ಮೇ 15ರಂದು ಹೋಂಡಾ ಯುಗ 110 ಸಿಸಿ ಬೈಕ್
ಹೋಂಡಾ ಡ್ರೀಮ್ ಯುಗ 110 ಸಿಸಿ ಬೈಕನ್ನು ಹೋಂಡಾ ಮೋಟರ್‌ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಮೇ 15ರಂದು ದೇಶದ ರಸ್ತೆಗಿಳಿಸಲಿದೆ. 125 ಸಿಸಿಯ ಹೋಂಡಾ ಶೈನ್ ಬೈಕಿಗಿಂತ ಕೊಂಚ ಕಡಿಮೆ ಸಿಸಿಯ ಡ್ರೀಮ್ ಯುಗ ಬೈಕ್ ದೇಶದ ಮಾಸ್ ಮಾರುಕಟ್ಟೆಗೆ ಆಗಮಿಸಲಿದೆ.
ನೂತನ ಡ್ರೀಮ್ ಯುಗ ಬೈಕ್ ದರ ಸುಮಾರು 42 ಸಾವಿರ ರುಪಾಯಿ ಆಸುಪಾಸಿನಲ್ಲಿರಲಿದೆ. ಇದು 110 ಸಿಸಿಯ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರಲಿದ್ದು, 7,500 ಆವರ್ತನಕ್ಕೆ 9 ಹಾರ್ಸ್ ಪವರ್ ಇರಲಿದೆ. ಇದು ನಾಲ್ಕು ಸ್ಪೀಡಿನ ಗೇರ್ ಬಾಕ್ಸ್ ಹೊಂದಿರಲಿದೆ. ಈ ಬೈಕಿನ ಮೈಲೇಜ್ ಲೀಟರಿಗೆ ಸುಮಾರು 70 ಕಿ.ಮೀ. ಆಸುಪಾಸಿನಲ್ಲಿರಲಿದೆ.
ಶೈನ್ ಬೈಕಿನ ಸಣ್ಣ ತಮ್ಮನಂತೆ ಕಾಣುವ ನೂತನ ಡ್ರೀಮ್ ಯುಗ ಕೆಲವು ಫೀಚರುಗಳೊಂದಿಗೆ ಆಗಮಿಸಲಿದೆ. ಅಂದರೆ ಉದ್ದವಾದ ಸೀಟ್, ಟಫ್ ಅಪ್ ಟ್ಯೂಬ್, ಮೇಟೆಂನ್ಸ್ ಅಗತ್ಯವಿಲ್ಲದ ಬ್ಯಾಟರಿ, ಸೆಲ್ಫ್ ಸ್ಟಾರ್ಟ್ ಆಯ್ಕೆ ಇತ್ಯಾದಿಗಳು ಇರಲಿವೆ. ಈ ಬೈಕ್ ಐದು ಬಣ್ಣಗಳಲ್ಲಿ ದೊರಕಲಿದೆ.
ಹೋಂಡಾ ಡ್ರೀಮ್ ಯುಗ ಬೈಕ್ ಇತ್ತೀಚೆಗೆ ರಸ್ತೆಗಿಳಿದ ಸುಜುಕಿ ಹಯಾಟೆ ಸೇರಿದಂತೆ ಹೀರೊ ಪ್ಯಾಷನ್ ಮತ್ತು ಬಜಾಜ್ ಡಿಸ್ಕವರ್ ಜೊತೆ ಮಾರಾಟದಲ್ಲಿ ಪೈಪೋಟಿ ನಡೆಸಲಿದೆ. ದೇಶದ ಎರಡನೇ ಬೃಹತ್ ದ್ಚಿಚಕ್ರ ವಾಹನ ಮಾರುಕಟ್ಟೆಯಾಗುವ ಹೋಂಡಾ ಕನಸಿಗೆ ಈ ಡ್ರೀಮ್ ಯುಗ ಸಾಥ್ ನೀಡಲಿದೆಯೇ ಕಾದು ನೋಡಬೇಕಿದೆ.


Click it and Unblock the Notifications









