ವಿದ್ಯಾರ್ಥಿಗಳಿಗೆ ಯಮಹಾ ಸುರಕ್ಷತೆಯ ಚಾಲನೆ ಪಾಠ

ಗುರ್ ಗಾಂವ್, ಆ 31: ದೇಶದ ಭವಿಷ್ಯದ ಯುವ ಸಮೂಹಕ್ಕೆ ಸುರಕ್ಷತೆಯ ವಾಹನ ಸವಾರಿಯ ತಂತ್ರಗಳನ್ನು ತಿಳಿಸಿಕೊಡಲು ಇಂಡಿಯಾ ಯಮಹಾ ಮೋಟರ್ ವಿಶೇಷ ತರಬೇತಿ ಕಾರ್ಯಕ್ರಮವೊಂದನ್ನು ನಡೆಸಿಕೊಟ್ಟಿತ್ತು. ಗುರ್ ಗಾಂವ್ ನ ರಿಯಾನ್ ಇಂಟರ್ ನ್ಯಾಷನಲ್ ಸ್ಕೂಲಿನ 8ರಿಂದ 13ರವರೆಗಿನ ವಯಸ್ಸಿನ ಸುಮಾರು 100 ವಿದ್ಯಾರ್ಥಿಗಳು ಯಮಹಾ ಆಯೋಜಿಸಿದ್ದ "ಕಿಡ್ಸ್ ಯಮಹಾ ಸೇಫ್ ರೈಡಿಂಗ್ ಸೈನ್ಸ್ ಪ್ರೋಗ್ರಾಮ್"ನಲ್ಲಿ ಭಾಗವಹಿಸಿದ್ದರು.

ಈ ಕಾರ್ಯಕ್ರಮವು ಥಿಯರಿ ಮತ್ತು ಪ್ರಾಕ್ಟಿಕಲ್ ಎಂಬ ಎರಡು ಅವಧಿಗಳನ್ನು ಹೊಂದಿತ್ತು. ಕ್ಲಾಸ್ ರೂಂನಲ್ಲಿ ಸುರಕ್ಷತೆಯ ಟೆಕ್ನಿಕ್ ಗಳನ್ನು ಕಲಿಸಲಾಯಿತು. ನಂತರ ವಿದ್ಯಾರ್ಥಿಗಳಿಗೆ ಯಮಹಾ ಟಿಟಿಆರ್ ಮತ್ತು ಪಿಡಬ್ಲ್ಯು 50 ಮಕ್ಕಳ ಬೈಕುಗಳನ್ನು ನೀಡಿ ಸುರಕ್ಷಿತವಾಗಿ ರೈಡ್ ಮಾಡಲು ಹೇಳಿ ಕೊಡಲಾಯಿತು.

ಇಂಡಿಯಾ ಯಮಹಾ ಮೋಟರ್ ಕಂಪನಿಯ ಪರಿಣಿತ ತರಬೇತುದಾರರು ಮಕ್ಕಳಿಗೆ ವಾಹನ ಸಲಹೆಗಳನ್ನು ನೀಡಿದ್ದಾರೆ. ನಿಮಗೂ ವಾಹನ ಸಲಹೆಗಳು ಬೇಕಿದ್ದರೆ ಈ ಲಿಂಕ್ ಪ್ರವೇಶಿಸಬಹುದು.

ಯುವಜನತೆಯಲ್ಲಿ ಸುರಕ್ಷತೆಯ ಸವಾರಿ ಕುರಿತು ಅರಿವು ಮೂಡಿಸಲು ಪ್ರತಿವರ್ಷ ಯಮಹಾ ಮೋಟರ್ ಈ ಕಾರ್ಯಕ್ರಮವನ್ನು ಆಯೋಜಿಸುತ್ತ ಬಂದಿದೆ. "ರಸ್ತೆಯಲ್ಲಿ ಅಪಘಾತ ರಹಿತ ಪರಿಸರ ನಿರ್ಮಿಸುವುದು ಈ ಕಾರ್ಯಕ್ರಮದ ಧ್ಯೇಯ" ಎಂದು ಕಂಪನಿಯ ನಿರ್ದೇಶಕ ಜುನ್ ನಕಟ ಹೇಳಿದ್ದಾರೆ.

Article Published On: Friday, August 31, 2012, 9:52 [IST]
English summary
In a bid to cover the length and breadth of the country with its successful Safe Riding Science program and instill safe riding habits among today’s youth, India Yamaha Motor today organized its Kidz Yamaha Safe Riding Science program in Gurgaon for the school children of the city.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+