ಸ್ಟಾಪ್ ಗೋ: ಬೈಕ್ ಮೈಲೇಜ್ ಹೆಚ್ಚಿಸುವ ಸ್ಟಾರ್ಟ್-ಸ್ಟಾಪ್ ಸಾಧನ
ನೂತನ ಸ್ಪಾಪ್ ಸ್ಟಾರ್ಟ್ ತಂತ್ರಜ್ಞಾನವು ವಾತಾವರಣಕ್ಕೆ ಹೊರಸೂಸುವ ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಬೈಕಿನ ಮೈಲೇಜ್ ಹೆಚ್ಚಿಸುತ್ತದೆ. ಈ ಸಾಧನದಿಂದ ಬೈಕ್ ಮೈಲೇಜ್ ಸುಮಾರು ಶೇಕಡ 6ರಿಂದ 10ರಷ್ಟು ಹೆಚ್ಚಾಗಲಿದೆ ಎಂದು ಎಕೆಎಫ್ ಪ್ರತಿಪಾದಿಸಿದೆ.
ಬೈಕುಗಳಿಗೆ ನೂತನ ಸ್ಪಾಪ್ ಸ್ಟಾರ್ಟ್ ತಂತ್ರಜ್ಞಾನ "ಸ್ಟಾಪ್ ಗೋ" ಅಳವಡಿಸಬಹುದು. ಇದನ್ನು ಎಸ್ ಕೆಎಫ್ ಫ್ರಾನ್ಸಿನ ಟೆಕ್ ವಿಭಾಗವು ಅಭಿವೃದ್ಧಿಪಡಿಸಿದೆ. ಈ ಸಾಧನ ಯಾವ ರೀತಿಯಾಗಿ ಮೈಲೇಜ್ ಹೆಚ್ಚಿಸುತ್ತದೆ ಎಂಬ ಸಂಶಯ ನಿಮ್ಮಲ್ಲಿರಬಹುದು.
ಬೈಕನ್ನು ಹೆಚ್ಚು ಹೊತ್ತು ಸ್ಟಾರ್ಟ್ ಮಾಡಿ ಇಡಬೇಕಾದ ಸ್ಥಿತಿ ಬಂದ್ರೆ ಈ ಸಾಧನವು ಎಂಜಿನನ್ನು ಆಫ್ ಮಾಡುತ್ತದೆ. ಉದಾಹರಣೆಗೆ ಟ್ರಾಫಿಕ್ ಸಿಗ್ನಲಿನಲ್ಲಿ ಹೆಚ್ಚು ಹೊತ್ತು ಕಾಯಬೇಕಾದಗ ಈ ಸಾಧನವು ಎಂಜಿನ್ ಆಫ್ ಮಾಡುತ್ತದೆ.
ಎಂಜಿನ್ ಆಫ್ ಮಾಡೋಕೆ ಈ ಸಾಧನ ಏತಕ್ಕೆ? ನಾವೇ ಆಫ್ ಮಾಡ್ತಿವಿ ಅಂತ ಹೇಳಬಹುದು. ಆದ್ರೆ ಆಮೇಲೆ ಮತ್ತೆ ಸ್ಟಾರ್ಟ್ ಮಾಡ್ಬೆಕು ಅಲ್ವ? ಆದರೆ ಈ ಸಾಧನವಿದ್ದರೆ ಥ್ರೋಟಲ್ ರೈಸ್ ಮಾಡುವಾಗ ಮತ್ತೆ ಎಂಜಿನ್ ಆನ್ ಆಗುತ್ತದೆ.
ಕಂಪನಿಯು ಈಗಾಗಲೇ ಈ ಸಾಧನವನ್ನು ಬಜಾಜ್ ಪಲ್ಸರ್, ಟಿವಿಎಸ್ ಅಪಾಚಿ ಮತ್ತು ಹೀರೊ ಕರಿಜ್ಮಾ ಬೈಕುಗಳಿಗೆ ಅಳವಡಿಸಿ ಟೆಸ್ಟ್ ಮಾಡಿದೆ. ಆದರೆ ಪ್ರಮುಖ ಪ್ರಶ್ನೆಯಿರುವುದು ಕಂಪನಿಯು ಈ ಸಾಧನವನ್ನು ಎಂಟ್ರಿ ಲೆವೆಲ್ ಬೈಕುಗಳಿಗೂ ಅಳವಡಿಸಬಹುದಾ ಅಂತ. ಮುಂದಿನ ವರ್ಷ ಅಂತಹ ಸಾಧನವನ್ನೂ ಅಭಿವೃದ್ಧಿಪಡಿಸುವುದಾಗಿ ಕಂಪನಿ ಭರವಸೆ ನೀಡಿದೆ.


Click it and Unblock the Notifications









