ಕೇಳಿದ್ರಾ; ಹೀರೊಗೆ ಭಾರಿ ಡಿಮ್ಯಾಂಡ್ ಅಂತೆ

ವಿಶ್ವದಲ್ಲಿ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೊ ಮೊಟೊಕಾರ್ಪ್ ಕಂಪನಿಯು ಗ್ರಾಹಕರ ಫೇವರಿಟ್ ಲಿಸ್ಟ್‌ನಲ್ಲಿ ಮತ್ತೆ ಕಾಣಿಸಿಕೊಂಡಿದ್ದು, ಅಕ್ಟೋಬರ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುವ ಮೂಲಕ ದಾಖಲೆ ಸ್ಥಾಪಿಸಿದೆ.

ಹೀರೊ ಮೊಟೊಕಾರ್ಪ್ ಕಂಪನಿಯು 2012 ಅಕ್ಟೋಬರ್ ತಿಂಗಳಲ್ಲಿ ಬರೋಬ್ಬರಿ 5,29,215 ಯುನಿಟ್ ಮಾರಾಟ ಮಾಡಿವೆ. ಇದು 2011ರ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಭಾರಿ ಹೆಚ್ಚಳ ಕಂಡುಬಂದಿದೆ. ಕಳೆದ ಸಾಲಿನಲ್ಲಿ ಇದೇ ಹೊತ್ತಿಗೆ 5,12,238 ಯುನಿಟ್ ಮಾತ್ರ ಮಾರಾಟವಾಗಿದ್ದವು. ಇನ್ನು ವಿಶೇಷವೆಂದರೆ ಹಬ್ಬದ ಸೀಸನ್ ಆರಂಭವಾದ ಕೇವಲ 15 ದಿನಗಳಲ್ಲಿ 3.5 ಲಕ್ಷ ಯುನಿಟ್ ಮಾರಾಟವಾಗಿದೆ.

ಪ್ರಸ್ತುತ ಸ್ಕೂಟರ್ ಸೆಗ್ಮೆಂಟ್‌ನಲ್ಲೂ ನಂ. 2 ಸ್ಥಾನದಲ್ಲಿರುವ ಹೀರೊ, ಇದೇ ತಿಂಗಳಲ್ಲಿ ಗರಿಷ್ಠ ಮಾರಾಟ ಮಾಡುವ ಮೂಲಕ ಸದ್ದು ಮಾಡಿವೆ. ಕಂಪನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 50 ಸಾವಿರ ಮಾರಾಟವನ್ನು ತಲುಪಿದೆ. ಹೀರೊ ಸ್ಕೂಟರ್‌ಗಳಾದ ಮಾಯೆಸ್ಟ್ರೋ ಹಾಗೂ ಪ್ಲೇಷರ್ ಮಾಡೆಲ್‌ಗಳಿಗೆ ಭಾರಿ ಬೇಡಿಕೆ ಕಂಡುಬಂದಿವೆ. ಇದರ ಉತ್ಪಾದನೆಯು ಪ್ರತಿ ತಿಂಗಳಿಗೆ 60 ಸಾವಿರ ದಾಟಿದೆ.

ಇದೇ ಸಂದರ್ಭದಲ್ಲಿ ದೀಪಾವಳಿ ಹಬ್ಬದ ಸೀಸನ್ ಮುಂದಿರುವಂತೆಯೇ ಮಾರಾಟ ಪ್ರಕ್ರಿಯೆ ಇನ್ನಷ್ಟು ತ್ವರಿತ ಗತಿಯಲ್ಲಿ ಸಾಗುವ ನಿರೀಕ್ಷೆಯನ್ನು ಕಂಪನಿ ಹೊಂದಿದೆ.

Article Published On: Saturday, November 3, 2012, 7:00 [IST]
English summary
Festive season demand spurs Hero MotoCorp to register its highest ever dispatch sales for the month of October
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+