ಯಮಹಾ ರೇ ಸ್ಕೂಟರ್ ರಸ್ತೆಗೆ, ದರ 46 ಸಾವ್ರ
ಬಹುನಿರೀಕ್ಷಿತ ಯಮಹಾ ರೇ ಸ್ಕೂಟರ್ ಪರಿಚಯಿಸುವ ಮೂಲಕ ಇಂಡಿಯಾ ಯಮಹಾ ಮೋಟರ್ ಕಂಪನಿಯು ದೇಶದ ಸ್ಕೂಟರ್ ಸೆಗ್ಮೆಂಟಿಗೆ ಪ್ರವೇಶಿಸಿದೆ. ನೂತನ ಯಮಹಾ ರೇ ಸ್ಕೂಟರಿನ ಆರಂಭಿಕ ದರ 46 ಸಾವಿರ ರುಪಾಯಿ. ಇದು ದೆಹಲಿ ಎಕ್ಸ್ ಶೋರೂಂ ದರ.
ಹೈದರಾಬಾದಿನಲ್ಲಿ ನಡೆದ ಸುಂದರ ಕಾರ್ಯಕ್ರಮದಲ್ಲಿ ಬ್ರಾಂಡ್ ಅಂಬಾಸಡರ್ ದೀಪಿಕಾ ಪಡುಕೋಣೆ ಮತ್ತು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಹಿರೊಯುಕಿ ಸುಜುಕಿ ನೂತನ ಸ್ಕೂಟರನ್ನು ಬಿಡುಗಡೆ ಮಾಡಿದ್ದಾರೆ.
ನೂತನ ಯಮಹಾ ರೇ ಸ್ಕೂಟರ್ 113 ಸಿಸಿ ಎಂಜಿನ್ ಹೊಂದಿದೆ. ಇದು ಸುಮಾರು 61 ಕಿ.ಮೀ. ಮೈಲೇಜ್ ನೀಡುತ್ತದೆ ಎಂದು ಕಂಪನಿ ಪ್ರತಿಪಾದಿಸಿದೆ. ಇದು 113 ಸಿಸಿ ಎಂಜಿನ್ ಹೊಂದಿದ್ದು, 7,500 ಆವರ್ತನಕ್ಕೆ 7.1 ಪಿಎಸ್ ಪವರ್ ಮತ್ತು 5 ಸಾವಿರ ಆವರ್ತನಕ್ಕೆ 8.1 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.
ಯಮಹಾ ರೇ ಸ್ಕೂಟರಿಗೆ ಕಂಪನಿಯು 2 ವರ್ಷ/24 ಸಾವಿರ ಕಿ.ಮೀ. ವಾರೆಂಟಿ ನೀಡಿದೆ. ನೂತನ ಯಮಹಾ ರೇ ಸ್ಕೂಟರಿನ ಮೂಲಕ ದೇಶದಲ್ಲಿ ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಳ್ಳುವ ಆಶಯವನ್ನು ಕಂಪನಿ ವ್ಯಕ್ತಪಡಿಸಿದೆ.
ಕಂಪನಿಯು 2016ಕ್ಕೆ ಮಾರುಕಟ್ಟೆ ಪಾಲನ್ನು ಶೇಕಡ 20ಕ್ಕೆ ತಲುಪಿಸುವ ಗುರಿ ಹೊಂದಿದೆ. ಕಂಪನಿಯು ದೇಶದ ತರುಣ ತರುಣಿಯರನ್ನು ಗಮನದಲ್ಲಿಟ್ಟುಕೊಂಡು ನೂತನ ಸ್ಕೂಟರ್ ಪರಿಚಯಿದೆ.
ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್, ಹೋಂಡಾ ಡಿಯೊ, ಹೀರೊ ಪ್ಲೆಷರ್ ಮತ್ತು ಮಹೀಂದ್ರ ರೊಡಿಯೊ ಆರ್ ಝಡ್ ಸ್ಕೂಟರುಗಳೊಂದಿಗೆ ಮಾರುಕಟ್ಟೆಯಲ್ಲಿ ಯಮಹಾ ರೇ ಪೈಪೋಟಿ ನಡೆಸಲಿದೆ.


Click it and Unblock the Notifications









