ಮಳೆ, ಗಾಳಿ, ಬಿಸಿಲು ನೊ ಟೆನ್ಷನ್; ಕ್ರಾಸ್‌ಬೌ ಇದೆಯಲ್ಲ!
ಸಾಮಾನ್ಯವಾಗಿ ಮಳೆಗಾಲದಲ್ಲಿ ಬೈಕ್‌ಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ನಾವು ರೈನ್ ಕೋಟ್ ಧರಿಸುತ್ತೇವೆ. ಈ ಮೂಲಕ ದೇಹ ಒದ್ದೆಯಾಗದಂತೆ ನೋಡಿಕೊಳ್ಳುತ್ತೇವೆ. ಕೆಲವರಿಗಂತೂ ರೈಟ್ ಕೋಟ್ ಧರಿಸುವುದು ಕಿರಿಕಿರಿಯನ್ನುಂಟು ಮಾಡುತ್ತದೆ.
ಹಾಗಿದ್ದರೆ ನೀವು ಲಾಂಗ್ ಡ್ರೈವ್ ಇಷ್ಟಪುಡುವುದಿಲ್ಲವೇ? ಯಾವುದೇ ಹಮಾಮಾನ ವೈಪರೀತ್ಯದ ನಡುವೆಯೇ ಸುಲಿಲಿತವಾಗಿ ಚಲಿಸುವ ಬೈಕ್ ನಿಮ್ಮ ಫೇವರಿಟ್ ಲಿಸ್ಟ್‌ನಲ್ಲಿ ಇಲ್ಲವೇ.? ಹಾಗಿದ್ದರೆ ಬನ್ನಿ, ನಾವಿಂದು ಅಂತಹದೊಂದು ಆಕರ್ಷಕ ಬೈಕ್‌ನ ಪರಿಚಯ ಮಾಡಿಕೊಡಲಿದ್ದೇವೆ.
ಮಳೆ ಆಗಿರಬಹುದು, ಚಳಿ ಆಗಿರಬಹುದು ಅಥವಾ ಸುಡು ಬಿಸಿಲೇ ಆಗಿರಬಹುದು. ಯಾವುದೇ ಪರಿಸ್ಥಿತಿಗೂ ಹೊಂದಾಣಿಕೆಯಾಗುವ ಎಲೆಕ್ಟ್ರಿಕ್ ಬೈಕಿದು. ಹಾಗಿದ್ದರೆ ಆ ಬೈಕ್ ಹೆಂಗಿರಬೇಕು? ಬಿನ್ನಿ ನೋಡೋಣ.

ಭಾರಿ ಮಳೆಯ ಸಂದರ್ಭದಲ್ಲಿ ನೀವು ರಸ್ತೆ ಬದಿಯಲ್ಲಿ, ಮರಳ ಕೆಳಗಡೆ ಅಥವಾ ಬಸ್‌ಸ್ಟಾಂಡ್‌ಗಳಲ್ಲಿ ಆಶ್ರಮ ಪಡೆದುಕೊಳ್ಳುವೀರಾ. ಆವಾಗ ನಿಮ್ಮ ಮನಸ್ಸಲ್ಲಿ ಅಯ್ಯೋ ಪಾಪಾ ಯಾಕಿಷ್ಟು ಕಷ್ಟ ದೇವರೇ ಎಂದೆನಿಸುತ್ತದೆ. ಆದರೆ ಈ ಎಲ್ಲ ಸಮಸ್ಯೆಗಳು ಇನ್ನು ಮುಂದೆ ನಿಮ್ಮನ್ನು ಕಾಡಲಾರದು. ಹೌದು, ವಿಶ್ವದಲ್ಲೇ ಮೊದಲ ಬಾರಿಗೆ ಯಾವುದೇ ವಾತಾವರಣದಲ್ಲಿ ಸುಲಿಲಿತವಾಗಿ ಚಲಿಸುವ ಕ್ರಾಸ್‌ಬೌ ಎಲೆಕ್ಟ್ರಿಕ್ ಬೈಕ್ ಅನಾವರಣಗೊಂಡಿದೆ. ಇದು ಕೇವಲ ಮಳೆಯಿಂದಷ್ಟೇ ಅಷ್ಟೇ ಅಲ್ಲ ಜೋರಾಗಿ ಗಾಳಿ ಬೀಸಿದರೂ ನಿಮಗೆ ರಕ್ಷಣೆ ಒದಗಿಸಲಿದೆ.

