ಭಾರತ ಟಾಪ್ 6 ಮೋಟರ್ ಬೈಕ್

ಭಾರತದಲ್ಲಿ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಬೈಕುಗಳ ಕ್ರೇಜ್ ಹೆಚ್ಚುತ್ತಿದ್ದಂತೆ ಮಾರುಕಟ್ಟೆ ಕೂಡಾ ದ್ವಿಗುಣವಾಗಿ ಬೆಳವಣಿಗೆಗೊಂಡಿದೆ. ಉನ್ನತ ತಂತ್ರಜ್ಞಾನದ ಬಳಕೆ ಮೂಲಕ ಹೊಸತನ್ನು ನೀಡುವತ್ತ ಮೋಟರ್ ಸೈಕಲ್ ಉತ್ಪಾದಕರು ಯೋಜಿಸಿದ್ದಾರೆ. ಬರೀ ಮೈಲೇಜ್ ಅಲ್ಲದೆ ಬೈಕುಗಳಿಗೆ ಸ್ಫೋರ್ಟ್ಸ್ ಲುಕ್ ನೋಡಲು ಶ್ರಮಿಸುತ್ತಿದ್ದಾರೆ.

150 ಸಿಸಿ ಇಂದ 250 ಸಿಸಿ ಇಂಜಿನ್ ಸಾಮರ್ಥ್ಯದ ಬೈಕುಗಳ ಪೈಕಿ ಅತಿ ಹೆಚ್ಚು ಸದ್ದು ಮಾಡುತ್ತಿರುವ ಬೈಕುಗಳತ್ತ ಕಣ್ಣು ಹಾಯಿಸಿದರೆ, ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಉತ್ಪಾದಕರು ಬೈಕುಗಳ ಕಾರ್ಯಕ್ಷಮತೆ ಹೆಚ್ಚಿಸಿ ಹೊಸ ಹೊಸ ವಿನ್ಯಾಸದಲ್ಲಿ ರಸ್ತೆಗೆ ಬಿಡುತ್ತಿರುವುದನ್ನು ಕಾಣಬಹುದು>

ಸದ್ಯದಲ್ಲಿ ಭಾರತದಲ್ಲಿ ಸರ್ವಶ್ರೇಷ್ಠ ಬೈಕುಗಳು ಎಂದು ಕರೆಯಲು ಯೋಗ್ಯವಾದ 6 ಬೈಕುಗಳನ್ನು ಇಲ್ಲಿ ನೀಡಲಾಗಿದೆ. ಇದರಲ್ಲಿ ಟಾಪ್ 1,ಟಾಪ್ 6 ಯಾವುದು ಎಂಬ ಲೆಕ್ಕಾಚಾರಕ್ಕಿಂತ ಎಲ್ಲವೂ ಒಂದೊಂದು ರೀತಿಯಲ್ಲಿ ಶ್ರೇಷ್ಠ ಎನಿಸಿ ಮಾರುಕಟ್ಟೆಯಲ್ಲಿ ವಿಜೃಂಭಿಸುತ್ತಿದೆ ಎನ್ನಬಹುದು. ಟಾಪ್ 6 ಬೈಕುಗಳು ಇಲ್ಲಿದೆ ಹತ್ತಿ ಒಮ್ಮೆ ಸುತ್ತಾಡಿ

ಕವಾಸಾಕಿ ನಿಂಜಾ 250R

ಕವಾಸಾಕಿ ನಿಂಜಾ 250R

ಉತ್ತಮ ಕಾರ್ಯಕ್ಷಮತೆ ಹೊಂದಿರುವ ಬೈಕುಗಳ ಪೈಕಿ ಅಗ್ರಗಣ್ಯವಾಗಿ ನಿಲ್ಲುವ ಸಾಮರ್ಥ್ಯವುಳ್ಳ ಕವಾಸಾಕಿ ನಿಂಜಾ 250R. ಉತ್ತಮ ಗ್ರಿಪ್ ವುಳ್ಳ, ರೇಸಿಂಗ್ ಸಾಮರ್ಥ್ಯವುಳ್ಳ ಈ ಬೈಕ್ ವಿನ್ಯಾಸ ವಾಹನಸವಾರರನ್ನು ಆಕರ್ಷಿಸುತ್ತಿದೆ. 32.5bhp ಶಕ್ತಿ ಹೊಂದಿದ್ದು 22Nm torque ನೊಂದಿಗೆ ಎಲ್ಲಾ ಬಗೆಯ ರಸ್ತೆಗಳಲ್ಲೂ ಸಂಚರಿಸುವ ದೃಢತೆ ಹೊಂದಿದೆ. ಬೈಕ್ ಬೆಲೆ 2,69,000(ದೆಹಲಿ ಎಕ್ಸ್ ಷೋ ರೂಮ್ ದರ)

