ಬೆಂಗಳೂರಿನಲ್ಲಿ ಹೋಂಡಾ 9ನೇ ಬೈಕ್ ಮಳಿಗೆ ಶುಭಾರಂಭ

ಬೆಂಗಳೂರಿನ ಕೋರಮಂಗಲದಲ್ಲಿ ಹೋಂಡಾ ಮೋಟರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಕಂಪನಿಯ ನೂತನ ಮಳಿಗೆಯನ್ನು ರಾಜ್ಯದ ಗೃಹ ಮತ್ತು ಸಾರಿಗೆ ಸಚಿವ ಆರ್. ಅಶೋಕ್ ಇತ್ತೀಚೆಗೆ ಉದ್ಘಾಟಿಸಿದ್ದಾರೆ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅಲ್ಲಿದ್ದ ಬೈಕನ್ನೇರಿ ಛಾಯಾಗ್ರಾಹಕರಿಗೆ ಒಂದಿಷ್ಟು ಪೋಸ್ ನೀಡಿದರು.

ಇದು ಹೋಂಡಾ ಕಂಪನಿಯು ನಗರದಲ್ಲಿ ಹೊಂದಿರುವ 9ನೇ ಮಳಿಗೆಯಾಗಿದೆ. "ಇಲ್ಲಿನ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಿ, ಸೂಕ್ತ ಸೇವೆ ಸೌಲಭ್ಯಗಳನ್ನು ಒದಗಿಸುವ ಮತ್ತು ನಮ್ಮ ವಾಣಿಜ್ಯ ಅವಶ್ಯಕತೆಗಳನ್ನು ಈಡೇರಿಸುವ ಉದ್ದೇಶದಿಂದ ನೂತನ ಮಳಿಗೆಯನ್ನು ಕೋರಮಂಗಲದಲ್ಲಿ ತೆರೆಯಲಾಗಿದೆ" ಎಂದು ಹೋಂಡಾ ಇಂಡಿಯಾ ದಕ್ಷಿಣ ವಿಭಾಗದ ಮುಖ್ಯಸ್ಥರಾದ ಮಕೊಟೊ ಯೊಷಿ ಹೇಳಿದ್ದಾರೆ.

ನಗರದ ರಾಜಾ ಗೃಹ ನಿರ್ಮಾಣ ಸಂಸ್ಥೆಯಯ ನೂನ ಹೋಂಡಾ ಮಳಿಗೆಯನ್ನು ಸುಸಜ್ಜಿತವಾಗಿ ಮತ್ತು ಸಕಲ ಸೌಲಭ್ಯಗಳು ಒಳಗೊಂಡಿರುವಂತೆ ಕೋರಮಂಗಲದ ಹೊಸೂರು ರಸ್ತೆಯಲ್ಲಿ ನಿರ್ಮಿಸಿದೆ. ಈ ಮಳಿಗೆಯ ಉದ್ಘಾಟನೆಯ ಸಂದರ್ಭದಲ್ಲಿ ಮೊದಲ 5 ಗ್ರಾಹಕರಿಗೆ ಸಚಿವ ಆರ್ ಅಶೋಕ್ ಬೈಕ್ ಕೀಲಿಕೈ ವಿತರಿಸಿದ್ದಾರೆ.

ಸುಮಾರು 1.2 ದಶಲಕ್ಷ ವಾಹನ ಉತ್ಪಾದನಾ ಸಾಮರ್ಥ್ಯದ ಮೂರನೇ ಘಟಕವನ್ನು ರಾಜ್ಯದಲ್ಲಿ ನಿರ್ಮಿಸುತ್ತಿದ್ದೇವೆ. ಇದು ಮುಂದಿನ ವರ್ಷ ಉತ್ಪಾದನೆಗೆ ಸಿದ್ಧವಾಗಲಿದೆ. ನಂತರ ಕಂಪನಿಯ ಒಟ್ಟಾರೆ ವಾಹನ ಉತ್ಪಾದನಾ ಸಾಮರ್ಥ್ಯ 40 ದಶಲಕ್ಷ ಯುನಿಟಿಗೆ ತಲುಪಲಿದೆ ಎಂದು ಕಂಪನಿಯ ಮುಖ್ಯಸ್ಥ ಮಕೊಟೊ ಯೊಷಿ ತಿಳಿಸಿದ್ದಾರೆ.

ನೂತನ ಮಳಿಗೆ ಉದ್ಘಾಟನಾ ಸಮಾರಂಭದಲ್ಲಿ ರಾಜಾ ಹೌಸಿಂಗ್ ಲಿಮಿಟೆಡ್‌ನ ಮುಖ್ಯಸ್ಥ ರಾಜಾ ಸುಚೀಂದ್ರ ಉಪಸ್ಥಿತರಿದ್ದರು.

More from DriveSpark

Article Published On: Wednesday, June 6, 2012, 15:23 [IST]
English summary
Karnataka Home and Transport Minister R. Ashok recently inaugurated honda motorcycle and scooter Showroom in Karamangala, Bangalore. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+