ಜಗತ್ತಿನ ಟಾಪ್ 10 ಅತಿ ವೇಗದ ಬೈಕ್

ಜಗತ್ತಿನ ಅತಿ ವೇಗದ ಬೈಕ್‌ಗಳ ಬಗ್ಗೆ ತಿಳಿಯುವ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಬೈಕ್ ಪ್ರಿಯರಿಗಂತೂ ದಿನ ದಿನ ರಸ್ತೆಗಿಳಿಯುವ ನವನವೀನ ಬೈಕ್‌ಗಳ ಬಗ್ಗೆ ತಿಳಿಯುವ ಹಂಬಲವಿರುತ್ತದೆ. ಹಾಗಿರುವಾಗ ವಿಶ್ವದ ಅತಿ ವೇಗದ ಹತ್ತು ಬೈಕ್‌ಗಳ ಕುರಿತು ಡ್ರೈವ್ ಸ್ಪಾರ್ಕ್ ತಂಡ ಮಾಹಿತಿ ನೀಡಲಿದೆ. ಜೀವನದಲ್ಲಿ ಯಾವತ್ತಾದರೂ ಒಂದು ದಿನ ಇಂತಹ ಬೈಕ್‌ಗಳಲ್ಲಿ ಜಾಲಿ ರೈಡ್ ಹೊಡೆಯಲು ಪ್ರಯತ್ನಿಸಿರಿ.

ಟಾಪ್ 10 ವೇಗದ ಬೈಕ್‌ಗಳ ಪಟ್ಟಿಯಲ್ಲಿ ಜಪಾನ್ ಸೇರಿದಂತೆ ಯುರೋಪ್ ಬೈಕ್‌ಗಳು ಸೇರಿಕೊಂಡಿವೆ. ಜಪಾನ್‌ನ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳಾದ ಸುಜುಕಿ, ಹೊಂಡಾ, ಕವಾಸಕಿ ಹಾಗೂ ಯಮಹಾ ಬೈಕ್‌ಗಳು ಓದುಗರಿಗೆ ಪರಿಚಿತವಾಗಿದ್ದರೆ ಯುರೋಪ್‌ನ ಬಿಎಂಡಬ್ಲ್ಯು ಮೋಟರ್ಡ್, ಎಂವಿ ಅಗಸ್ಟಾ ಹಾಗೂ ಡುಕಾಟಿ ಕೂಡಾ ಅತಿ ವೇಗದ ಬೈಕ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

Suzuki GSX- R1000

Suzuki GSX- R1000

10. ಸುಜುಕಿ ಜಿಎಸ್‌ಎಕ್ಸ್- ಆರ್1000

ಟಾಪ್ 10 ಅತಿ ವೇಗದ ಬೈಕ್‌ಗಳ ಪೈಕಿ ಸುಜುಕಿ ಜಿಎಸ್‌ಎಕ್ಸ್ ಆರ್1000 ಕೊನೆಯ ಸ್ಥಾನದಲ್ಲಿದೆ. ಗುಣಮಟ್ಟದ ವಿನ್ಯಾಸ ಹೊಂದಿರುವ ಈ ಬೈಕ್ ಮೃದು ಹಾಗೂ ಶಕ್ತಿಶಾಲಿ ಎಂಜಿನ್ ಹೊಂದಿದೆ. ಇದು ಗಂಟೆಗೆ ಗರಿಷ್ಠ ಅಂದರೆ 285 ಕೀ. ಮೀ ವೇಗದಲ್ಲಿ ಚಲಾಯಿಸಬಲ್ಲದು.

Honda CBR1000 RR

Honda CBR1000 RR

9. ಹೊಂಡಾ ಸಿಬಿಆರ್‌1000 ಆರ್‌ಆರ್

ಟಾಪ್ 10 ಅತಿ ವೇಗದ ಬೈಕ್‌ಗಳ ಪೈಕಿ ಹೊಂಡಾ ಸಿಬಿಆರ್ 1000 ಆರ್ಆರ್ ಬೈಕ್ ಒಂಬತ್ತನೇ ಸ್ಥಾನದಲ್ಲಿದೆ. ಸಿಬಿಆರ್ 150 ಆರ್ ಹಾಗೂ ಸಿಬಿಆರ್ 250 ಆರ್ ಸಾಲಿನಲ್ಲಿ ಕಾಣಿಸಿಕೊಂಡಿರುವ ಹೊಂಡಾ ಸಿಬಿಆರ್ 1000 ಆರ್ಆರ್ ಬೈಕ್ ಗಂಟೆಗೆ ಗರಿಷ್ಠ 291 ಕೀ. ಮೀ. ವೇಗದಲ್ಲಿ ಚಲಾಯಿಸಬಲ್ಲದು.