ಹೋಂಡಾ CBR 250R

ಹೋಂಡಾ CBR 250R

ಇದು ಹೋಂಡಾ ಸಂಸ್ಥೆ ಎಂಟ್ರಿ ಲೆವಲ್ ಬೈಕ್ ಆದರೂ, ಹೋಂಡಾ ಸೂಪರ್ ಬೈಕ್ ನೀಡುವ ಮಜಾವನ್ನು ವಾಹನ ಸವಾರರಿಗೆ ಪರಿಚಯಿಸುತ್ತದೆ. 25bhp ಗರಿಷ್ಠ

ಇಂಜಿನ್ ಶಕ್ತಿ ಹಾಗೂ ಗರಿಷ್ಠ torque22.9Nm. ನಷ್ಟಿದೆ. ಬೆಲೆ : 1,48,113 (ದೆಹಲಿ ಎಕ್ಸ್ ಷೋ ರೂಮ್ ಬೆಲೆ)

ಕೆಟಿಎಂ ಡ್ಯೂಕ್ 200

ಕೆಟಿಎಂ ಡ್ಯೂಕ್ 200

ವರ್ಷದ ಆರಂಭದಲ್ಲಿ ರಸ್ತೆಗಿಳಿದ ಕೆಟಿಎಂ ಡ್ಯೂಕ್ 200 ಬಜಾಜ್ ಆಟೋ ಸಂಸ್ಥೆ ನಿರ್ಮಿಸಿದೆ. ಲಿಕ್ವಿಡ್ ಕೂಲ್ಡ್ 199ಸಿಸಿ 4 ವಾಲ್ವ್ DOHC fuel-injected ಏಕೈಕ ಸಿಲಿಂಡರ್ ಇಂಜಿನ್ ಹೊಂದಿರುವುದು ವಿಶೇಷ. 25bhp ಗರಿಷ್ಠ ಇಂಜಿನ್ ಶಕ್ತಿ ಹಾಗೂ ಗರಿಷ್ಠ torque 19Nm. ಬೆಲೆ : 1,17,500 (ದೆಹಲಿ ಎಕ್ಸ್ ಷೋ ರೂಮ್ ಬೆಲೆ)

ಯಮಹಾ YZF R15

ಯಮಹಾ YZF R15

ಯಮಹಾ ಬೈಕ್ ಸವಾರಿ ಇಷ್ಟಪಡುವವರಿಗೆ ಈ ಪವರ್ ಫುಲ್ ಬೈಕ್ ರೇಸಿಂಗ್ ಅನುಭವ ನೀಡಲಿದೆ. R15 ಶ್ರೇಣಿಯ ಹೊಚ್ಚ ಹೊಸ ಬೈಕ್ YZF R15 150 ಸಿಸಿ ಹೊಂದಿದ್ದರೂ 15bhp ಶಕ್ತಿ ಹೊಂದಿದ್ದು, 17Nm torgue ಇದೆ. ಬೆಲೆ : 1,10,000 (ದೆಹಲಿ ಎಕ್ಸ್ ಷೋ ರೂಮ್ ಬೆಲೆ)

ಹೀರೋ ಕರಿಜ್ಮಾ ZMR

ಹೀರೋ ಕರಿಜ್ಮಾ ZMR

ಹೀರೋ ಕರಿಜ್ಮಾ ಬೈಕ್ ಆನ್ನು ಬಹುಶಃ ಭಾರತದಲ್ಲಿ ನಿರ್ಮಾಣವಾದ ಮೊಟ್ಟ ಮೊದಲ ಉನ್ನತ ಕಾರ್ಯಕ್ಷಮತೆಯ ಬೈಕು ಎನ್ನಬಹುದು. 150 ಸಿಸಿ ಇಂಜಿನ್ ನೊಂದಿದೆ ಗರಿಷ್ಠ 17bhp ಶಕ್ತಿ ಜೊತೆಗೆ torque18.35Nm ನಷ್ಟು ಹೊಂದಿದೆ. ಬೆಲೆ: 98,500 (ದೆಹಲಿ ಎಕ್ಸ್ ಷೋ ರೂಮ್ ಬೆಲೆ)

More from DriveSpark

Article Published On: Friday, October 5, 2012, 13:47 [IST]
English summary
The performance bike segment is emerging to be one of the fastest growing segments in the Indian two wheeler market. Motorcycle manufacturers are looking at not just high mileage commuter bikes but also powerful motorcycles that deliver sporty performance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+