ಅಜಾಗರೂಕ ಸವಾರನನ್ನು ಎಚ್ಚರಿಸುವ ಹೆಲ್ಮೆಟ್

ದೂರದಲ್ಲಿ ಟ್ರಾಫಿಕ್ ಪೊಲೀಸರನ್ನು ಕಂಡಾಕ್ಷಣ ತಲೆ ಮೇಲೆ ಹೆಲ್ಮೆಟ್ ಇಟ್ಟುಕೊಳ್ಳುವುದು ಕೆಲವರ ಹವ್ಯಾಸ. ಇನ್ನು ಕೆಲವರಿಗೆ ಮೊಬೈಲಿನಲ್ಲಿ ಮಾತನಾಡುತ್ತ ಡ್ರೈವಿಂಗ್ ಮಾಡುವ ಅಭ್ಯಾಸ. ಕುಡಿದು ಬೈಕ್ ರೈಡ್ ಮಾಡುವುದು ಇನ್ನು ಕೆಲವರ ದುರಭ್ಯಾಸ. ಈ ಎಲ್ಲದರ ಫಲಿತಾಂಶ ಕೆಲವೊಮ್ಮೆ ಘೋರ, ಗಂಭೀರ ಮತ್ತು ದುಃಖಾಂತ್ಯ.

ಮದ್ರಾಸ್ ಇನ್ಶುಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ) ಸಂಸ್ಥೆಯ ಮೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ಎಂಎ ವಿದ್ಯಾರ್ಥಿಯೊಬ್ಬರು ಅಜಾಗರೂಕ ಬೈಕ್ ರೈಡರುಗಳಿಗೆ ಲಗಾಮು ಹಾಕುವ ನೂತನ ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.

ಬೈಕ್ ರೈಡ್ ಮಾಡುವಾಗ ಆಲ್ಕೋಹಾಲ್ ಕುಡಿದಿದ್ದರೆ, ಮೊಬೈಲ್ ಫೋನ್ ಬಳಸಿದರೆ, ಹೆಲ್ಮೆಟ್ ಧರಿಸದೇ ಇದ್ದರೆ ಈ ಸಾಧನಕ್ಕೆ ತಿಳಿಯುತ್ತದೆ. ಅಪಘಾತಗಳಿಗೆ ಕಾರಣವಾಗುವ ಇಂತಹ ಅಜಾಗರೂಕತೆಯನ್ನು ಬೈಕ್ ರೈಡರ್ ಪ್ರದರ್ಶಿಸಿದರೆ ಈ ಸಾಧನವನ್ನು ಬೈಕ್ ಎಂಜಿನನ್ನೇ ಆಫ್ ಮಾಡುತ್ತದೆ.

ಪ್ರತಿದಿನ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿ ಸಾವಿರಾರು ಜನರು ಅಪಘಾತದಿಂದ ಪ್ರಾಣಕಳೆದುಕೊಳ್ಳುವುದನ್ನು ತಡೆಗಟ್ಟುವ ಉದ್ದೇಶದಿಂದ ಇಂತಹ ಸಾಧನ ಅನ್ವೇಷಣೆ ಮಾಡಿರುವುದಾಗಿ ಎಂಐಟಿ ವಿದ್ಯಾರ್ಥಿ ಜೈ ರಾಜೇಶ್ ಹೇಳಿದ್ದಾರೆ. ಅವರಿಗೆ ಈ ಸಾಧನ ಅಭಿವೃದ್ಧಿಪಡಿಸಲು ಆರುತಿಂಗಳು ಹಿಡಿದಿದೆಯಂತೆ.

ಸುಮಾರು 6 ಸಾವಿರ ರುಪಾಯಿವರೆಗೆ ಸೆನ್ಸಾರುಗಳಿಗೆ ಜೈ ರಾಜೇಶ್ ಖರ್ಚು ಮಾಡಿದ್ದಾರೆ. "ಬೈಕ್ ಮತ್ತು ಹೆಲ್ಮೆಟಿನೊಳಗೆ ಸೆನ್ಸಾರ್ ಅಳವಡಿಸಿದ್ದೇನೆ. ಜೊತೆಗೆ ಬೈಕ್ ಪೆಟ್ರೋಲ್ ಟ್ಯಾಂಕ್ ಮೇಲೆ ವಿಶೇಷ ಸೆಲ್ ಫೋನ್ ಸ್ಟಾಂಡ್ ಒಂದನ್ನು ನಿರ್ಮಿಸಲಾಗಿದೆ. ಸೆಲ್ ಫೋನನ್ನು ಈ ಸ್ಟಾಂಡಿನಿಂದ ತೆಗೆದರೆ ಬೈಕ್ ಆಪ್ ಆಗುತ್ತದೆ" ಎಂದು ಅವರು ನೂತನ ಸಾಧನದ ಕುರಿತು ವಿವರಿಸಿದ್ದಾರೆ.

ಕುಡಿದು ದ್ವಿಚಕ್ರ ವಾಹನ ಚಾಲನೆ ಮಾಡಲು ಕಂಡು ಹಿಡಿಯಲು ಹೆಲ್ಮೆಟಿನಲ್ಲಿ ಸೆನ್ಸಾರಿದೆ. "ಇದು ವಾಹನ ಚಾಲಕ ಕುಡಿದಿದ್ದರೆ ಪತ್ತೆ ಮಾಡುತ್ತದೆ. ಎಲ್ಲಾದರೂ ಚಾಲಕ ಹೆಲ್ಮೆಟ್ ತೆಗೆದು ಬೈಕ್ ಚಾಲನೆ ಮಾಡಲು ಪ್ರಯತ್ನಿಸಿದರೆ ಬೈಕ್ ಎಂಜಿನ್ ಆಫ್ ಆಗುತ್ತದೆ. ಈ ಸಾಧನವು ಬೈಕ್ ಚಾಲಕರು ಮತ್ತು ರಸ್ತೆಯ ಮೇಲಿರುವ ಇತರರ ಪ್ರಾಣ ಉಳಿಸಲು ಸಹಕರಿಸುತ್ತದೆ" ಎಂದು ಅವರು ಹೇಳಿದ್ದಾರೆ.

"ಗ್ರಾಹಕರಿಗೆ ಈ ಫೀಚರನ್ನು ಬದಲಾಯಿಸಲು ಅವಕಾಶವಿಲ್ಲದಂತೆ ವಾಹನ ಕಂಪನಿಗಳು ಬೈಕ್ ಮತ್ತು ಹೆಲ್ಮೆಟಿಗೆ ಈ ಸಾಧನವನ್ನು ಇನ್ ಸ್ಟಾಲ್ ಮಾಡಬೇಕು. ಈ ರೀತಿಯಾದರೆ ಮಾತ್ರ ಅಪಘಾತಗಳನ್ನು ತಡೆಯಲು ಸಾಧ್ಯ" ಎಂದು ಜೈ ರಾಜೇಶ್ ತಿಳಿಸಿದ್ದಾರೆ.

More from DriveSpark

Article Published On: Monday, June 4, 2012, 16:21 [IST]
English summary
Madras Institute of Technology (MIT) final year Masters in Engineering mechatronics student developed negligent riders alerting Helmet device. These innovation detect Drunk Drivers, not wearing helmet using mobile phone while driving.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+