ಬರಿ ಗಾಳಿಯಿಂದಲೇ ಸಂಚರಿಸುವ ಬೈಕ್ ನೋಡಿದ್ರಾ?

ಪ್ರಸ್ತುತ ಸುದ್ದಿ ಆಲಿಸುವಾಗಲೇ ನಿಮ್ಮಲ್ಲಿ ಅಚ್ಚರಿ ಮೂಡಿರಬಹುದು. ಅಂದ ಹಾಗೆ ನೀವು ಎಂದಾದರೂ ಬರಿ ಗಾಳಿಯಿಂದಲೇ ಸಂಚರಿಸುವ ಬೈಕ್ ನೋಡಿದ್ರಾ? ಇಲ್ಲ ಅಲ್ಲ. ನಾವಿಂದು ಬರಿ ಗಾಳಿಯ ಸಹಾಯದಿಂದಲೇ ಚಲಿಸುವ ಬೈಕ್‌ವೊಂದರ ಕುರಿತಾಗಿ ಮಾಹಿತಿ ನೀಡಲಿದ್ವೇವೆ.

ಇದು ನೀರ್ಮಾಣವಾಗಿರುವುದು ಭಾರತದಲ್ಲಲ್ಲ. ಬದಲಾಗಿ ಆಸ್ಟ್ರೇಲಿಯಾದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಇಂತಹದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಕಂಪ್ರೆಸ್ಡ್ ಏರ್ ಟ್ಯಾಂಕ್ ಬೆಂಬಲದೊಂದಿಗೆ ಚಾಲಿತವಾಗಲಿರುವ ಈ ಒ2 ಪರ್ಸ್ಯೂಟ್ 100 ಕಿಲೋ ಮೀಟರ್ ತನಕ ಚಲಿಸಲಿದೆ. ಅಲ್ಲದೆ ಗಂಟೆಗೆ ಗರಿಷ್ಠ 100 ಕಿಲೋ ಮೀಟರ್ ವೇಗವನ್ನು ಒದಗಿಸಲಿದೆ.

ಬರಿ ಗಾಳಿಯಿಂದ ಸಂಚರಿಸುವ ಬೈಕ್

ಯಮಹಾ ಡರ್ಟ್ ಬೈಕ್ ತಲಹದಿಯಲ್ಲಿ ಒ2 ಪರ್ಸ್ಯೂಟ್ ಮೋಟಾರ್ ಬೈಕ್ ತಯಾರಿಸಲಾಗಿದೆ. ಯಮಹಾ ಡಬ್ಲ್ಯುಆರ್250ಆರ್ ಫ್ರೇಮ್ ಬಳಸಿ ಡೀನ್ ಬೆನ್‌ಸ್ಟೀಡ್ ಎಂಬವರು ಈ ಅನ್ವೇಷಣೆ ಮಾಡಿದ್ದಾರೆ. ಸ್ಕೂಬಾ ಡ್ರೈವರುಗಳು ಸಾಮಾನ್ಯವಾಗಿ ಬಳಸುವ ಕಂಪ್ರೆಸ್ಡ್ ಏರ್ ಟ್ಯಾಂಕ್ ಅನ್ನು ಇಂಧನ ಟ್ಯಾಂಕ್ ಜಾಗದಲ್ಲಿ ಪ್ರಯೋಗಿಸಲಾಗಿದೆ.

ಬರಿ ಗಾಳಿಯಿಂದ ಸಂಚರಿಸುವ ಬೈಕ್

ಕಂಪ್ರೆಸ್ಡ್ ವಾಹನಗಳನ್ನು ಚಲಾಯಿಸಲು ಈ ಹಿಂದೆ ಹಲವಾರು ಮಂದಿ ಪ್ರಯೋಗ ಮಾಡಿದ್ದರೂ ಅದರ ಕ್ಷಮತೆ ಹಾಗೂ ವ್ಯಾಪ್ತಿ ಬಗ್ಗೆ ಹಲವಾರು ಸಮಸ್ಯೆಗಳು ಎದಿದ್ದವು. ಆದರೆ ಗರಿಷ್ಠ 100 ಕಿಲೋ ಮೀಟರ್ ತನಕ ಚಲಾಯಿಸುವ ಸಾಮರ್ಥ್ಯ ಹೊಂದಿರುವ ಈ ಒ2 ಡರ್ಟ್ ಬೈಕ್ ನಿಜಕ್ಕೂ ನೂತನ ಅವತರಣಿಕೆಯಾಗಿದೆ.

ಸ್ಕೂಬಾ ಏರ್ ಟ್ಯಾಂಕ್

ಸ್ಕೂಬಾ ಏರ್ ಟ್ಯಾಂಕ್

ಯಮಹಾ ವಿಆರ್250ಆರ್ ಫ್ರೇಮ್ ತಲಹದಿಯಲ್ಲಿ ಒ2 ಪರ್ಸ್ಯೂಟ್ ಡರ್ಟ್ ಬೈಕ್ ತಯಾರಿಸಲಾಗಿದ್ದು, ಸಂಪೂರ್ಣವಾಗಿ ಗಾಳಿ ಸಹಾಯದಿಂದಲೇ ಚಲಿಸಲಿದೆ.

