ಹುರ್ರೆ, ಯಮಹಾ 250 ಸಿಸಿ ಬೈಕು ಬರುತ್ತಂತೆ!

ದೇಶದ ಬೈಕ್ ಪ್ರೇಮಿಗಳು ಹೆಚ್ಚು ಹೆಚ್ಚು ಸಿಸಿಯ ಬೈಕುಗಳನ್ನು ಇಷ್ಟಪಡುತ್ತಿದ್ದಾರೆ. ಪರಿಣಾಮವಾಗಿ 250 ಸಿಸಿ ಬೈಕುಗಳಿಗೆ ಬೇಡಿಕೆ ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ. ಇತ್ತೀಚೆಗೆ ಬಂದ ಕೆಟಿಎಂ ಡ್ಯೂಕ್ 200 ಮತ್ತು ಬಜಾಜ್ ಪಲ್ಸರ್ 200ಎನ್ಎಸ್ ಬೈಕುಗಳಿಗೆ ಬೊಂಬಾಟ್ ಬೇಡಿಕೆ ವ್ಯಕ್ತವಾಗಿದೆ.

ಇದೀಗ ಯಮಹಾ ಕೂಡ 250 ಸಿಸಿ ಸೆಗ್ಮೆಂಟಿಗೆ ಲಗ್ಗೆಯಿಡಲು ಪ್ಲಾನ್ ಮಾಡುತ್ತಿದೆ ಎಂದು ಇಂಡಿಯನ್ ಕಾರ್ ಬೈಕ್ಸ್ ಸ್ನೇಹಿತರು ವರದಿ ಮಾಡಿದ್ದಾರೆ. ಕಂಪನಿಯು ಯಮಹಾ ಆರ್15 ಮತ್ತು ಎಫ್ ಝಡ್ 16 ಸರಣಿಗಳಲ್ಲಿ ನೂತನ 250 ಸಿಸಿ ಬೈಕುಗಳನ್ನು ಪರಿಚಯಿಸುವ ನಿರೀಕ್ಷೆಯಿದೆ.

ಕಂಪನಿಯು ನಾಲ್ಕು ವರ್ಷಗಳ ಹಿಂದೆ ಪ್ರಪ್ರಥಮ ಬಾರಿಗೆ ಆರ್15 ಬೈಕ್ ಪರಿಚಯಿಸಿತ್ತು. ಇದೀಗ ದೇಶದ 150 ಸಿಸಿ ಸೆಗ್ಮೆಂಟಿನಲ್ಲಿ ಆರ್15 ಜನಪ್ರಿಯ ಬೈಕಾಗಿದೆ. ಹೀಗಾಗಿ ಕಂಪನಿಯು ಮುಂದಿನ ದಿನಗಳಲ್ಲಿ ಆರ್ ಸರಣಿ ಅಥವಾ ಎಫ್ ಝಡ್ ಸರಣಿಯಲ್ಲಿ 250 ಸಿಸಿ ಬೈಕ್ ಹೊರತರುವ ನಿರೀಕ್ಷೆಯಿದೆ.

ದೇಶದಲ್ಲಿ 250 ಸಿಸಿ ಬೈಕುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಕವಾಸಕಿ ನಿಂಜಾ 250ಆರ್, ಹ್ಯೊಸಂಗ್ ಜಿಟಿ 250ಆರ್ ಮತ್ತು ಹೋಂಡಾ ಸಿಬಿಆರ್250ಆರ್ ಬೈಕುಗಳಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ವಿಶೇಷವೆಂದರೆ ಈ ಮೂರು ಬೈಕುಗಳನ್ನು ದೇಶದಲ್ಲಿಯೇ ಉತ್ಪಾದಿಸಲಾಗುತ್ತದೆ.

ಮುಂದಿನ ದಿನಗಳಲ್ಲಿ ದೇಶದಲ್ಲಿ 250ಸಿಸಿಗಿಂತ ಹೆಚ್ಚು ಶಕ್ತಿಶಾಲಿ ಬೈಕುಗಳಿಗೆ ಬೇಡಿಕೆ ಹೆಚ್ಚಾಗಲಿದೆ.

Article Published On: Wednesday, July 25, 2012, 12:48 [IST]
English summary
Yamaha Planning to launch 250 cc bike in India. Yamaha India new 250cc bike will come R or FZ Series. Yamaha will enter Kawasaki Ninja 250R, Hyosung GT250R and Honda CBR250R Segment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+