ಪಿಲಿಫೈನ್ಸ್ ಪ್ರವೇಶಿಸಿದ ರಾಯಲ್ ಎನ್ ಫೀಲ್ಡ್ ಬುಲೆಟ್

ಭಾರತದ ಬೈಕು ಸವಾರರು ಹೇಗೆ ಎನ್ನುವುದನ್ನು ತಿಳಿದುಕೊಳ್ಳಲು ಇನ್ನು ಮುಂದೆ ಪಿಲಿಫೈನ್ ರಾಷ್ಟ್ರದ ಜನತೆಗೆ ಸಾದ್ಯವಾಗಲಿದೆ. ಕಂಪನಿಯು ಪಿಲಿಫೈನ್ ದೇಶದಲ್ಲಿ ಕ್ಲಾಸಿಕ್ 500. ಕ್ಲಾಸಿಕ್ ಕ್ರೊಮ್ 500, ಡೆಸಾರ್ಟ್ ಸ್ಟ್ರೋಮ್, ಎಲೆಕ್ಟ್ರಾ ಡಿಲಕ್ಸ್ ಮತ್ತು ಕ್ಲಾಸಿಕ್ 500 ಬುಲೆಟುಗಳನ್ನು ಪರಿಚಯಿಸಲಿದೆ.
ಕಂಪನಿಯ ಮೊದಲ ಡೀಲರ್ಷಿಪ್ ಮಳಿಗೆಯು ಪಿಲಿಫೈನ್ ರಾಜಧಾನಿ ಮಣಿಲಾದಲ್ಲಿ ಆರಂಭವಾಗಲಿದೆ. ಪಿಲಿಫೈನಿಗೆ ಪರಿಚಯಿಸಲಿರುವ ಮಾಡೆಲುಗಳಲ್ಲಿ ಕ್ರೊಮ್ 500 ಬ್ಯಾಟಲ್ ಗ್ರೀನ್ ಬೈಕ್ ಇಲ್ಲಿ ಹೆಚ್ಚು ಜನಪ್ರಿಯವಾಗಿಲ್ಲ. ಯಾಕೆಂದರೆ ಇಲ್ಲಿನ ಸರಕಾರವು ಈ ಬಣ್ಣದ ಬುಲೆಟನ್ನು ಮಿಲಿಟರಿಗೆ ಮಾತ್ರ ಬಳಕೆ ಮಾಡಲು ಅನುಮತಿ ನೀಡಿದೆ. ಮತ್ತೊಂದು ಮಾಡಲ್ ಎಲಾಂಟ್ರಾ ಕೂಡ ದೇಶದಿಂದ ಇತರ ಕಡೆಗೆ ರಫ್ತಾಗುತ್ತಿದೆ. ಆದರೆ ಇಲ್ಲೂ ಆ ಬೈಕ್ ಮಾರಾಟವಾಗುತ್ತಿಲ್ಲ.


Click it and Unblock the Notifications








