ರೈನೊ ಮತ್ತು ಯುನೊ: ಒಂದು ಚಕ್ರದ ಅಚ್ಚರಿ
ನಮಗೆ ಎರಡು ಚಕ್ರದ ಬೈಕ್, ಬೈಸಿಕಲ್ ಗೊತ್ತು. ಆದರೆ ಒಂದೇ ಚಕ್ರದ ವಾಹನದ ಸವಾರಿ ಹೇಗಿರುತ್ತೆ? ಭವಿಷ್ಯದಲ್ಲಿ ಒಂದೇ ಚಕ್ರದ ಯುನಿಕ್ ಮೋಟರ್ ಸೈಕಲ್ ಗಳು ರಸ್ತೆಗೆ ಆಗಮಿಸಲಿವೆ. ಈಗಾಗಲೇ ಹಲವು ಒಂದು ಚಕ್ರದ ಬಂಡಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅಂತಹ ಎರಡು ಬಂಡಿಗಳು ಇಲ್ಲಿವೆ ನೋಡಿ.
ರೈನೊ ಎಲೆಕ್ಟ್ರಿಕ್ ಯುನಿಸೈಕಲ್: ಪೋರ್ಟ್ ಲ್ಯಾಂಡ್ ಮೂಲದ ಕಂಪನಿಯು ರೈನೊ ಎಲೆಕ್ಟ್ರಿಕ್ ಯುನಿಸೈಕಲ್ ಅಭಿವೃದ್ಧಿಪಡಿಸಿದೆ. ಇದು ಇತ್ತೀಚೆಗೆ ರಸ್ತೆಗಿಳಿದ ಸೆಗ್ವೆ ಬಂಡಿ ತರ ಇದೆ. ಇದು ಲಿಯಾನ್ ಪೋಸ್ಪೆಟ್ ಬ್ಯಾಟಿ ಪ್ಯಾಕ್ ಹೊಂದಿದೆ. ಗಂಟೆಗೆ ಗರಿಷ್ಠ 20 ಮೈಲು ವೇಗದಲ್ಲಿ ರೈನ್ ಎಲೆಕ್ಟ್ರಿಕ್ ಯುನಿಸೈಕಲ್ ನಲ್ಲಿ ಪ್ರಯಾಣಿಸಬಹುದಾಗಿದೆ.
ಯುನಿಸೈಕಲ್ ಅಂದರೆ ಒಂದೇ ಚಕ್ರದ ಮೋಟರ್ ಸೈಕಲ್. ಬ್ಯಾಲೆನ್ಸ್ ಮಾಡುತ್ತ ಇದನ್ನು ರೈಡ್ ಮಾಡಬಹುದು. ಎಲ್ಲಾದರೂ ಬ್ಯಾಲೆನ್ಸ್ ತಪ್ಪಿ ಮಕಾಡೆ ಬಿದ್ದರೆ ಎದುರಿನ ಹಲ್ಲು ಕಿತ್ತೋಗುವುದು ಗ್ಯಾರಂಟಿ. ಬ್ರೇಕ್ ಆಕ್ಸಿಲರೇಟರ್ ಎಲ್ಲವೂ ಇದರಲ್ಲಿದ್ದೂ ಮುಂದಿನ ವರ್ಷದ ಮೊದಲಾರ್ಧದಲ್ಲಿ ಮಾರುಕಟ್ಟೆಗೆ ಆಗಮಿಸಲಿದೆಯಂತೆ. ಇದರ ದರ ಸುಮಾರು 4,500 ಡಾಲರ್ ಆಸುಪಾಸಿನಲ್ಲಿರಲಿದೆ.
ಯುನೊ ಸೈಕಲ್: ಇದು ಪರಿಸರ ಸ್ನೇಹಿ ಒಂದು ಚಕ್ರದ ಮೋಟರ್ ಸೈಕಲ್ ಆಗಿದೆ. ಇದರ ಸ್ಪೋರ್ಟಿ ವಿನ್ಯಾಸ ಗಮನ ಸೆಳೆಯುತ್ತದೆ. ಇದನ್ನು ಕೆನಡಾದ ಬೆನ್ ಗುಲಾಕ್ ವಿನ್ಯಾಸ ಮಾಡಿದ್ದಾರೆ. ಈ ಸಿಂಗಲ್ ಟೈರ್ ಬಂಡಿ ಇನ್ನೂ ಕಾನ್ಸೆಪ್ಟ್ ಹಂತದಲ್ಲಿದ್ದು, ರಸ್ತೆಗಿಳಿಯಲು ಹಲವು ವರ್ಷಗಳು ಬೇಕಿದೆ.
ದೇಶದ ರಸ್ತೆಗೆ ಸೆಗ್ವೆ: ಪ್ರವಾಸಿ, ತಂತ್ರಜ್ಞಾನ, ರಿಟೇಲ್ ಉದ್ಯಮದಲ್ಲಿ ಜನಪ್ರಿಯವಾಗಿರುವ ಬರ್ಡ್ ಗ್ರೂಪ್ ಕಂಪನಿಯ Segway PTಎಂಬ ವಾಹನಗಳನ್ನು ಇತ್ತೀಚೆಗೆ ದೇಶಕ್ಕೆ ಪರಿಚಯಿಸಿದೆ. ಇದು ಕೂಡ ಬ್ಯಾಲೆನ್ಸ್ ಮೂಲಕ ಪ್ರಯಾಣ ಮಾಡಬೇಕಾದ ಬಂಡಿಯಾಗಿದೆ. ಯುರೋಪ್ ದೇಶಗಳಲ್ಲಿ ಜನಪ್ರಿಯವಾಗಿರುವ ಸೆಗ್ವೆ ಪಿಟಿ ಬಂಡಿಯು ಎರಡು ಚಕ್ರ ಹೊಂದಿದ್ದು, ಸ್ವಯಂ ನಿಯಂತ್ರಣ ಹೊಂದಿರುವ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನವಾಗಿದೆ.
ಓದಿ: ದೇಶಕ್ಕೆ ಸೆಗ್ವೆ ಸ್ಪೆಷಲ್ ಬಂಡಿ ಪರಿಚಯಿಸಿದ ಬರ್ಡ್ ಗ್ರೂಪ್


Click it and Unblock the Notifications
