ಯಮಹಾ ಎಫ್‌ಝಡ್-ಎಸ್ ಪರಿಷ್ಕೃತ ಬೈಕ್ ರಸ್ತೆಗೆ

ಯಮಹಾ ಫ್ಯಾಮಿಲಿಯ ಎಫ್‌ಝಡ್ ಸರಣಿಯ ಬೈಕ್ ಪ್ರಿಯರು ಖುಷಿಪಡಬಹುದಾದ ಸುದ್ದಿಯೊಂದು ಇಲ್ಲಿದೆ. ಜನಪ್ರಿಯ ಎಫ್‌ಝಡ್ ಸೀರಿಸ್ ಬೈಕನ್ನು ಸಣ್ಣಪುಟ್ಟ ಮಾರ್ಪಾಡಿನೊಂದಿಗೆ ಕಂಪನಿಯು ಅನಾವರಣ ಮಾಡಿದೆ.

ಎಫ್‌ಝಡ್-ಎಸ್ ಬೈಕಿಗೆ ನೂತನ ಆರೆಂಜ್ ಬಣ್ಣವನ್ನು ನೀಡಲಾಗಿದ್ದು, ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಇನ್ಮುಂದೆ ಎಫ್‌ಝಡ್-ಎಸ್ ಬೈಕನ್ನು ನಾಲ್ಕು ಬಣ್ಣದ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ. ಕಪ್ಪು ಸೈಬರ್ ಹಸಿರು ಬಣ್ಣ, ಸನ್ಸೆಟ್ ಕೆಂಪು, ಬಿಳಿ ಮತ್ತು ಪಿಯೆರಿ ಆರೆಂಜ್ ಬಣ್ಣಗಳಲ್ಲಿ ದೊರಕುತ್ತದೆ. ಪಿಯೆರಿ ಆರೆಂಜ್ ನೂತನ ಆವೃತ್ತಿಯಾಗಿದೆ.

ಇದರೊಂದಿಗೆ ಎಫ್ ಝಡ್ ಸೀರಿಸ್ ಬೈಕಿನ ಹಿಂಬದಿ ಸೀಟನ್ನು ಕೊಂಚ ರೂಪಾಂತರಗೊಳಿಸಲಾಗಿದೆ. ಹಿಂಬದಿ ಸೀಟು ಹೆಚ್ಚು ಆರಾಮದಾಯಕತೆ ಹೊಂದಿಲ್ಲವೆಂಬ ಗ್ರಾಹಕರ ದೂರುಗಳ ಹಿನ್ನಲೆಯಲ್ಲಿ ಸೀಟನ್ನು ಹೆಚ್ಚು ಕಂಫರ್ಟ್ ಮಾಡಲಾಗಿದೆ.

ಇದರೊಂದಿಗೆ ಗ್ರಾಬ್ ರೈಲ್(ಸೀಟಿನ ಜೊತೆಗಿರುವ ಕಬ್ಬಿಣದ ಹಿಡಿ) ಅಳವಡಿಸಲಾಗಿದೆ. ನೂತನ ಗ್ರಾಬ್ ರೈಲ್ ಕುರಿತು ಕಂಪನಿಯು ಹೀಗೆ ಹೇಳಿದೆ "ಗ್ರಾಬ್ ರೈಲ್ ಸವಾರನ ಹಿಂಭಾಗಕ್ಕೆ ಬೆಂಬಲ ನೀಡಲು ಮಾತ್ರವಲ್ಲದೇ, ಹಿಂಬದಿ ಸವಾರನು ಸುರಕ್ಷಿತವಾಗಿ ಹಿಡಿದುಕೊಳ್ಳಲು ನೆರವಾಗುತ್ತದೆ" ಎಂದಿದೆ.

ಇದರೊಂದಿಗೆ ಹೊಸದಾಗಿ ಚೈನ್ ಕವರ್ ಅಳವಡಿಸಲಾಗಿದೆ. ಆಸಕ್ತಿದಾಯಕ ವಿಷಯವೆಂದರೆ ನೂತನ ಯಮಹಾ ಎಫ್‌ಝಡ್-ಎಸ್ ಬೈಕಿನ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.(ಕನ್ನಡ ಡ್ರೈವ್‌ಸ್ಪಾರ್ಕ್)

More from DriveSpark

Article Published On: Thursday, April 26, 2012, 11:35 [IST]
English summary
Japanese motorcycle manufacturer Yamaha has given a few upgrades to its popular FZ series. The FZ series bikes including the FZ 16 has got a a new paint shade - Fiery Orange.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+