ಕ್ರಾಸ್‌ಬೌ ಬೈಕ್‌ನ ವಿನ್ಯಾಸವನ್ನು ಪ್ರಮುಖ ಡಿಸೈನರ್ ಪಿಲ್ ಪೌಲೆ ನಿರ್ಮಿಸಿದ್ದಾರೆ. ಸ್ಪೋರ್ಟ್ ಬೈಕ್ ಲುಕ್ ಹೊಂದಿರುವ ಕ್ರಾಸ್‌ಬೌ ಉತ್ತಮ ಇಂಧನ ಕ್ಷಮತೆಯನ್ನು ಹೊಂದಿದ್ದು, ಬೈಕ್ ರೈಡಿಂಗ್ ಸಂದರ್ಭದಲ್ಲಿ ನಿಮಗೆ ಹೆಚ್ಚಿನ ರಕ್ಷಣೆ ಒದಗಿಸಲಿದೆ.

ಕ್ರಾಸ್‌ಬೌ ಎಲೆಕ್ಟ್ರಿಕ್ ಬೈಕ್ ಯಾವುದೇ ಹಮಾಮಾನದಲ್ಲೂ ತೊಂದರೆಯಿಲ್ಲದೆ ಚಲಾಯಿಸಬಹುದಾಗಿದೆ. ಈ ಬೈಕ್‌ನ ಮುಂಭಾಗದಲ್ಲಿ ಮೇಲಾವರಣ ಆಕಾರದ ಕವರ್ ಪ್ರಯೋಗಿಸಲಾಗಿದ್ದು, ಇದನ್ನು ಫೋಲ್ಡ್ ಮಾಡುವುದರಿಂದ ಭಾರಿ ಮಳೆಯಿಂದಲೂ ರಕ್ಷಣೆ ಸಿಗಲಿದೆ.

ಕ್ರಾಸ್‌ಬೌ ಬೈಕ್ ಅನ್ನು ಈ ರೀತಿ ಡಿಸೈನ್ ಮಾಡಲಾಗಿದ್ದು ಅಂದರೆ ವೇಗವಾಗಿ ಬೀಸುವ ಗಾಳಿಯಿಂದಲೂ ರಕ್ಷಣೆ ಸಿಗಲಿದೆ. ಅಲ್ಲದೆ ಅಮೋಘ ಸಿಟ್ಟಿಂಗ್ ವ್ಯವಸ್ಥೆ ಹಾಗೂ ಆಕರ್ಷಕ ಸಸ್ಪೆಷನ್ ಗಾಡಿ ಇನ್ನು ವೇಗವಾಗಿ ಚಲಿಸಲು ನೆರವು ಮಾಡಲಿದೆ.

ಕ್ರಾಸ್‌ಬೌ ಬೈಕ್‌ನಲ್ಲಿ ಶ್ರೇಷ್ಠ ಗುಣಮಟ್ಟದ ಗ್ಲಾಸ್ ಆಳವಸಲಾಗಿದ್ದು ಇದರಿಂದ ಸುಡು ಬಿಸಿಲು ಅಥವಾ ಮಂಜುನಿಂದ ಆವೃತ್ತವಾದ ಪರಿಸ್ಥಿತಿಯಲ್ಲೂ ರಸ್ತೆಯತ್ತ ಗಮನ ಹರಿಸಲು ನೆರವು ಸಿಗಲಿದೆ. ಅಂತೆಯೇ ಅಚಾನಕ್ ಬರುವ ಗಾಳಿಯನ್ನು ಇದರಿಂದ ತಪ್ಪಿಸಬಹುದಾಗಿದೆ.

ಕ್ರಾಸ್‌ಬೌ ಬೈಕ್‌ನ ಮುಂಭಾಗದ ಡಿಸೈನ್ ಅದ್ಭುತವಾಗಿದೆ. ನೋಡಲು ಇದು ಥೇಟ್ ಸೂಪರ್ ಫಾಸ್ಟ್ ಸ್ಪೋರ್ಟ್ಸ್ ಬೈಕ್ ತರಹನೇ ಇದೆ. ಆದರೂ ಸಾಮಾನ್ಯ ಬೈಕ್‌ಗಿಂತಲೂ ತೀರಾ ವಿಭಿನ್ನವಾಗಿದೆ.

ಕ್ರಾಸ್‌ಬೌ ಬೈಕ್‌ನ ಮತ್ತೊಂದು ವಿಶೇಷತೆ ಏನೆಂದರೆ ಚಲಿಸುವ ಸಂದರ್ಭದಲ್ಲಿ ನೀವು ಹೆಲ್ಮೆಟ್ ಬಳಸುವ ಅಗತ್ಯವಿಲ್ಲ. ಇದರಿಂದ ಹೆಲ್ಮೆಟ್ ಬಳಸುವ ಕಿರಿಕಿರಿಯನ್ನು ತಪ್ಪಿಸಬಹುದು.

ಪ್ರಸ್ತುತ ಕ್ರಾಸ್‌ಬೌ ಬೈಕ್‌ನ ದರ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ. ಆದರೆ ಇದರ ಲುಕ್ ನೋಡಿದ್ರೆ ಸ್ವಲ್ಪ ದುಬಾರಿನೇ ಅನಿಸುತ್ತಿದೆ.


Click it and Unblock the Notifications








