ಟಾರ್ಟರಿನಿ ಬ್ರೂಟಸ್ ಎಸ್‌ಯುವಿ ಬೈಕ್‌ನ ಪೊಗರೇ?
ನೀವು ಹಲವು ವಿಧಗಳ ಬೈಕ್‌ಗಳನ್ನು ನೋಡಿರಬಹುದು. ಇನ್ನು ಹಲವು ಬಾರಿ ಅಂತಹ ಬೈಕ್‌ಗಳಲ್ಲಿ ಡ್ರೈವಿಂಗ್ ಕೂಡಾ ಮಾಡಿರಬಹುದು. ಆದರೆ ನೀವು ಎಂದಾದರೂ ಸ್ಫೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಬೈಕ್ ಬಗ್ಗೆ ಕೇಳಿದ್ದೀರಾ?
ಹೌದು, ನಾವು ಟಾರ್ಟರಿನಿ ಬ್ರೂಟಸ್ ಕಾನ್ಸೆಪ್ಟ್ ಬಗ್ಗೆ ಮಾತನಾಡುತ್ತಿರುವುದು. ಹೆಸರಲ್ಲಿ ಸೂಚಿಸಿದಂತೆ ಬ್ರೂಟಸ್ ಅಂದರೆ ನಿರ್ದಯಿಯಂತೂ ಅಲ್ಲ. ಆದರೆ ಕಾರ್ಯ ಕ್ಷಮತೆಯಲ್ಲಿ ಮಾತ್ರ ತನ್ನತನವನ್ನು ಬಿಟ್ಟುಕೊಡಲು ಮಾತ್ರ ಸಿದ್ಧವಿಲ್ಲ.
ಬ್ರೂಟಸ್ ಎಸ್‌ಯುವಿ ಬೈಕ್ ಕಾನ್ಸೆಪ್ಟ್ ಅನ್ನು ಲಿಯಾಪಾಲ್ಡೊ ಟರ್ಟಾರಿನಿ ಎಂಬವರು ತಯಾರಿಸಿದ್ದಾರೆ. ಅಲ್ಲದೆ ಈಗಾಗಲೇ 2012 ಇಟಲಿ EICMA ಶೋದಲ್ಲಿ ಪ್ರದರ್ಶನವನ್ನು ಕಂಡಿದೆ. ಅಂದ ಹಾಗೆ ಟಾರ್ಟರಿನಿ ಬ್ರೂಟಸ್ ಬೈಕ್ ಭರ್ಜರಿ 750 ಸಿಸಿ ಎಂಜಿನ್ ಹೊಂದಿರಲಿದ್ದು ಇದು 45 ಹಾರ್ಸ್ ಪವರ್ ಉತ್ಪಾದಿಸಲಿದೆ.
ಮಾಕ್ಸಿಸ್ ಬಿಗಾರ್ನ್ (Maxxis Bighorn) ಟಯರ್ ಹೊಂದಿರುವ ಬ್ರೂಟಸ್ ಯಾವುದೇ ನಿರ್ಗಮ, ಮರಳು ಹಾಗೂ ಆಫ್ ರೋಡ್‌ಗಳಲ್ಲೂ ಉತ್ತಮ ಸವಾರಿಗೆ ನೆರವು ಮಾಡಲಿದೆ.
ಹಾಗಿದ್ದರೂ 220 ಕೆ.ಜಿ (485 ಎಲ್‌ಬಿಎಸ್) ಭಾರದ ಬ್ರೂಟಸ್ ಬೈಕ್ ಅನ್ನು ನಿಭಾಯಿಸುವುದು ಅಷ್ಟ ಸುಲಭ ಮಾತಲ್ಲ. ಆದರೆ ಡರ್ಟ್ ರೋಡ್‌ಗಳಿಗೆ ಹೆಚ್ಚು ಹೊಂದಿಕೆಯಾಗಲಿದೆ. ಉಳಿದಂತೆ ಫೈರ್ ಪ್ರಿವೆನ್ಷನ್ ಕಿಟ್ ಸಹಿತ ಸ್ನೊ ಕಿಟ್ (ಹಿಮ) ಪ್ಯಾಕ್ ಕೂಡಾ ಆಫರ್ ಮಾಡುತ್ತಿದೆ. ಇದು ಸಿಂಗಲ್ ಸಿಲಿಂಡರ್, ಫೋರ್ ವಾಲ್ವೆ ಲಿಕ್ವಿಡ್ ಏರ್ ಕೂಲ್ಡ್ 45 ಬಿಎಚ್‌ಪಿ ಜತೆ ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಷನ್ ಹೊಂದಿರಲಿದೆ.

ಟಾರ್ಟರಿನಿ ಬ್ರೂಟಸ್ ಎಸ್‌ಯುವಿ ಬೈಕ್‌ನ ಪೊಗರು

ಟಾರ್ಟರಿನಿ ಬ್ರೂಟಸ್ ಎಸ್‌ಯುವಿ ಬೈಕ್‌ನ ಪೊಗರು

ಟಾರ್ಟರಿನಿ ಬ್ರೂಟಸ್ ಎಸ್‌ಯುವಿ ಬೈಕ್‌ನ ಪೊಗರು

ಟಾರ್ಟರಿನಿ ಬ್ರೂಟಸ್ ಎಸ್‌ಯುವಿ ಬೈಕ್‌ನ ಪೊಗರು

ಟಾರ್ಟರಿನಿ ಬ್ರೂಟಸ್ ಎಸ್‌ಯುವಿ ಬೈಕ್‌ನ ಪೊಗರು

ಟಾರ್ಟರಿನಿ ಬ್ರೂಟಸ್ ಎಸ್‌ಯುವಿ ಬೈಕ್‌ನ ಪೊಗರು

ಟಾರ್ಟರಿನಿ ಬ್ರೂಟಸ್ ಎಸ್‌ಯುವಿ ಬೈಕ್‌ನ ಪೊಗರು

ಟಾರ್ಟರಿನಿ ಬ್ರೂಟಸ್ ಎಸ್‌ಯುವಿ ಬೈಕ್‌ನ ಪೊಗರು

ಟಾರ್ಟರಿನಿ ಬ್ರೂಟಸ್ ಎಸ್‌ಯುವಿ ಬೈಕ್‌ನ ಪೊಗರು

ಟಾರ್ಟರಿನಿ ಬ್ರೂಟಸ್ ಎಸ್‌ಯುವಿ ಬೈಕ್‌ನ ಪೊಗರು

ಟಾರ್ಟರಿನಿ ಬ್ರೂಟಸ್ ಎಸ್‌ಯುವಿ ಬೈಕ್‌ನ ಪೊಗರು


Click it and Unblock the Notifications