ಇಪ್ಪತ್ತೆಂಟು ಸಾವ್ರ ರುಪಾಯಿಗೆ ಯಮಹಾ ಬೈಕ್!
ಜಗತ್ತಿನ ಅಗ್ಗದ ಬೈಕೊಂದನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಯಮಹಾ ಮೋಟರ್ಸ್ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಮುಖವಾಗಿ ಆಫ್ರಿಕಾ ಮತ್ತು ಭಾರತದ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಈ ಬೈಕನ್ನು ಅಭಿವೃದ್ಧಿಪಡಿಸುತ್ತಿದೆ. ಈ ದೇಶಗಳಲ್ಲಿ ಅಗ್ಗದ ಬೈಕುಗಳಿಗೆ ಅತ್ಯಧಿಕ ಬೇಡಿಕೆಯಿರುವುದಾಗಿ ಕಂಪನಿ ಹೇಳಿದೆ.
ದೇಶದಲ್ಲೀಗ 36 ಸಾವಿರ ರುಪಾಯಿಗಿಂತ ಕಡಿಮೆ ದರದ ಬೈಕ್ ದೊರಕುತ್ತಿಲ್ಲ. ಹೀರೊ ಮೊಟೊಕಾರ್ಪ್ ಬೈಕ್ ದರ ಸುಮಾರು 36,300 ರುಪಾಯಿ ಇದೆ. ಆದರೆ ಯಮಹಾ ಕಂಪನಿಯ ನೂತನ ಬೈಕ್ ದರ ಸುಮಾರು 500 ಡಾಲರ್ ಅಂದ್ರೆ 27,500 ರುಪಾಯಿ ಆಸುಪಾಸಿನಲ್ಲಿರಲಿದೆಯಂತೆ!
ಜೊತೆಗೆ ಯಮಹಾ ಕಂಪನಿಯು ಭಾರತದಿಂದ ಈ ಬೈಕನ್ನು ರಫ್ತು ಮಾಡಲು ಯೋಜಿಸಿದೆ. ಅಂದರೆ ಕಂಪನಿಯು ಇಲ್ಲೇ ಈ ಅಗ್ಗದ ಬೈಕ್ ಉತ್ಪಾದಿಸಲಿದೆ. "ಈಗ ಕಂಪನಿಯು ವೈಬಿಆರ್ 110 ಮತ್ತು ಕ್ರಷ್ ಇತ್ಯಾದಿ ಅಗ್ಗದ ಬೈಕುಗಳನ್ನು ಹೊಂದಿದ್ದೇವೆ. ಆದರೆ ಕಂಪನಿ ನೂತನವಾಗಿ ಅಭಿವೃದ್ಧಿಪಡಿಸುತ್ತಿರುವ ಬೈಕ್ ಸುಮಾರು 500 ಡಾಲರ್ ರುಪಾಯಿ ಇರಲಿದೆ" ಎಂದು ಯಮಹಾ ಮೋಟರ್ಸ್ ಇಂಡಿಯಾ ಸಿಇಒ ಮತ್ತು ಎಂಡಿ ಹಿರೊಯುಕಿ ಸುಜುಕಿ ಹೇಳಿದ್ದಾರೆ.
ಕೆಲವು ತಿಂಗಳ ಹಿಂದೆ ಹೋಂಡಾ ಕಂಪನಿಯು ಡ್ರೀಮ್ ಯುಗವೆಂಬ ಅಗ್ಗದ ಬೈಕ್ ರಸ್ತೆಗಿಳಿಸಿತ್ತು. ಇದರ ಆರಂಭಿಕ ದರ ಸುಮಾರು 44,642 ರುಪಾಯಿ ಇದೆ. ಯಮಹಾ ಕಂಪನಿಯ ಕ್ರಷ್ 110 ಸಿಸಿ ಬೈಕ್ ದರ ಸುಮಾರು 38,365 ರುಪಾಯಿ ಇದೆ.


Click it and Unblock the Notifications
