ಗಣೇಶನ ಹಬ್ಬಕ್ಕೆ ಮಹೀಂದ್ರ ಸ್ಕೂಟರುಗಳಿಗೆ ಆಫರ್

By Praveen

ಗಣೇಶ ಚತುರ್ಥಿ ಹತ್ತಿರದಲ್ಲಿದೆ. ಗಣೇಶನ ಹಬ್ಬಕ್ಕೆ ಮಹೀಂದ್ರ ಟೂ ವೀಲ್ಹರ್ಸ್ ಕಂಪನಿಯು ತನ್ನ ಸ್ಕೂಟರುಗಳಿಗೆ ಭರ್ಜರಿ ಆಫರುಗಳನ್ನು ಪ್ರಕಟಿಸಿದೆ. ಹಬ್ಬದ ವೇಳೆಗೆ ಸಂತೋಷವನ್ನು ಮನೆಗೆ ಕೊಂಡೊಯ್ಯಿರಿ ಎಂಬ ಸ್ಲೋಗನ್ ಮೂಲಕ ಜಾಹೀರಾತುಗಳಲ್ಲಿ ಎದ್ದು ಕಾಣುತ್ತಿದೆ.

ಗಣೇಶನ ಹಬ್ಬಕ್ಕೆ ಮಹೀಂದ್ರ ಕಂಪನಿಯು ತನ್ನ ಸ್ಕೂಟರುಗಳಿಗೆ ರಸ್ತೆ ತೆರಿಗೆ ವಿನಾಯಿತಿ ಪ್ರಕಟಿಸಿದೆ. ಮಹೀಂದ್ರ ರೋಡಿಯೊ ಆರ್ ಝಡ್ ಸ್ಕೂಟರಿಗೆ ಕಂಪನಿಯು 3,830 ರು.ವರೆಗೆ ರಸ್ತೆ ತೆರಿಗೆ ಪ್ರಕಟಿಸಿದೆ. ಮಹೀಂದ್ರ ಡ್ಯೂರೊ ಡಿಝಡ್ ಸ್ಕೂಟರಿಗೆ 3,775 ರು.ವರೆಗೆ ರಸ್ತೆ ತೆರಿಗೆ ಪ್ರಕಟಿಸಿದೆ.

ಮಹೀಂದ್ರ ರೊಡಿಯೊ ಆರ್ ಝಡ್ ನೂತನ ಡ್ಯೂಯಲ್ ಕರ್ವ್ ಡಿಜಿಟಲ್ ಇಗ್ನಿಷನ್ ಸಿಸ್ಟಮ್(ಡಿಸಿಡಿಐ) ಹೊಂದಿದೆ. ಈ ಸ್ಕೂಟರಿನ ಮೈಲೇಜ್ ಪ್ರತಿಲೀಟರಿಗೆ 59.38 ಕಿ.ಮೀ. ಮೈಲೇಜ್ ನೀಡುತ್ತದೆ. ರಾಜ್ಯದಲ್ಲಿ ಮಹೀಂದ್ರ ರೊಡಿಯೊ ಆರ್ ಝಡ್ ಎಕ್ಸ್ ಶೋರೂಂ ದರ 48,930 ರುಪಾಯಿ ಇದೆ.

ಹಳೆಯ 110 ಸಿಸಿಯ ಡ್ಯೂರೊದ ಮುಂದುವರೆದ ಆವೃತ್ತಿಯಾಗಿ 125 ಸಿಸಿಯ ಡ್ಯೂರೊ ಡಿಝಡ್ ರಸ್ತೆಗಿಳಿದಿದೆ. ರಾಜ್ಯದಲ್ಲಿ ನೂತನ ಮಹೀಂದ್ರ ಡ್ಯೊರೊ ಸ್ಕೂಟರ್ ಎಕ್ಸ್ ಶೋರೂಂ ದರ 44,760 ರುಪಾಯಿ. ಈ ಸ್ಕೂಟರ್ ಪ್ರತಿಲೀಟರ್ ಪೆಟ್ರೋಲಿಗೆ 40-45 ಕಿ.ಮೀ. ಮೈಲೇಜ್ ನೀಡುತ್ತದೆ.

ಗಣೇಶನ ಹಬ್ಬದ ಸಮಯದಲ್ಲಿ ಮಹೀಂದ್ರ ಸ್ಕೂಟರ್ ಖರೀದಿಸುವರು ರಸ್ತೆ ತೆರಿಗೆಯ ದುಡ್ಡು ಉಳಿಸಬಹುದು. ಅಂದಹಾಗೆ ಹಬ್ಬದ ಸೀಸನಿನಲ್ಲಿ ಯಾವ ಕಾರಿಗೆ ಎಷ್ಟೆಷ್ಟು ಡಿಸ್ಕೌಂಟ್ ಇದೆ ಗೊತ್ತೆ?

More from DriveSpark

Article Published On: Tuesday, September 11, 2012, 10:23 [IST]
English summary
Mahindra 2 Wheelers offered road tax benefit in Ganesh Chaturthi. This Ganesh Chaturthi bring home happiness with Mahindra Scooters. Mahindra Duro DZ, Mahindra Rodeo RZ festival discounts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+