ಟಿವಿಎಸ್ ಹೊಸ ಫೀನಿಕ್ಸ್ ಬೈಕ್ ದಸರಾಕ್ಕೆ ಬರುತ್ತಾ?

2012ರ ದೆಹಲಿ ವಾಹನ ಪ್ರದರ್ಶನದಲ್ಲಿ ಟಿವಿಎಸ್ ಮೋಟರ್ಸ್ ಪ್ರದರ್ಶಿಸಿದ 125 ಸಿಸಿಯ ಕಮ್ಯೂಟರ್ ಬೈಕೊಂದು ದಸರಾ-ದೀಪಾವಳಿ ನಡುವೆ ದೇಶದ ರಸ್ತೆಗೆ ಆಗಮಿಸಲಿದೆ. ಕಂಪನಿಯು ಈ ಬೈಕಿನ ಹೆಸರನ್ನು ಇನ್ನೂ ಬಹಿರಂಗ ಪಡಿಸಿಲ್ಲ. ನೂತನ ರೆಡಿಯೊನ್ ಕಾನ್ಸೆಪ್ಟ್ ಬೈಕಿಗೆ ಫೀನಿಕ್ಸ್ ಎಂಬ ಹೆಸರಿರಲಿದೆ ಎಂದು ವಾಹನೊದ್ಯಮದ ಕೆಲವು ಮೂಲಗಳು ಹೇಳಿವೆ.

ಈಗ ಟಿವಿಎಸ್ ಮೋಟರ್ ಕಂಪನಿಯು ಫ್ಲೇಮ್ 125 ಹೆಸರಿನ ಬೈಕನ್ನು ಮಾರಾಟ ಮಾಡುತ್ತಿದೆ. ಕಂಪನಿಯು 125 ಸಿಸಿ ಸೆಗ್ಮೆಂಟಿನಲ್ಲಿ ಇನ್ನೊಂದು ಬೈಕ್ ಪರಿಚಯಿಸುವುದರಿಂದ ವಿಭಿನ್ನ ದರ ಆಯ್ಕೆಗಳಲ್ಲಿ 125 ಸಿಸಿ ಸೆಗ್ಮೆಂಟಿನಲ್ಲಿ ಬೈಕ್ ಖರೀದಿಸಲು ಗ್ರಾಹಕರಿಗೆ ಹೆಚ್ಚಿನ ಆಯ್ಕೆ ದೊರಕಲಿದೆ.

ನೂತನ ಪೊನಿಕ್ಸ್ 125 ಸಿಸಿ ಕಮ್ಯೂಟರ್ ಬೈಕಿನ ದರ ಫ್ಲೇಮ್ 125 ಬೈಕಿಗಿಂಗ ಕಡಿಮೆ ಇರುವ ನಿರೀಕ್ಷೆಯಿದೆ. ನೂತನ ಬೈಕ್ 3 ಕವಾಟದ ನಾಲ್ಕು ಸ್ಟ್ರೋಕ್ ಎಂಜಿನ್ ಹೊಂದಿರುವ ನಿರೀಕ್ಷೆಯಿದೆ. ಕಂಪನಿಯು ಫ್ಲೇಮ್ ಬೈಕಿನ ಎಂಜಿನನ್ನೇ ಕೊಂಚ ಪರಿಷ್ಕರಿಸಿ ನೂತನ ಬೈಕಿಗೆ ಅಳವಡಿಸುವ ನಿರೀಕ್ಷೆಯಿದೆ.

ಹೊಸ ಟಿವಿಎಸ್ ಬೈಕ್ ಹೋಂಡಾ ಶೈನ್, ಬಜಾಜ್ ಡಿಸ್ಕವರ್ ಮುಂತಾದ ಬೈಕುಗಳೊಂದಿಗೆ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸುವ ನಿರೀಕ್ಷೆಯಿದೆ. ಹೋಂಡಾ ಕಂಪನಿಯು ಇತ್ತೀಚೆಗೆ ಡ್ರೀಮ್ ಯುಗವೆಂಬ ಕಮ್ಯೂಟರ್ ಬೈಕ್ ಪರಿಚಯಿಸಿತ್ತು. ಇದು ನೂತನ ಟಿವಿಎಸ್ ಬೈಕಿಗೆ ನೇರ ಸ್ಪರ್ಧೆ ಒಡ್ಡಲಿದೆ.

ಟಿವಿಎಸ್ ಮೋಟರ್ಸ್ ಕಂಪನಿಯು 125 ಸಿಸಿಯ ಬೈಕ್ ಮಾತ್ರವಲ್ಲದೇ 125 ಸಿಸಿಯ ಆಟೋಮ್ಯಾಟಿಕ್ ಸ್ಕೂಟರೊಂದನ್ನು ಕೂಡ ಪರಿಚಯಿಸಲಿದೆ. ಈಗಾಗಲೇ ವೆಗೊ ಸ್ಕೂಟರ್ ದೇಶದ ರಸ್ತೆಯಲ್ಲಿ ಜನಪ್ರಿಯವಾಗಿದೆ.

More from DriveSpark

Article Published On: Tuesday, August 28, 2012, 10:13 [IST]
English summary
Upcoming Bikes: TVS Motors Will Launch new 125 cc phoenix bike(Radeon concept) on upcoming dushera diwali festival season.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+