ಬೈಕ್ ದರಗಳನ್ನು ಹೆಚ್ಚಿಸಿದ ಹೀರೊ ಮೊಟೊಕಾರ್ಪ್

ಹೀರೊ ಮೊಟೊಕಾರ್ಪ್ ಕಂಪನಿಯು ತನ್ನ ಬೈಕುಗಳ ದರಗಳನ್ನು 500 ರು.ನಿಂದ 1000 ರು.ವರೆಗೆ ಹೆಚ್ಚಿಸಿದೆ. ಬಿಡಿಭಾಗಗಳ ದರ ಹೆಚ್ಚಳ ದರ ಏರಿಕೆ ಮಾಡಲು ಪ್ರಮುಖ ಕಾರಣವೆಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ ತಿಂಗಳು ಕಂಪನಿಯ ವಾಹನ ಮಾರಾಟ ಶೇಕಡ 7ರಷ್ಟು ಏರಿಕೆ ಕಂಡಿದೆ. ಮಾರಾಟ ಫಲಿತಾಂಶ ಪ್ರಕಟಣೆಯ ಸಂದರ್ಭದಲ್ಲಿ ದರ ಹೆಚ್ಚಳ ಸುದ್ದಿಯನ್ನೂ ಗ್ರಾಹಕರಿಗೆ ನೀಡಿದೆ.

ಇದರೊಂದಿಗೆ ಹೀರೊ ಮೊಟೊಕಾರ್ಪ್ ಕಂಪನಿಯು ತನ್ನ ಮೂರು ಘಟಕಗಳಲ್ಲಿ ವಾಹನ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚಿಸಲು ಕೂಡ ನಿರ್ಧರಿಸಿದೆ. ಕಂಪನಿಯು ತಕ್ಷಣದಿಂದ ಅನ್ವಯವಾಗುವಂತೆ ಬೈಕ್ ದರ ಹೆಚ್ಚಿಸಲಿದೆ.

"ಕಚ್ಚಾ ಸಾಮಾಗ್ರಿಗಳ ದರ ದುಬಾರಿಯಾಗುತ್ತಿರುವ ಹಿನ್ನಲೆಯಲ್ಲಿ ತಕ್ಷಣದಿಂದ ಬೈಕ್ ದರಗಳನ್ನು ಹೆಚ್ಚಿಸಲಾಗಿದೆ" ಎಂದು ಕಂಪನಿಯ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷರಾದ ಅನಿಲ್ ದುವಾ ಹೇಳಿದ್ದಾರೆ.

ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭ ಶೇಕಡ 20ರಷ್ಟು ಏರಿಕೆ ಕಂಡಿದೆ. ಜಪಾನಿನ ಹೋಂಡಾ ಮೋಟರ್ಸ್ ಜೊತೆಗಿನ ಮೈತ್ರಿಯ ಕೊಂಡಿ ಕಡಿದುಕೊಂಡರೂ ಕಂಪನಿಯ ಮಾರಾಟ ಏರಿಕೆ ಕಂಡಿದೆ. ಇದರೊಂದಿಗೆ ಕಳೆದ ತಿಂಗಳ ಮಾರಾಟವೂ ಕಂಪನಿಯ ಭರವಸೆ ಹೆಚ್ಚಿದೆ. 2012ರ ಏಪ್ರಿಲ್ ತಿಂಗಳಲ್ಲಿ ಕಂಪನಿಯು 5,49,625 ದ್ವಿಚಕ್ರ ವಾಹನ ಮಾರಾಟ ಮಾಡಿದೆ.

"ಈ ಆರ್ಥಿಕ ವರ್ಷದ ಆರಂಭವನ್ನು ಅತ್ಯುತ್ತಮ ಮಾರಾಟ ಪ್ರಗತಿಯಿಂದ ಆರಂಭಿಸಿದ್ದೇವೆ. ಮುಂದಿನ ಪ್ರತಿತಿಂಗಳ ಅರ್ಧ ಮಿಲಿಯನ್ ದ್ವಿಚಕ್ರ ವಾಹನ ಮಾರಾಟ ಮಾಡುವ ನಿರೀಕ್ಷೆ ನಮಗಿದೆ" ಎಂದು ಅನಿಲ್ ದುವಾ ಹೇಳಿದ್ದಾರೆ.

More from DriveSpark

Article Published On: Thursday, May 3, 2012, 12:58 [IST]
English summary
Hero Motocorp has announced price hike of Rs 500 to Rs 1,000 ($9 to $19) on most of its vehicles. Rising input costs have been stated by the company as the reason for the price hike. Meanwhile, the company also plans to increase capacity at three of its plants.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+