ ಇದು ಅಡ್ಡಿಮಾಡುತ್ತದೆ. ಹೀಗಾಗಿ ಹೆಲ್ಮೆಟ್ಟಿಗೆ ವೈಪರ್ ಇದ್ದರೆ ಒಳ್ಳೆಯದು ಎಂಬ ವಾದವನ್ನು ನೀವು ಒಪ್ಪಬಹುದು.

ಕಣ್ಣಿಗಡ್ಡಬರುವ ಹೆಲ್ಮೆಟ್ ವೈಪರ್ ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆಯೂ ಕಾಡದೆ ಇರದು. ಜೊತೆಗೆ ಅದರಲ್ಲಿರುವ ಮೋಟರ್ ಗ್ರೀಂ ಅಂತ ತಿರುಗುತ್ತಿದ್ದರೆ ತಲೆ ಲಬೋ ಲಬೋ ಎನ್ನಬಹುದು. ಹೆಲ್ಮೆಟ್ ಮೋಟರ್ ನಿಮ್ಮ ತಲೆಯನ್ನು ಹಿಂದಕ್ಕೆ ದೂಡಬಹುದು. ಅದರ ಸೌಂಡಿಗೆ ತಲೆ ಚಿಟ್ಟುಹಿಡಿಯಬಹುದು. ಮೋಟರ್ ಸ್ಪೀಡಿಗೆ ತಲೆ ಅಲ್ಲಾಡುತ್ತ ಮೆಂಟಲ್ ಆದರೂ ಆಗಬಹುದು.

ಇನ್ನೂ ಈ ಹೆಲ್ಮೆಟ್ ಉತ್ಪಾದನೆ ಮಾಡುವ ಕುರಿತು ಯಾವುದೇ ಮಾಹಿತಿಯಿಲ್ಲ. ಸುಮ್ನೆ ತಲೆಕೆಡಿಸಿಕೊಳ್ಳೋದ್ಯಾಕೆ? ಅಲ್ವೆ.

More from DriveSpark

Article Published On: Friday, June 29, 2012, 13:09 [IST]
English summary
Wearing a helmet while its rains is considered risky as visibility is low with the visor getting wet with water. A French company has devised a wiper for the helmet which wipes away water to provide the rider a clear view.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+