Yamaha YZF- R1

Yamaha YZF- R1

8. ಯಮಹಾ ವೈಝಡ್‌ಎಫ್- ಆರ್1

ಟಾಪ್ 10 ಅತಿ ವೇಗದ ಪಟ್ಟಿಯಲ್ಲಿ ಮತ್ತೊಂದು ಪರಿಚಿತ ಬೈಕ್ ಆದ ಯಮಹಾ ಎಂಟನೇ ಸ್ಥಾನ ಪಡೆದಿದೆ. ಏರುಪೇರಿನಲ್ಲೂ ಉತ್ತಮ ಸಮತೋಲನ ಕಾಪಾಡುವುದಕ್ಕೆ ಯಮಹಾ ಆರ್1 ಹೆಸರುವಾಸಿಯಾಗಿದೆ. ಹಾಗೆಯೇ ಗಂಟೆಗೆ ಗರಿಷ್ಠ 300 ಕೀ. ಮೀ ವೇಗದಲ್ಲಿ ಸಾಗುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಇದರ ಅಧಿಕೃತ ವೇಗವು 297 kmph ಆಗಿದೆ.

Kawasaki Ninja ZZR 1400

Kawasaki Ninja ZZR 1400

7. ಕವಾಸಕಿ ನಿಂಜಾ ಝಡ್‌ಝಡ್‌ಆರ್ 1400

ಕವಾಸಕಿ ನಿಂಝಾ ಕೂಡಾ ನಿಮ್ಮ ಪರಿಚಿತ ಬೈಕಾಗಿದೆ. ಟಾಪ್ 10 ಅತಿ ವೇಗದ ಬೈಕ್‌ಗಳ ಪೈಕಿ ಏಳನೇ ಸ್ಥಾನದಲ್ಲಿರುವ ಕವಾಸಕಿ ನಿಂಜಾ ಗಂಟೆಗೆ ಗರಿಷ್ಠ 299 ಕೀ.ಮೀ ವೇಗದಲ್ಲಿ ಪ್ರಯಾಣಿಸಬಹುದು.

Ducati 1199 Panigale Superbike

Ducati 1199 Panigale Superbike

6. ಡುಕಾಟಿ 1199 ಪ್ಯಾನಿಗಾಲೆ ಸೂಪರ್‌ಬೈಕ್

ಇಟಲಿಯ ಅತಿ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಡುಕಾಟಿಯ 1199 ಪ್ಯಾನಿಗಾಲೆಸೂಪರ್‌ಬೈಕ್ ಆರನೇ ಸ್ಥಾನದಲ್ಲಿದೆ. 196 ಬಿಎಚ್‌ಪಿ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿರುವ ಡುಕಾಟಿ ಬೈಕ್ ಗಂಟೆಗೆ ಗರಿಷ್ಠ 300 ವೇಗತೆಯನ್ನು ಪಡೆದುಕೊಳ್ಳಬಹುದು.

BMW S1000RR

BMW S1000RR

5. ಬಿಎಂಡಬ್ಲ್ಯು ಎಸ್1000 ಆರ್‌ಆರ್

ಡುಕಾಟಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿರುವ ಬಿಎಂಡಬ್ಲ್ಯು ಎಸ್1000ಆರ್‌ರ್ ಟಾಪ್ 10 ಅತಿ ವೇಗದ ಬೈಕ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬಿಎಂಡಬ್ಲ್ಯು ಎಸ್1000 ಆರ್‌ಆರ್ ಬೈಕ್ ಗಂಟೆಗೆ ಗರಿಷ್ಠ 305 ಕೀ. ಮೀ. ವೇಗತೆಯನ್ನು ನೀಡಲಿದೆ. ಅಲ್ಲದೆ ಈ ಬೈಕ್‌ನಲ್ಲಿ ಉತ್ತಮ ಸೇಫ್ಟಿ ಸೌಲಭ್ಯಗಳನ್ನು ಕೂಡಾ ಆಳವಡಿಸಲಾಗಿದೆ.

MV Agusta F3 Tamburini

MV Agusta F3 Tamburini

4. ಎಂವಿ ಅಗಾಸ್ಟ ಎಫ್3 ಟ್ಯಾಂಬುರಿನಿ

ಎಂವಿ ಅಗಾಸ್ಟ ಯುರೋಪ್‌ನ ಮತ್ತೊಂದು ಪ್ರಮುಖ ದ್ವಿಚಕ್ರ ತಯಾರಕ ಕಂಪನಿಯಾಗಿದೆ. ಪ್ರಸ್ತುತ ಎಫ್3 ತಂಬುರಿನಿ ಬೈಕ್ ನಾಲ್ಕನೇ ಸ್ಥಾನದಲ್ಲಿದ್ದು, ಇತ್ತೀಚೆಗಿನ ಬೈಕ್‌ಗಳ ಪೈಕಿ ಅತ್ಯಾರ್ಷಕ ವಿನ್ಯಾಸವನ್ನು ಹೊಂದಿದೆ ಬೈಕ್ ಎಂಬ ಗೌರವಕ್ಕೆ ಪಾತ್ರವಾಗಿದೆ. ಎಫ್3 ಟ್ಯಾಂಬುರಿನಿ ಗಂಟೆಗೆ ಗರಿಷ್ಠ 307 ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿದೆ.

