ಹೊಂಡಾ ತಂತ್ರಜ್ಞಾನವಿಲ್ಲದ ಹೀರೊ ಮೊದಲ ಬೈಕ್‌ಗಾಗಿ ಕಾದಿರಿ!
ಸಂಪೂರ್ಣವಾಗಿಯೂ ಹೀರೊ ತಂತ್ರಜ್ಞಾನದಿಂದಲೇ ಅಭಿವೃದ್ಧಿಪಡಿಸಲಾಗುತ್ತಿರುವ ಮೊದಲ ಬೈಕ್ 2013-14ರ ಅವಧಿಯಲ್ಲಿ ಪರಿಚಯಿಸಲಾಗುವುದು ಎಂದು ಹೀರೊ ಮೊಟೊಕಾರ್ಪ್ ಸೀನಿಯರ್ ಮಾರ್ಕೆಂಟಿಂಗ್ ಆಂಡ್ ಸೇಲ್ಸ್ ನಿರ್ದೇಶಕ ಅನಿಲ್ ಡುವಾ ತಿಳಿಸಿದ್ದಾರೆ.
ತಮ್ಮ ಉತ್ಪನ್ನಗಳಿಗೆ ಜೂನ್ 2014ರ ವರೆಗೆ ಹೊಂಡಾ ಲಾಂಛನ ಬಳಸಬಹುದಾಗಿದ್ದರೂ ನಿಗದಿತ ಅವಧಿಯಿಂತ ಮುಂಚಿತವಾಗಿಯೇ ತನ್ನದೇ ಆದ ನೂತನ ಟಾಗ್‌ನೊಂದಿಗೆ ಹೊರಬಂದಿರುವ ಹೀರೊ ಮೊಟೊಕಾರ್ಪ್ ತ್ವರಿತ ಗತಿಯಲ್ಲಿ ಸ್ವತಂತ್ರ ಉತ್ಪನ್ನವನ್ನು ಕೇಂದ್ರಿಕರಿಸುತ್ತಿದೆ. ಹೊಸ ಉತ್ಪನ್ನಗಳಲ್ಲಿ ಮೋಟಾರ್‌ಸೈಕಲ್ ಹಾಗೂ ಸ್ಕೂಟರ್ ಒಳಗೊಂಡರಲಿದ್ದು, ಸ್ಪರ್ಧಾತ್ಮಕ ಬೆಲೆ ನಿರೀಕ್ಷಿಸಲಾಗುತ್ತಿದೆ.
ಹೀರೊದ ಆರ್ ಆಂಡ್ ಡಿ ಘಟಕವು ಇನ್ನು ಪ್ರಾಂರಭಿಕ ಹಂತದಲ್ಲಿದ್ದು, ಈ ನಡುವೆ ರಾಜಸ್ತಾನದಲ್ಲಿ ಸಂಪೂರ್ಣ ಸೌಲಭ್ಯದ ಘಟಕ ನೀರ್ಮಾಣಕ್ಕಾಗಿ 400 ಕೋಟಿ ರುಪಾಯಿಗಳ ಬೃಹತ್ ಹೂಡಿಕೆ ಮಾಡಿದೆ. 250 ಎಕರೆ ವಿಸ್ತಾರವಾಗಿರುವ ಈ ನೂತನ ಘಟಕದಲ್ಲಿ 500 ಎಂಜಿನಿಯರ್‌ಗಳು ಕಾರ್ಯನಿರ್ವಹಿಸಲಿದ್ದಾರೆ.
ಇದರ ಜತೆಗೆ ಅಮೆರಿಕ ಮೂಲದ ಎರಿಕ್ ಬ್ಯುಯಲ್ ರೇಸಿಂಗ್ (ಇಬಿಆರ್), ಆಸ್ಟ್ರೀಲಿಯಾದ ಎಂಜಿನ್ ಡೆವೆಲಪರ್ ಎವಿಎಲ್ ಹಾಗೂ ಇಟಲಿಯ ದ್ವಿಚಕ್ರ ವಿನ್ಯಾಸ ಕಂಪನಿ ಎಂಜಿನ್ಸ್ ಎಂಜಿನಿಯರಿಂಗ್ ಜತೆಗೂ ಹೀರೊ ಕೈಜೋಡಿಸಲಿದೆ. ಒಟ್ಟಿನಲ್ಲಿ ಮುಂದಿನ ಐದು ವರ್ಷಗಳ ಅವಧಿಯಲ್ಲಿ 10 ಮಿಲಿಯರ್ ಯುನಿಟ್‌ಗಳನ್ನು ಮಾರುಕಟ್ಟೆಗಿಳಿಸುವ ಯೋಜನೆ ಹೊಂದಿರುವ ಹೀರೊ ಮೊಟೊಕಾರ್ಪ್ ಶೇಕಡಾ 10ರಷ್ಟು ರಫ್ತು ಮಾಡಲಿದೆ.


Click it and Unblock the Notifications









