ರಾಜ್ಯದ ರಸ್ತೆಗೆ ಹೀರೊ ಇಗ್ನೈಟರ್, ದರ 56 ಸಾವಿರ ರು.
ಬೆಂಗಳೂರು, ಜು 20: ಬಹುನಿರೀಕ್ಷಿತ 125 ಸಿಸಿ ಬೈಕ್ ಹೀರೊ ಇಗ್ನೈಟರ್ ರಾಜ್ಯದ ರಸ್ತೆಗೆ ಆಗಮಿಸಿದೆ. ಬೆಂಗಳೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಹೀರೊ ಮೋಟೊ ಕಾರ್ಪ್ ನೂತನ ಬೈಕ್ ಪರಿಚಯಿಸಿದ್ದು, ರಾಜ್ಯದ 15 ಡೀಲರ್ ಷಿಪ್ ಮಳಿಗೆಗಳಲ್ಲಿ ದೊರಕಲಿದೆ.
125 ಸಿಸಿಯ ನೂತನ ಹೀರೊ ಇಗ್ನೈಟರ್ ಬೈಕ್ ಬೇಸ್ ಆವೃತ್ತಿ ದರ 56,747 ರು.(ಬೆಂಗಳೂರು ಎಕ್ಸ್ ಶೋರೂಂ) ಆಗಿದೆ. ಇದು ಡಿಸ್ಕ್ ಮತ್ತು ಡ್ರಮ್ ಬ್ರೇಕ್ ಆಯ್ಕೆಯಲ್ಲಿ ದೊರಕಲಿದೆ. ಪಂಥರ್ ಕಪ್ಪು, ಸ್ಪೋರ್ಟ್ಸ್ ಕೆಂಪು, ಪರ್ಲ್ ಬಿಳಿ ಮತ್ತು ವೈಬ್ರೆಂಟ್ ನೀಲಿ ಬಣ್ಣಗಳಲ್ಲಿ ನೂತನ ಇಗ್ನೈಟರ್ ಬೈಕ್ ದೊರಕಲಿದೆ.

ಹೀರೊ ಇಗ್ನೈಟರ್ ಬೈಕಿನ 125 ಸಿಸಿಯ ಎಂಜಿನ್ 8 ಸಾವಿರ ಆವರ್ತನಕ್ಕೆ 11 ಹಾರ್ಸ್ ಪವರ್ ಮತ್ತು 5 ಸಾವಿರ ಆವರ್ತನಕ್ಕೆ 11 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಹೀರೊ ಇಗ್ನೈಟರ್ 5 ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ.
ಈ ಬೈಕ್ ಮುಂಭಾಗದಲ್ಲಿ ಹೈಡ್ರಾಲಿಕ್ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಮತ್ತು ಹಿಂಭಾಗದಲ್ಲಿ ಸ್ಪ್ರಿಂಗ್ ಸಸ್ಪೆನ್ಷನ್ ಸಿಸ್ಟಮ್ ಹೊಂದಿದೆ. ಆಕರ್ಷಕ ಟ್ರಾಪ್ ಜೊಡಿಯಲ್ ಹೆಡ್ ಲ್ಯಾಂಪ್, ಬಾಗಿದ ಸೀಟು, ಡ್ಯೂಯಲ್ ಟೋನ್ ರಿಯರ್ ವ್ಯೂ ಮಿರರ್ ಮತ್ತು ಹೊಂದಾಣಿಕೆ ಮಾಡಬಹುದಾದ ಷಾಕ್ ಅಬ್ಸರ್ಬಾರ್ ಇತ್ಯಾದಿ ಫೀಚರುಗಳಿವೆ.
ಹೀರೊ ಇಗ್ನೈಟರ್ ಬೈಕಿಗೆ 3 ವರ್ಷ/40 ಸಾವಿರ ಕಿ.ಮೀ. ವಾರೆಂಟಿ ಮತ್ತು ಎರಡು ವರ್ಷಗಳ ಕಾಲಕ್ಕೆ 6 ಉಚಿತ ಸರ್ವಿಸ್ ನೀಡುವುದಾಗಿ ಕಂಪನಿ ಹೇಳಿದೆ.


Click it and Unblock the Notifications