3. MV Agusta F4 R312

3. MV Agusta F4 R312

3. ಎಂವಿ ಅಗಾಸ್ಟ ಎಫ್4 ಆರ್312

ನಾವೀಗ ವಿಶ್ವದ ಅತಿ ವೇಗದ ಬೈಕ್‌ಗಳ ಪೈಕಿ ಟಾಪ್ 3ರ ಹಂತಕ್ಕೆ ಬಂದು ತಲುಪಿದ್ದೇವೆ. ಗಂಟೆಗೆ ಗರಿಷ್ಠ 314 ಕೀ. ಮೀ ವೇಗತೆಯನ್ನು ನೀಡುವ ಎಂವಿ ಅಗಾಸ್ಟ ಎಫ್4 ಆರ್312 ಬೈಕ್ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

Suzuki Hayabusa

Suzuki Hayabusa

2. ಸುಜುಕಿ ಹಯಾಬುಸ

ಸುಜುಕಿ ಹಯಾಬುಸ ಬಗ್ಗೆ ಹೆಚ್ಚೇನೂ ಹೇಳುವ ಅಗತ್ಯವಿಲ್ಲ. ಯಾಕೆಂದರೆ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ಸುಜುಕಿ ಹಯಾಬುಸ ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳ ಬಳಿಯಿದೆ. ಹಿಂದೊಮ್ಮೆ ನಂಬರ್ ವನ್ ಸ್ಥಾನ ಪಡೆದಿದ್ದ ಹಯಾಬುಸ ಪ್ರಸ್ತುತ ಎರಡನೇ ಸ್ಥಾನಕ್ಕೆ ತೃಪ್ತಿಪಡುವಂತಾಗಿದೆ. ಸುಜುಕಿ ಹಯಾಬುಸ ಗಂಟೆಗೆ ಗರಿಷ್ಠ 320 ಕೀ.ಮೀ ವೇಗತೆ ನೀಡಬಲ್ಲದು. ಜಾನ್ ಅಬ್ರಹಾಂ ಸೇರಿದಂತೆ ಅನೇಕ ಸೆಲೆಬ್ರಿಟಿಗಳ ಫೇವರಿಟ್ ಬೈಕ್ ಇದಾಗಿದೆ.

MTT Turbine Superbike Y2K

MTT Turbine Superbike Y2K

1. ಎಂಟಿಟಿ ಟರ್ಬೈನ್ ಸೂಪರ್‌ಬೈಕ್ ವೈ2ಕೆ

ಇಲ್ಲಿದೆ ನೋಡಿ ವಿಶ್ವದ ಅತಿ ವೇಗದ ಬೈಕ್‌ ಎಂಟಿಟಿ ಟರ್ಬೈನ್ ಸೂಪರ್‌ಬೈಕ್ ವೈ2ಕೆ. ಇತರ ಬೈಕ್‌ಗಳ ಪೈಕಿ ವೈ2ಕೆ ಸಾಂಪ್ರದಾಯಿಕ ವಿನ್ಯಾಸವನ್ನು ಹೊಂದಿಲ್ಲ. ರೋಲ್ಸ್ ರಾಯ್ಸ್ ಹೆಲಿಕಾಪ್ಟರ್ ಎಂಜಿನ್ ಹೊಂದಿರುವ ಎಂಟಿಟಿ ಟರ್ಬೈನ್ ಸೂಪರ್‌ಬೈಕ್ ಅದ್ಭುತ 300 ಬಿಎಚ್‌ಪಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಂತೆಯೇ ಗಂಟೆಗೆ ಗರಿಷ್ಠ 370 ಕೀ.ಮೀ ವೇಗತೆ ನೀಡುವ ಸಾಮರ್ಥ್ಯ ಹೊಂದಿದೆ.

Top 10 Fastest Motorcycles Of The World

ಜಗತ್ತಿನ ಟಾಪ್ 10 ಅತಿ ವೇಗದ ಬೈಕ್

Most Read Articles

Kannada
English summary
Ever wondered about which are the most fastest bikes in the world. Here we are giving a list of top 10 most fastest bikes in the world. Check out most fastest bikes in the world with images.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X