ಹೊಸ ಬಜಾಜ್ ಪಲ್ಸರ್ ರಸ್ತೆಗಿಳಿಯಲು ಹೆಚ್ಚು ದಿನ ಉಳಿದಿಲ್ಲವಣ್ಣ!!

ನಿಜ ಹೇಳಬೇಕೆಂದರೆ ರಾಜೀವ್ ಬಜಾಜ್ ಕಂಪನಿಯ ತ್ರೈಮಾಸಿಕ ಲಾಭ ನಷ್ಟದ ಕುರಿತು ಸಂದರ್ಶನದಲ್ಲಿ ಮಾತನಾಡುತ್ತಿದ್ದರು. ಆದರೆ ತಿಳಿದೋ ತಿಳಿಯದೆಯೋ ಆ ಸಂದರ್ಭದಲ್ಲಿ ಹೊಸ ಬಜಾಜ್ ಪಲ್ಸರ್ ಶೀಘ್ರದಲ್ಲಿ ರಸ್ತೆಗಿಳಿಯುವ ಸುದ್ದಿಯನ್ನು ಹೊರಹಾಕಿದ್ದಾರೆ.
ನಾಡಿದ್ದು ಜನವರಿ 24ಕ್ಕೆ ಕಂಪನಿಯು ಕೆಟಿಎಂ ಡ್ಯೂಕ್ 200 ಸಿಸಿ ಬೈಕನ್ನು ಹೊರತರುವ ಸುದ್ದಿ ನಿಮಗೆ ಗೊತ್ತು. ಆದರೆ ಇದೇ ತಿಂಗಳ 30ರಂದು ಕಂಪನಿಯು ಬಜಾಜ್ ಪಲ್ಸರ್ ಹೊಸ ಆವೃತ್ತಿಯನ್ನು ಪರಿಚಯಿಸಲಿದೆ. ಹೀಗಾಗಿ ಇದು ಬ್ರೇಕಿಂಗ್ ನ್ಯೂಸ್. ಅದಕ್ಕೂ ಮುನ್ನ (ಜನವರಿ 24) ಕೆಟಿಎಂ ಡ್ಯೂಕ್ ಬೈಕ್ ಕೂಡ ರಸ್ತೆಗಿಳಿಯಲಿದೆ.
ಕಂಪನಿಯು ಆಟೋ ರಿಕ್ಷಾದಂತಹ ಬಜಾಜ್ ಆರ್ ಇ ಕಾರನ್ನು ಇತ್ತೀಚೆಗೆ ಪರಿಚಯಿಸಿತ್ತು. ಈಗ ಕಂಪನಿಯು 2012ರ ಆಲ್ ನ್ಯೂ ಪಲ್ಸರ್ ಬಿಡುಗಡೆಯತ್ತ ಗಮನ ಹರಿಸಿದೆ. ಆದರೆ ಸಂದರ್ಶನದಲ್ಲಿ ಬಾಯಿ ತಪ್ಪಿ ಹೇಳಿದಂತೆ ತಿಳಿಸಿದ ಬಜಾಜ್ ಪಲ್ಸರ್ ಸುದ್ದಿಯ ಕುರಿತು ಅವರು ನಂತರ ಹೆಚ್ಚು ಮಾತನಾಡಿಲ್ಲ.
ಬಜಾಜ್ ಕೆಟಿಎಂ ಡ್ಯೂಕ್ ಮತ್ತು ಪಲ್ಸರ್ ಬೈಕುಗಳು ಅತ್ಯಧಿಕ ಮಾರುಕಟ್ಟೆ ಪಾಲು ಹೊಂದಿರುವ ಕೆಟಗರಿಯಲ್ಲಿವೆ. ಹೀಗಾಗಿ ನೂತನ ಆವೃತ್ತಿಗಳು ಕೂಡ ರಸ್ತೆಯಲ್ಲಿ ಹೊಸ ಕಿಡಿಯೆಬ್ಬಿಸುವ ನಿರೀಕ್ಷೆಯಿದೆ. ಈ ಬೈಕಿನ ಕುರಿತು ಕಂಪನಿಯು ಅಧಿಕೃತವಾಗಿ ಪ್ರಕಟಿಸುವಾಗ ಹೆಚ್ಚಿನ ಮಾಹಿತಿ ಲಭಿಸಿತು. ಅಲ್ಲಿವರೆಗೆ ಕಾಯುವ ತಾಳ್ಮೆ ನಮಗಿರಲಿ.


Click it and Unblock the Notifications








