ಸ್ಕೂಟರ್ ವಿಮರ್ಶೆ: ಯಮಹಾ ರೇ ಚಿತ್ರಕಥೆ
ಯಮಹಾ ಫ್ಯಾಕ್ಟರಿಯಿಂದ ಮೊದಲ ಸ್ಕೂಟರ್ ದೇಶದ ರಸ್ತೆಗೆ ಆಗಮಿಸಿದೆ. ಇದರ ಆರಂಭಿಕ ಎಕ್ಸ್ ಶೋರೂಂ ದರ 46 ಸಾವಿರ ರು. ದೇಶದ ಯುವಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ನೂತನ ಸ್ಕೂಟರನ್ನು ಕಂಪನಿಯು ಅನಾವರಣ ಮಾಡಿದೆ.
ಯಮಹಾ ರೇ ಸ್ಕೂಟರ್ 113 ಸಿಸಿಯ ಎಂಜಿನ್ ಹೊಂದಿದೆ. ಇದು 7,500 ಆವರ್ತನಕ್ಕೆ 7.1 ಪಿಎಸ್ ಪವರ್ ಮತ್ತು 5 ಸಾವಿರ ಆವರ್ತನಕ್ಕೆ 8.1 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಯಮಹಾ ರೇ ಸ್ಕೂಟರಿನ ಕುರಿತು ಹೆಚ್ಚಿನ ಮಾಹಿತಿಗೆ ಚಿತ್ರಗಳನ್ನು ಕ್ಲಿಕ್ ಮಾಡಿರಿ.
ಯಮಹಾ ರೇ ಮೈಲೇಜ್ ಸಹ ಆಕರ್ಷಕವಾಗಿದೆ. ಇದು ಪ್ರತಿಲೀಟರಿಗೆ ಸುಮಾರು 61 ಕಿ.ಮೀ. ಮೈಲೇಜ್ ನೀಡುತ್ತದೆ ಎಂದು ಯಮಹಾ ಪ್ರತಿಪಾದಿಸಿದೆ. ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್, ಹೋಂಡಾ ಡಿಯೊ, ಹೀರೊ ಪ್ಲೆಷರ್ ಮತ್ತು ಮಹೀಂದ್ರ ರೊಡಿಯೊ ಆರ್ ಝಡ್ ಸ್ಕೂಟರುಗಳಿಗೆ ಯಮಹಾ ರೇ ಪೈಪೋಟಿ ನೀಡಲಿದೆ.
ಅಲಾಯ್ ವೀಲ್ ಹೊಂದಿರುವ ಯಮಹಾ ರೇ ಸ್ಕೂಟರ್ ಎಲೆಕ್ಟ್ರಿಕ್ ಸ್ಟಾರ್ಟ್ ಹೊಂದಿದೆ.

ಮೈಲೇಜ್
ಯಮಹಾ ರೇ ಸ್ಕೂಟರ್ ಮೈಲೇಜ್ ಪ್ರತಿಲೀಟರಿಗೆ 61 ಕಿ.ಮೀ.

ವಿಶೇಷತೆ
ರೇ ಸ್ಕೂಟರ್ ಎಲೆಕ್ಟಿಕ್ ಸ್ಟಾರ್ಟ್ ಹೊಂದಿದೆ. ಇದು ಅಲಾಯ್ ವೀಲ್ ಹೊಂದಿರುವ ಸ್ಕೂಟರ್.

ಸಿಸಿ ಎಷ್ಟು?
ಯಮಹಾ ರೇ ಸ್ಕೂಟರ್ 113ಸಿಸಿಯ ಎಂಜಿನ್ ಹೊಂದಿದೆ.

ಸ್ಕೂಟರ್ ಪರವಾಗಿಲ್ಲ
ಯಮಹಾ ರೇ ಸ್ಕೂಟರ್ ಅತ್ಯುತ್ತಮ ಆಕ್ಸಿಲರೇಷನ್. ಕಾರ್ಯಕ್ಷಮತೆ ನೀಡುತ್ತದೆ. ಪ್ರತಿಸ್ಪರ್ಧಿ ಸ್ಕೂಟರುಗಳಿಗೆ ಹೋಲಿಸಿದರೆ ಯಮಹಾ ಪರವಾಗಿಲ್ಲ.

ದೀಪಿಕಾ ಮೋಡಿ
ರೇ ಸ್ಕೂಟರಿಗೆ ಬಾಲಿವುಡ್ ಚೆಲುವೆ ದೀಪಿಕಾ ಪಡುಕೋಣೆ ಬ್ರಾಂಡ್ ರಾಯಭಾರಿ.


Click it and Unblock the Notifications