ಬರಿ ಗಾಳಿಯಿಂದ ಸಂಚರಿಸುವ ಬೈಕ್

ನಿಜ ಸ್ಥಿತಿ ಏನೆಂದರೆ ಡರ್ಟ್ ಬೈಕ್‌ಗಳು ಇತರ ದ್ವಿಚಕ್ರ ವಾಹನಗಳಿಗೆ ಹೋಲಿಸಿದರೆ ತುಂಬಾನೇ ಹಗುರವಾಗಿದ್ದು 100 ಕಿ. ಮೀ ತನಕದ ವ್ಯಾಪಿಗೆ ಸಂಚರಿಸಲಿದೆ.

ಬರಿ ಗಾಳಿಯಿಂದ ಸಂಚರಿಸುವ ಬೈಕ್

ಅಂದ ಹಾಗೆ ಒ2 ಪರ್ಸ್ಯೂಟ್ ಇದೀಗಲೂ ಪರೀಕ್ಷೆಯ ಹಂತದಲ್ಲಿದ್ದು, ಎಲೆಕ್ಟ್ರಿಕ್ ಬೈಕ್‌ಗಳಿಗಿಂತಲೂ ಹೆಚ್ಚಿನ ಪರಿಸರ ಸ್ನೇಹಿ ಬೈಕ್‌ಗಳನ್ನು ತಯಾರಿಸುವ ಪ್ರಯತ್ನದಲ್ಲಿರುವುದಾಗಿ ಆಸೀಸ್ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಯಾವುದೇ ಬ್ಯಾಟರಿ ಬಳಕೆ ಇಲ್ಲದಿದ್ದರಿಂದ ಬಾಳ್ವಿಕೆ ಕಳೆದ ಬಳಿಕ ಉಂಟಾಗುವ ಪರಿಸರ ಹಾನಿಯ ಬಗ್ಗೆಯೂ ಭಯಪಡುವ ಅಗತ್ಯವಿಲ್ಲ.

ಬರಿ ಗಾಳಿಯಿಂದ ಸಂಚರಿಸುವ ಬೈಕ್

ಭಾರತೀಯ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಹ ಏರ್ ಬೈಕ್ ರೂಪಿಸಲು ಪ್ರಯತ್ನ ಪಟ್ಟಿದ್ದರು.

ಬರಿ ಗಾಳಿಯಿಂದ ಸಂಚರಿಸುವ ಬೈಕ್

ಕಂಪ್ರೆಸ್ಡ್ ಏರ್‌ನಲ್ಲಿ ಚಲಿಸುವ ಕಾರುವೊಂದನ್ನು ತಯಾರಿಸಲು ಟಾಟಾ ಮೋಟಾರ್ಸ್ ಗುರಿಯಿರಿಸಿಕೊಂಡಿದೆ. ಪ್ರಸ್ತುತ ಕಾರು ಈ ಹಿಂದೆ 2012ನೇ ಸಾಲಿನಲ್ಲಿ ರಿಲೀಸ್ ಆಗಲಿದೆಯೆಂಬ ಸುದ್ದಿ ಹರಡಿದ್ದರೂ ಈ ವರೆಗೂ ಯಾವುದೇ ಮಾಹಿತಿ ಲಭಿಸಿಲ್ಲ.

ಬರಿ ಗಾಳಿಯಿಂದ ಸಂಚರಿಸುವ ಬೈಕ್

ಸದ್ಯ ಓ2 ಬೈಕ್ ಹೆಚ್ಚು ಪ್ರಯೋಗಿಕ ಹಂತದಲ್ಲಿದೆ. ಬೈಕ್ ತಯಾರಕರ ಪ್ರಕಾರ ಏರ್ ಟ್ಯಾಂಕ್ ಕೇವಲ ಎರಡು ನಿಮಿಷಗಳಲ್ಲಿ ಮರುಭರ್ತಿ ಮಾಡಬಹುದು. ಮತ್ತೊಂದೆಡೆ ಎಲೆಕ್ಟ್ರಿಕ್ ಬೈಕ್‌ಗಳಿಗೆ ರಿಚಾರ್ಜ್ ಮಾಡಲು ತುಂಬಾನೇ ಸಮಯ ತಗುಲುತ್ತಿದ್ದು, ಹೆಚ್ಚಿನ ವಿದ್ಯುತ್ತಿನ ಅಗತ್ಯವಿರುತ್ತದೆ.

ಬರಿ ಗಾಳಿಯಿಂದ ಸಂಚರಿಸುವ ಬೈಕ್

ದಿನದಿಂದ ದಿನಕ್ಕೆ ಇಂಧನ ಬೆಲೆ ಗಗನಕ್ಕೇರುತ್ತಿರುವ ಈ ಪರಿಸ್ಥಿತಿಯಲ್ಲಿ ಒ2 ಪರ್ಸ್ಯೂಟ್ ನಿಜಕ್ಕೂ ಒಂದು ಉತ್ತಮ ಬದಲಿ ವ್ಯವಸ್ಥೆಯಾಗುವ ನಿರೀಕ್ಷೆಯಿದೆ.

Article Published On: Tuesday, November 13, 2012, 15:35 [IST]
English summary
Here is a bike that runs on pure air. Using a compressed air tank, the O2 Pursuit can run for as many as 100 kilometres and also reach a top speed of 140kmph. This dirt bike has been developed by Australian engineering students
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+